ಪರಿಸರ ಉಳಿವಿಗೆ ಶ್ರಮಿಸಿ: ತಾಪಂ ಇಓ ಲಕ್ಷ್ಮಿದೇವಿ

ಸಂಜೆವಾಣಿ ವಾರ್ತೆಗಂಗಾವತಿ, ಆ.12 :ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನದುರ್ಗಾದಲ್ಲಿ ವಸುಧಾ ವಂದನ್ ಕಾರ್ಯಕ್ರಮದಡಿ ಅಮೃತ ವಾಟಿಕಾ ಸಸಿ ನೆಡುವ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಚಾಲನೆ ನೀಡಿದರು.ಬಸವನದುರ್ಗಾದಲ್ಲಿ ನರೇಗಾದಡಿ ನಿರ್ಮಾಣ ಆಗುತ್ತಿರುವ ಅಮೃತ ಸರೋವರ ಬಳಿ ಸಸಿಗಳನ್ನು ನೆಡಲಾಯಿತು.ಈ ವೇಳ ಅವರು ಮಾತನಾಡಿ, ಆ.15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಸುಧಾ ವಂದನ್ ಕಾರ್ಯಕ್ರಮಮದಡಿ ಒಂದೊಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಗುತ್ತಿದೆ. ನೆಟ್ಟ ಸಸಿಗಳ ಪೋಷಣೆ ಮಾಡಬೇಕು. ಪರಿಸರ ಉಳಿವಿಗೆ ಶ್ರಮಿಸಬೇಕು ಎಂದರು.ನನ್ನ ನೆಲ, ನನ್ನ ದೇಶ ಅಭಿಯಾ‌ನ ಶುರುವಾಗಿದ್ದು, ಎಲ್ಲರೂ ಅಭಿಯಾನಕ್ಕೆ ಕೈಜೋಡಿಸಬೇಕು ಎಂದರು.ಕಾಮಗಾರಿ ವೀಕ್ಷಣೆ : ನರೇಗಾದಡಿ ನಿರ್ಮಾಣ ಆಗುತ್ತಿರುವ ಡುಮ್ಕಿಕೊಳ ( ಅಮೃತ ಸರೋವರ) ಕಾಮಗಾರಿಯ ತಾಪಂ ಇಓ ಲಕ್ಷ್ಮೀದೇವಿ ಪರಿಶೀಲನೆ ನಡೆಸಿದರು. ಈ ವೇಳೆ ಆನೆಗೊಂದಿ ಗ್ರಾಪಂ ಕಾರ್ಯದರ್ಶಿಗಳಾದ ಹನುಮವ್ವ, ನರೇಗಾ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯರಾದ ಡಾ.ವೆಂಕಟೇಶ ಬಾಬು, ರಾಜಶೇಖರ ಹಾಗೂ ಗ್ರಾಮಸ್ಥ ಹೊನ್ನಪ್ಪ ನಾಯಕ ಹಾಗೂ ಗ್ರಾಪಂ ಸಿಬ್ಬಂದಿಗಳು ಇದ್ದರು.