ಹರಿಹರ ಜೂ 14:- ಮನೆಗೊಂದು ಮರ ಊರಿಗೊಂದು ವನ ಎಂಬಂತೆ, ಊರಿನ ಪರಿಸರ ಅಂದವಾಗಿರಲು ಸರ್ವರೂ ಮನೆಗೊಂದು ಮರ ನೆಟ್ಟು ಬೆಳೆಸುವುದರೊಂದಿಗೆ, ಪರಿಸರ ಉಳಿಸಿಬೆಳೆಸಲು ಮುಂದಾಗಬೇಕೆಂದು ಶಾಸಕ ಬಿ.ಪಿ ಹರೀಶ್ ಕರೆ ನೀಡಿದರು, ಜಿಲ್ಲಾ ಪಂಚಾಯತ ಕಾರ್ಯಾಲಯ ಹಾಗೂ ನಗರಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ಸಾಮಾಜಿಕ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಆವರಣದಲ್ಲಿ, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಮಾರು 6 ಸಾವಿರ ಗಿಡಗಳ ನಾಟಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ ಅವರು ಮಾತನಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತರುವ ಅನೇಕ ಯೋಜನೆಗಳ ಅನುಷ್ಠಾನದ ಸಮಯದಲ್ಲಿ ಅನಿವಾರ್ಯವಾಗಿ ಗಿಡ-ಮರಗಳನ್ನು ತೆಗೆಯಲು ನಿರ್ಧರಿಸಿದ ಸಮಯದಲ್ಲಿ, ಒಂದು ಮರ ಕಡಿದರೆ 10 ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸಕ್ಕೆ ಮುಂದಾದಲ್ಲಿ ಮಾತ್ರ ಪರಿಸರ ಉಳಿಸಲು ಸಾದ್ಯವಾಗಿತ್ತದೆ. ಎಂದು ಶಾಸಕ ಬಿ.ಪಿ ಹರೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು 6 ಸಾವಿರ ಸಸಿಗಳನ್ನು ನೆಟ್ಟು ಬೆಳೆಸುತ್ತಿರುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನಿಯ. ಬಿಸಿ ಟ್ರಸ್ಟ್ನ ಸಂಸ್ಥಾಪಕರಾದ ಡಾ.ವಿರೇದ್ರ ಹೆಗಡೆಯವರು, ಹಾಗೂ ಶ್ರೀಮತಿ ಹೇಮಾವತಿ ಹೆಗಡೆಯವರಿಂದ ಸ್ಥಾಪಿತಗೊಂಡಿರುವ ಸ್ವ ಸಹಾಯ ಸಂಘಗಳು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಅನೇಕ ಬಡವರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿರುವುದು ಎಲ್ಲರೂ ಮೆಚ್ಚುವಂಥಹ ಕಾರ್ಯಾವಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ ಅವರ ಕನಸನ್ನು ನನಸು ಮಾಡುವ ಕಾರ್ಯಗಳಲ್ಲಿ ಇದೊಂದಾಗಿದೆ ಎಂದರೆ ತಪ್ಪಾಗಲಾರದೆಂದು ಶಾಸಕ ಬಿ.ಪಿ ಹರೀಶ್ ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಸರ್ಕಾರದ ಹಲವಾರು ಯೋಜನೆಗಳ ಅನುಷ್ಠಾನದ ನೆಪದಲ್ಲಿ ಹಾಗೂ ಅನೇಕ ಕಾರಣಗಳಿಂದ ಇಂದು ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತದೆ. ಗಿಡ-ಮರಗಳು ನಸಿಸುತ್ತಿರುವುದರಿಂದ, ಕೈಗಾರಿಕೆಗಳು ಹೊರಸೂಸುತ್ತಿರುವ ವಿಷಾನಿಲ್ಯ ಗಾಳಿಯಲ್ಲಿ ಮಿಶ್ರಣಗೊಳ್ಳುವುದರಿಂದ, ಹೆಚ್ಚುಗಿರುವ ಬಿಸಿಲಿನ ಪ್ರಕರತೆಯಿಂದ ಪರಿಸರ ಹಾಳಾಗಿದೆ. ದಿನದಿಂದ ದಿನಕ್ಕೆ ಹಾಳಾಗುತ್ತಿರುವ ಪರಿಸರವನ್ನು ರಕ್ಷಿಸಲು ಹೆಚ್ಚು-ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ರದುರ್ಗ ಜಿಲ್ಲಾ ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ ಮಾತನಾಡಿ, ಶ್ರೀಕ್ಷೇತ್ರ ಯೊಜನೆಯಿಂದ ರಾಜ್ಯದ ನಗರ ಹಾಗೂ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿನ ಸುಮಾರು 460 ಕೆರೆಗಳನಲ್ಲಿನ ಊಳನ್ನು ತೆಗೆದು ಅಭಿವೃದ್ಧಿಪಡಿಸಿದ್ದಲ್ಲದೆ, ಕರೆಯ ಅಂಗಳದಲ್ಲಿ ಗಿಡಮರಗಳನ್ನು ಬೆಳೆಸಿ ಪರಿಸರ ಉಳಿಸಲು ಸಾರ್ಥಕ ಸೇವೆ ಸಲ್ಲಿಸಿದ್ದೆವೆಂದು ತಿಳಿಸಿದರು.ನಗರಸಭೆ ಅಧ್ಯಕ್ಷೆ ಶಾಹಿನಾ ದಾದಾಪೀರ್, ತಹಶೀಲ್ದಾರ ಪೃಥ್ವಿ ಸಾನಿಕಂ ಅರಣ್ಯ ಅಧಿಕಾರಿ ಕು.ಶ್ವೇತಾ, ಪೌರಾಯುಕ್ತರಾದ ಬಸವರಾಜ್ ಐಗೂರು, ಹಿರಿಯ ಜಿಲ್ಲಾ ನಿರ್ದೇಶಕರಾದ ವಿ.ವಿಜಯಕುಮಾರ ನಾಗನಾಳ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಹೆಚ್.ಪಿ ಬಸವರಾಜ್ ಕಾರ್ಯಕ್ರಮ ಕುರಿತು ಮಾತನಡಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯೋಜನಾಧಿಕಾರಿ ಗಣಪತಿ ಮಾಳಂಜಿ ನೇತೃತ್ವದಲ್ಲಿ ನಗರದ ಮಹಜೇನಹಳ್ಳಿ ಗ್ರಾಮದೇವತೆ ದೇವಸ್ಥಾನದಿಂದ ಬಿಇಓ ಕಛೇರಿವರೆಗೆ ಪ್ರಮುಖ ಬೀದಿಗಳಲ್ಲಿ ನಗರದ ವಿವಿಧ ಶಾಲೆಗಳ ಮಕ್ಕಳು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ಪರಿಸರ ಜಾಗೃತಿ ಜಾಥಾ ನಡೆಸಿದರು. ಜಾಥಾದಲ್ಲಿ ಭಾಗವಹಿಸಿದ್ದ ಮಕ್ಕಳು ಹಸಿರು ಉಡುಗೆ ತೊಟ್ಟು ಪರಿಸರ ಜಾಗೃತಿ ಮೂಡಿಸಿದರು. ಅಕ್ಷರದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ರಾಮಕೃಷ್ಣ, ಕೆಂಚನಹಳ್ಳಿ ಮಹಾಂತೇಶಪ್ಪ, ನಗರಸಭೆ ಸದಸ್ಯರಾದ ಅಶ್ವಿನಿಕೃಷ್ಣ, ಎಂ.ಆರ್ ಮುಜಾಮಿಲ್ ಬಿಲ್ಲು, ಅಮರಾವತಿ ವಿಜಯಕುಮಾರ, ಆಟೋಹನುಮಂತಪ್ಪ ಇದ್ದರು.