ಪರಿಸರ, ಆರೋಗ್ಯ ರಕ್ಷಣೆಯಲ್ಲಿ ಉಜ್ವಲ ಯೋಜನೆ ಮಹತ್ವದ್ದು: ಪ್ರೊ. ಬಟ್ಟು ಸತ್ಯನಾರಾಯಣ್

ಕಲಬುರಗಿ:ಫೆ.21:ಶುದ್ಧ ಅಡುಗೆ ಇಂಧನಗಳನ್ನು ಉತ್ತೇಜಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ಮನೆಯಲ್ಲಿಯ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಜನರ ಆರೋಗ್ಯವನ್ನು ರಕ್ಷಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ನವದೆಹಲಿಯ ಐಸಿಎಸ್‍ಎಸ್‍ಆರ್ ಪ್ರಾಯೋಜಕತ್ವದಲ್ಲಿ ಬುಧವಾರ ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗವು ಆಯೋಜಿಸಿದ್ದ ಪ್ರಧಾನ ಮಂತ್ರಿ ಉಜ್ವಲ ಯೋಜ£ʼ ಕುರಿತು ಮಾಹಿತಿ ಪ್ರಸಾರಕ್ಕಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉರುವಲು, ಹುಲ್ಲು ಮತ್ತು ಸಗಣಿ ಕುಳ್ಳುಗಳು ಅಡುಗೆ ಇಂಧನವಾಗಿ ಸುಡುವುದರಿಂದ ಅಪಾಯಕಾರಿ ಕಣಗಳು ಹೊರಸೂಸುತ್ತವೆ. ಇದರಿಂದ ಜನರಿಗೆ ಕಣ್ಣಿನ ಕಿರಿಕಿರಿ, ತಲೆನೋವು, ಗಂಟಲಿನ ಕಿರಿಕಿರಿ ಮತ್ತು ಆಸ್ತಮಾದಂತಹ ಕಾಯಿಲೆಗಳು ಉಂಟುಮಾಡುತ್ತವೆ. ಭಾರತ ಸರ್ಕಾರವು ಕೇವಲ ಯೋಜನೆಗಳನ್ನು ಜಾರಿಗೆ ತಂದಿಲ್ಲ ಆದರೆ ನೀತಿ ಪ್ರಸ್ತುತತೆ ಮತ್ತು ದಕ್ಷತೆಯ ದೃಷ್ಟಿಯಿಂದ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಉತ್ಸುಕವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದ ಶಿಕ್ಷಕರು ಅಂತಹ ನೀತಿ ಮೌಲ್ಯಮಾಪನಕ್ಕೆ ಕೊಡುಗೆ ನೀಡಬೇಕು ಮತ್ತು ಉತ್ತಮ ಅನುμÁ್ಠನಕ್ಕಾಗಿ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಹೈದ್ರಾಬಾಧ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಪೆÇ್ರ. ಕಲ್ಪನಾ ಮಾಕರ್ಂಡೇಯ ಅವರು ಮಾತನಾಡಿ, ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯಿಂದ ಉಂಟಾಗಬಹುದಾದ ಪರಿಸರ ನಾಶವನ್ನು ತಡೆಗಟ್ಟುವಲ್ಲಿ ಮತ್ತು ಮನೆಯಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಹೈದ್ರಾಬಾದ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್‍ನ ತಜ್ಞ ಡಾ ಅಬ್ದುಲ್ ಜಲೀಲ್ ಅವರು ಮಾತನಾಡಿ, 2030ರ ವೇಳೆಗೆ ಎಲ್ಲರಿಗೂ ಕೈಗೆಟುಕುವ, ವಿಶ್ವಾಸಾರ್ಹ, ಸುಸ್ಥಿರ ಮತ್ತು ಆಧುನಿಕ ಇಂಧನವನ್ನು ಖಚಿತಪಡಿಸಿಕೊಳ್ಳಲು ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಎಳನ್ನು (7) ಸಾಧಿಸಲು ಎಲ್‍ಪಿಜಿಯನ್ನು ಉತ್ತೇಜಿಸುವುದು ಅತ್ಯಗತ್ಯ ಎಂದರು.
ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದ ಡಾ. ಸೆನ್‍ಗುಪ್ತಾ ಅವರ ಪ್ರಕಾರ, ಇ-ಅಡುಗೆ ಇಂಧನ ಭಾರತದ ಭವಿಷ್ಯವಾಗಿರುತ್ತದೆ. ಇ-ಅಡುಗೆ ಇಂಧನಕ್ಕೆ ಬದಲಾಯಿಸುವುದರಿಂದ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು ಮತ್ತು ಪರಿಸರದಲ್ಲಿನ ಅಪಾಯಕಾರಿ ಕಣಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಎಂದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಮಾತನಾಡಿ, ಸಾಂಪ್ರದಾಯಿಕ ಅಡುಗೆ ಇಂಧನಗಳ ಬಳಕೆಯಿಂದ ಕುಟುಂಬದ ಸದಸ್ಯರ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ತುಂಬಲಾರದ ನಷ್ಟ ಉಂಟಾಗಿದೆ. ಸಂಪನ್ಮೂಲಗಳ ಕೊರತೆ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶವು ಲಿಂಗ ಅಸಮಾನತೆ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಇತರ ಅಭಿವೃದ್ಧಿ ಸೂಚಕಗಳ ವಿಷಯದಲ್ಲಿ ಕಳಪೆ ಕಾರ್ಯಕ್ಷಮತೆಯನ್ನು ಹೊಂದಿದೆ. ಮನೆಗಳನ್ನು ಸಾಂಪ್ರದಾಯಿಕ ಅಡುಗೆ ಇಂಧನದಿಂದ ಎಲ್‍ಪಿಜಿಗೆ ಬದಲಾಯಿಸುವುದರಿಂದ ಮಹಿಳೆಯರ ಜೀವನಮಟ್ಟ ಸುಧಾರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಲಿಂಗ ಅಸಮಾನತೆಯನ್ನು ಕಡಿಮೆ ಮಾಡುತ್ತದೆ ಎಂದರು.
ಯೋಜನೆಯ ಇತರ ಪಾಲುದಾರರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ ಪಿಎಂಯುವೈ ಫಲಾನುಭವಿ ಕಡಗಂಚಿ ಗ್ರಾಮದ ಚಂದ್ರಕಲಾ ಪೂಜಾರಿ ಅವರು ಮಾತನಾಡಿ, ಈ ಹಿಂದೆ, ಹೊಲದಿಂದ ಉರುವಲು ಮತ್ತು ಕೃಷಿ ತ್ಯಾಜ್ಯಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ನಾವು ಹೊಂದಿದ್ದೇವೆ, ಆದರೆ ಈಗ ನಮ್ಮ ಮನೆ ಬಾಗಿಲಿನಲ್ಲಿ ಎಲ್‍ಪಿಜಿ ಪಡೆಯುತ್ತೇವೆ. ಎಲ್‍ಪಿಜಿಯಿಂದಾಗಿ, ಅಡುಗೆ ಸಮಯ ಕಡಿಮೆಯಾಗಿದೆ ಮತ್ತು ಇದು ಮೊದಲಿಗಿಂತ ಸುಲಭವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಯೋಜನಾ ನಿರ್ದೇಶಕ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ಸಂಜಿತ್ ಸರ್ಕಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅನುμÁ್ಠನದ ನಂತರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದೂಳಿದ ಕುಟುಂಬಗಳಲ್ಲಿ ಎಲ್ಪಿಜಿ ಅಡುಗೆ ಅನಿಲದ ಬಳಕೆ ಹೆಚ್ಚಾಗಿದೆ. ಅಧ್ಯಯನ ಮಾಡಲಾದ 20 ಹಳ್ಳಿಗಳಲ್ಲಿ ಸುಮಾರು 82 ಪ್ರತಿಶತ ಕುಟುಂಬಗಳು, ಎಲ್‍ಪಿಜಿಯನ್ನು ಅಡುಗೆ ಇಂಧನವಾಗಿ ಬಳಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪೆÇ್ರ. ಮೊಹಮ್ಮದ್ ಅಸ್ಲಮ್, ಡಾ. ಲಿಂಗದೇವರು, ಡಾ. ಅರ್ಚನಾ ಕುಜೂರ್, ಡಾ. ಬಿ ಮಹಾಲಿಂಗಮ್, ಪ್ರಾಧ್ಯಾಪಕರು, ಅಹ್ವಾನಿತರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.