ಭಾಲ್ಕಿ:ಜೂ.6: ಭೂಮಿ ಮೇಲಿನ ಶುದ್ಧ ಗಾಳಿ, ನೀರು ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ಎಂದು ಸಿದ್ಧಾರೂಢ ಮಠದ ನಾಗಭೂಷಣ ಸ್ವಾಮೀಜಿ ಹೇಳಿದರು. ತಾಲೂಕಿನ ಚಳಕಾಪೂರ ಗ್ರಾಮದ ಭಾಗ್ಯವಂತಿ ದೇವಸ್ಥಾನದಲ್ಲಿ ರಿಲಾಯನ್ಸ್, ಪ್ರವರ್ಧ ಸಂಸ್ಥೆ ಮತ್ತು ಡಿಜಿಟಲ್ ಸಖಿಯ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪರಿಸರ ಉಳಿದರೆ ಮಾತ್ರ ಸಕಲ ಜೀವರಾಶಿಗಳ ಉಸಿರಾಡಲು ಸಾಧ್ಯವೆಂಬುದನ್ನು ಎಲ್ಲರೂ ಮನಗಾಣಬೇಕು. ತಮ್ಮ ಸುತ್ತಮೂತ್ತಲಿನ ಮನೆ ಪರಿಸರದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಸುಂದರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.
ಭಾರತಬಾಯಿ ಮಾತಾಜೀ ಸಮ್ಮುಖ ವಹಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೀತಾ, ಪ್ರವರ್ಧ ಸಂಸ್ಥೆಯ ಅಂಬಿಕಾ, ರೈತ ಕೇಂದ್ರದ ಮೋನಪ್ಪ ಪಂಚಾಳ, ಗ್ರಾಪಂ ಸದಸ್ಯರಾದ ಶ್ರೀಮಂತ ಕಲ್ಲೂರೆ, ಬಲಭೀಮ ಬಸ್ಲಾಪೂರೆ, ರಾಜಕುಮಾರ ತೊಗರೆ, ವಿಶ್ವನಾಥ ಬಾಯಪ್ಪನೋರ್, ಮಾಣಿಕಪ್ಪ ಮಟ್ಟೆ, ರಮೇಶ ಕೊಂಡಿ, ಅನಿಲ ಜಾಧವ, ಉಮೇಶ ತೇಲಂಗ್, ವಿಲಾಸ ಮಣಗೀರೆ, ಸುನಿಲ ಬೆಟ್ಟದ್, ಡಿಜಿಟಲ್ ಸಖಿಯರಾದ ಶಾಂತಮ್ಮ ಮಠಪತಿ, ವಚನಾ ಸುಧಾ, ಸವಿತಾ, ಮಹಾದೇವಿ ಸೇರಿದಂತೆ ಹಲವರು ಇದ್ದರು. ರಾಜು ಸ್ವಾಗತಿಸಿದರು. ನಿಜಲಿಂಗಯ್ಯ ಮಠಪತಿ ನಿರೂಪಿಸಿದರು. ರೇವಣಸಿದ್ದ ಜಾಡರ್ ವಂದಿಸಿದರು.