
ಶಹಾಬಾದ್:ಜು.2:ಪರಿಸರ ಸಂರಕ್ಷಣೆ ಸಮಾಜದಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಪರಿಸರ ಸಂರಕ್ಷಣೆ ಇಂದು ತೀರಾ ಅಗತ್ಯವಾಗಿದೆ ಎಂದು ಬಿವಿಎಮ್ ಶಾಲೆಯ ಮುಖ್ಯಗುರು ಗಂಗಾಧರಪ್ಪ ಅವರು ಹೇಳಿದರು. ಅವರು ಸಮೀಪದ ಮಾಡಬೂಳ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಆವರಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಹಸಿರು ಹೊದಿಕೆಯ ಕ್ರಾಂತಿ ಕಾರ್ಯಕ್ರಮದಡಿ ವನಮಹೋತ್ಸವ ಸಸಿ ನೆಡುವ ಸಪ್ತಾಹ ನನ್ನ ಗಿಡ ನನ್ನ ಹೆಮ್ಮೆ ಯೋಜನೆಯಡಿಯಲ್ಲಿ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಸರ ಉಳಿಸಿ, ಬೆಳೆಸಿ ಸಂರಕ್ಷಿಸಬೇಕು ಎಂಬ ಸಂಕಲ್ಪ ಮಾಡಬೇಕು. ಪರಿಸರ ರಕ್ಷಣೆ ನಮ್ಮ ಮನೆಯಿಂದ ಅಲ್ಲ ನಮ್ಮ ಮನಸ್ಸಿನಿಂದಲೇ ಪ್ರಾರಂಭವಾಗಲಿ. ಪರಿಸರ ಅವಸಾನದ ಅಂಚಿನಲ್ಲಿದ್ದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬಹಳ ಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಆರತಿ ಸಾತ್ಯಾಳ ಅವರು ಮಾತನಾಡುತ್ತ, ಪರಿಸರದ ಬಗ್ಗೆ ಎಲ್ಲರಲ್ಲಿ ಕಾಳಜಿ ಮೂಡಬೇಕು, ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದಂದು ಒಂದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಸಂಘ ಸಂಸ್ಥೆಯವರು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ವಲಯ ಅರಣ್ಯಧಿಕಾರಿ ರಾಮು ರಾಠೋಡ, ಶರಣಬಸು, ಪುಷ್ಪಾ ಗಂಗಾಧರಪ್ಪ, ಸುಧಾರಾಣಿ ಚವ್ಹಾಣ್, ಪ್ರದೀಪ, ಭಾರ್ಗವ, ಚರ್ತುವಿ, ಸಿದ್ಧಾರ್ಥ ಇತರರು ಪಾಲ್ಗೊಂಡಿದರು.
ಪ್ರತಿಯೊಬ್ಬರು ಗಿಡ ಬೆಳೆಸಿ ಪರಿಸರ ಕಾಪಾಡುವ ಮೂಲಕ ಮುಂದಿನ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗೆ ನಾಂದಿ ಹಾಡಬೇಕು, ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಪರಿಸರದ ರಕ್ಷಣೆಯ ಬಗ್ಗೆ ಮಕ್ಕಳಿಲಗೆ ತಿಳಿಹೇಳುವ ಮೂಲಕ ಅವರಲ್ಲಿ ಪರಿಸರ ಪ್ರೇಮ ಬೆಳೆಸುವ ಕಾರ್ಯಕ್ಕೆ ಪ್ರಜ್ಞಾವಂತ ಸಮುದಾಯ ಮುಂದಾಗಬೇಕಿದೆ.
ಸುಧಾರಾಣಿ ಚವ್ಹಾಣ್ (ಶಿಕ್ಷಕಿ ಶಹಾಬಾದ)