ಪರಿಸರ ಉಳಿಸಿ ಬೆಳೆಸಿ

ಕೆಜಿಎಫ್,ಜೂ.೬- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರಸಭೆ ವತಿಯಿಂದ ನಗರದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತೆ ಅಂಬಿಕ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು ಮತ್ತು ಮನೆ ಮನೆಗೆ ತೆರಳಿ ಸಸಿಗಳನ್ನು ನೀಡಿ ಗಿಡಗಳನ್ನು ಪೋಷಿಸುವಂತೆ ಕಿವಿ ಮಾತುಗಳನ್ನು ಹೇಳಿದರು.
ಈ ವೇಳೆ ಮಾತನಾಡಿದ ನಗರಸಭೆ ಪೌರಾಯುಕ್ತೆ ಅಂಭಿಕ ಪರಿಸರದ ರಕ್ಷಣೆ ನಮ್ಮೆಲ್ಲರ ಹೊಣೆ ಗಿಡ ಮರ ಬೆಳಸಿ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ ಅದಕ್ಕೆ ಇಂದು ಬದಲಾದ ವಾರವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತಿರುವ ಹವಾಮಾನ ಪ್ರತಿ ಜೂನ್ ತಿಂಗಳಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಮುನ್ನ ನಾವು ಪರಿಸರಕ್ಕೆ ನೀಡಿರುವ ಕೊಡುಗೆ ಎಷ್ಟು ಎಂಬುದನ್ನು ಓಮ್ಮೆ ಯೋಚಿಸಬೇಕು ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಬಹುದು ಎಂದು ಹೇಳಿದರು. ಪರಿಸರದ ಮೇಲೆ ಮಾನವ ಮಾಡುತ್ತಿರುವ ಹಾನಿಯಿಂದ ಅಗುತ್ತಿರುವ ಪರಿಸರದಲ್ಲಿ ಕಂಡು ಬರುತ್ತಿರುವ ವೈಪರಿತ್ಯವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜೂ ೫ ರಂದು ವಿಶ್ವ ಪರಿಸರ ದಿನಾಚರಣೆಯಾಗಿ ಅಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ನಗರಸಭೆ ಸದಸ್ಯರಾದ ವಿಜಿಕುಮಾರ,ಪ್ರವೀಣ್ ,ವೇಣುಗೋಪಾಲ್,ನಂದಕುಮಾರ,ಕೊದಂಡನ್ ,ರಮೇಶ್, ನಗರಸಭೆ ಆರೋಗ್ಯ ನಿರೀಕ್ಷಕರಾದ ಸರಸ್ವತಿ,ಮುರಳಿ ,ಕೃಷ್ಣಮೂರ್ತಿ ಹಾಗೂ ಇತರರು ಹಾಜರಿದ್ದರು.