ಪರಿಸರ ಉಳಿಸಲು ವಿದ್ಯಾರ್ಥಿಗಳಿಂದ ಜಾಗೃತಿ


ಸಂಜೆವಾಣಿ ವಾರ್ತೆ
ಸಂಡೂರು: ಅ:6:  ಮನೆಗೊಂದು ಮರಊರಿಗೊಂದು ವನ, ಧ್ಯೇಯ ವಾಕ್ಯದಡಿ-ಪರಿಸರಜಾಗೃತಿ ಹಾಗೂ ಮನೆಗೊಂದು ಸಸಿ ವಿತರಣಾಕಾರ್ಯಕ್ರಮ  ಮಾಡುವ ಮೂಲಕ ಜನರಿಗೆ ಪರಿಸರ ಜಾಗೃತಿಯ ಜೊತೆಗೆ ಅರಣ್ಯದ ಮಹತ್ವವನ್ನು ತಿಳಿಸುವ ಮಹತ್ತರ ಯೋಜನೆ ಇದಾಗಿದೆ ಎಂದು ನಿರ್ದೇಶಕರಾದ ಲಕ್ಷ್ಮಣ ತೋಳಿ ತಿಳಿಸಿದರು.
ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯಅಧ್ಯಯನ ವಿಭಾಗದಿಂದ 2022ನೇ ಸಾಲಿನ ಸಮಾಜಕಾರ್ಯ ಶಿಬಿರವನ್ನು ಸಂಡೂರಿನ ಅಗ್ರಹಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ನಲ್ಲಾಬಂಡೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಾಗೃತಿಯ ಕುರಿತು ಮಾತನಾಡಿದರು.
ಶಿಬಿರದ ವಿವಿಧ ಚಟುವಟಿಕೆಗಳ ಭಾಗವಾಗಿಮನೆಗೊಂದು ಮರಊರಿಗೊಂದು ವನ, ಎಂಬ ಧ್ಯೇಯ ವಾಕ್ಯದಡಿ-ಪರಿಸರಜಾಗೃತಿ ಹಾಗೂ ಮನೆಗೊಂದು ಸಸಿ ವಿತರಣಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಊರಿನಲ್ಲಿ ಬೆಳಿಗ್ಗೆ ಜಾಥಾ ಮೂಲಕಪರಿಸರಜಾಗೃತಿ ಘೋಷವಾಕ್ಯಗಳನ್ನುಕೂಗುತ್ತಾಅರಿವು ಮೂಡಿಸÀಲಾಯಿತು.
ಊರಿನ ಮಧ್ಯಬಾಗಲ್ಲಿ ನಡೆದಕಾರ್ಯಕ್ರಮದಲ್ಲಿಗ್ರಾಮದ ಪ್ರತಿಯೊಂದು ಮನೆಗೆ ನೆಲ್ಲಿ, ನೆರಳೆ, ನುಗ್ಗೆ, ಹಾಗೂ ಮಾವಿನ ಸಸಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿಶಿಬಿರದ ನಿರ್ದೇಶಕರಾದ ಲಕ್ಷ್ಮಣ ತೋಳಿ, ಊರಿನ ಮುಖಂಡರಾದ ಓಬಳೇಶ್ ಹಾಗೂ ಪ್ರಹ್ಲಾದ್‍ಇವರು ಭಾಗವಹಿಸಿದ್ದರು.ಕಾರ್ಯಕ್ರಮದ ನಿರ್ವಹಣೆಯನ್ನು ಫ್ರಥಮ ಹಾಗೂ ದ್ವೀತಿಯ ವರ್ಷದ ಸಮಾಜಕಾರ್ಯ ವಿದ್ಯಾರ್ಥಿಗಳು ವಹಿಸಿಕೊಂಡಿದ್ದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಸ್ನಾತಕೋತ್ತರಕೇಂದ್ರ ನಂದಿಹಳ್ಳಿಯ ಸಮಾಜಕಾರ್ಯಅಧ್ಯಯನ ವಿಭಾಗದಿಂದ 2022ನೇ ಸಾಲಿನ ಸಮಾಜಕಾರ್ಯ ಶಿಬಿರದ ಅಂಗವಾಗಿ ಸಂಡೂರಿನ ಅಗ್ರಹಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ನಲ್ಲಾಬಂಡೆ ಗ್ರಾಮದಲ್ಲಿಪರಿಸರ ಜಾಗೃತಿ ಮೂಡಿಸಲಾಯತು.

Attachments area