ಪರಿಸರ ಕುರಿತಾದ ಹಲವು ಆಚರಣೆಗಳು ಒಂದು ದಿನಕ್ಕೆ ಮಾತ್ರ ಸೀಮಿತವಾಗಿರಲಿ

ಬೀದರ:ಜು.2:ಹಸಿರು ಕೆಟ್ಟ ಪರಿಸರದ ಮಾಲಿನ್ಯವನ್ನು ಹೊಡೆದು ಹಾಕುತ್ತದೆ. ಆದ್ದರಿಂದ ಪ್ರತಿಯೊಬ್ಬರು ಒಂದೊಂದು ಮರವನ್ನು ನೆಡೆಸಿ ಆ ಮರದ ಪಾಲನೆ ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಟ್ನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಪಂಚಾಯಿತಿ ಹಾಗೂ ಗ್ರಾಮಸ್ಥರಿಂದ ನಡೆದ ವನಮಹೋತ್ಸವ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬುದ್ಧಿಜೀವಿಯಾದ ಮನುಷ್ಯ ತನ್ನಂತೆ ಇತರ ಜೀವಿಗಳೂ ಬದುಕುವ ಹಕ್ಕನ್ನು ಹೊಂದಿವೆ ಎಂಬುದನ್ನು ಅರಿತು ವನಮಹೋತ್ಸವದಂತಹ ದಿನಾಚರಣೆಗಳ ಸಂದರ್ಭದಿಂದ ಮೊದಲುಗೊಂಡು ವರ್ಷಪೂರ್ತಿ ಪೂರಕ ವಾತಾವರಣವನ್ನು ನಿರ್ಮಿಸುವ ಪಣ ತೊಡಬೇಕಿದೆ ಎಂದು ಕರೆ ನೀಡಿದರು. ವನಮಹೋತ್ಸವದಂತಹ ಕಾರ್ಯಕ್ರಮದಲ್ಲಿ ಎಷ್ಟು ಗಿಡ ನೆಡುತ್ತೇವೆ ಎಂಬುದಕ್ಕಿಂತಲೂ ಇಂತಹ ಆಚರಣೆಗಳ ಮೂಲಕ ಎಷ್ಟು ಜನರಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುತ್ತೇವೆ ಎಂಬುವುದು ಮುಖ್ಯವಾಗುತ್ತದೆ ಎಂದರು.
ಗ್ರಾಮಸ್ಥರ ನೂತನ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರಿಗೆ ಸನ್ಮಾನಿಸಿದರು ಬಳಿಕ ಗ್ರಾಮದಲ್ಲಿರುವ ಸಮಸ್ಯೆಗಳ ಕುರಿತು ಅಹವಾಲು ನೀಡಿದರು.
ಈ ಸಂದರ್ಭದಲ್ಲಿ ಬಿಇಓ ಅಖೀಲಾಡೇಶ್ವರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ದೇವಪ್ಪ, ಗ್ರಾಪಂ ಅಧ್ಯಕ್ಷೆ ವೈಶಾಲಿ ನವೀನಕುಮಾರ, ಮುಖ್ಯ ಗುರು ವಾಚನಸಿಂಗ್ ರಾಠೋಡ, ಗ್ರಾಮದ ಮುಖಂಡರಾದ ಘಾಳೆಪ್ಪ ಚಟ್ನಳ್ಳಿ, ಶಿವಕುಮಾರ ಸ್ವಾಮಿ, ಅನೀಲಕುಮಾರ ಗುನಳ್ಳಿ, ಶಂಕ್ರೆಪ್ಪ ಬಿರಾದರ, ಸಂತೋಷ ವಕೀಲ, ಸಂತೋಷ ಗ್ರಾಪಂ ಸದಸ್ಯರಾದ ಗುಂಡಮ್ಮ ಶ್ರಿನಿವಾಸ, ವೀರಶೆಟ್ಟಿ ಪಾಟೀಲ ರಾಜರೆಡ್ಡಿ, ನಸೀರ್, ಪರಶುರಾಮ ಗ್ರಾಮಪಂಚಾಯಿತಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.