ಪರಿಸರ ಅಭಿವೃದ್ಧಿಗೆ ಯುವ ಜನತೆ ಮುಂದಾಗಿ

ಕೋಲಾರ,ಜೂ,೫:ಸ್ಕೌಟ್ಸ್ ಗೈಡ್ಸ್ ಶಿಬಿರಗಳಿಂದ ಮತ್ತಷ್ಟು ಪರಿಸರವನ್ನು ಅಭಿವೃದ್ದಿ ಪಡಿಸಲು ಯುವಜನತೆ ಮುಂದಾಗಬೇಕು ಎಂದು ಕೋಲಾರ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ತಿಳಿಸಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ದಾವಣೆಗೆರೆ ಮತ್ತು ಕೋಲಾರ ಜಿಲ್ಲಾ ಸಂಸ್ಥೆ ಹಾಗೂ ರೋಟರಿ ಕೋಲಾರ ನಂದಿನಿ ಸಂಸ್ಥೆಯ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪರಿಸರ ಅಧ್ಯಯನ ಮತ್ತು ಚಾರಣ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋವರ್ ಮತ್ತು ರೇಂಜರ್ ಗಳಿಗೆ ಬೀಜಗಳನ್ನು ವಿತರಿಸಿ ಅವರು ಮಾತನಾಡಿ ಯುವ ಜನತೆ ತನ್ನ ಸುತ್ತಲಿನ ಪ್ರಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮ ಅಮೂಲ್ಯವಾದ ಸಮಯ ಹಾಗೂ ಶ್ರಮವನ್ನು ಸೇವಾ ಮನೋಭಾವದಿಂದ ಭಾಗವಹಿಸಿದಾಗ ಉತ್ತಮ ಪ್ರಕೃತಿಯನ್ನು ನಿರ್ಮಾಣ ಮಾಡಬಹುದು ಎಂದರು.
ಸುಮಾರು ೫೦೦ ಕೋಟಿ ವರ್ಷಗಳ ಹಿಂದೆ ಈ ಭೂಮಿ ಮೇಲೆ ಅನೇಕ ಜೀವಿಗಳು ಉದಯಸಿದವು ನಂತರ ಮನುಷ್ಯ ಜೀವಿಸಿದ, ಮನುಷ್ಯನು ತಾವು ಹುಟ್ಟಿ ವಿಕಸನವಾದ ಮೇಲೆ ಈ ಭೂಮಿ ನನ್ನದು, ನಾನು ಹುಟ್ಟಿರುವುದು ಇಲ್ಲಿನ ಜೀವಿ ಹಾಗೂ ಸಸ್ಯಗಳನ್ನು ತಿನ್ನುವುದಕ್ಕಾಗಿ ಮಾತ್ರ ಎಂದು ತಿಳಿದು ಈ ಭೂಮಿಯ ಮೇಲೆ ದರ್ಪತೋರುತ್ತಾ ಜೀವಿಸುತ್ತಿರುವುದು ಬಹಳ ಶೋಚನೀಯವಾದ ಸಂಗತಿ, ನಮ್ಮಂತೆ ಈ ಭೂಮಿ ಮೇಲೆ ಸಾವಿರಾರು ಜೀವಿಗಳು ಉದಯಿಸಿವೆ , ನಾವು ಅವುಗಳ ಮಧ್ಯೆ ಒಂದು ಎಂದು ಜೀವಿಸುವ ಮನೋಭಾವ ಬೆಳಸಿಕೊಳ್ಳಬೇಕು. ಮುಂದಿನ ಭವಿಷ್ಯಕ್ಕಾಗಿ ಯುವ ಜನತೆ ತಮ್ಮ ಅಮೂಲ್ಯವಾದ ಸಮಯವನ್ನು ಪರಿಸರ ಸಂರಕ್ಷಣೆಗಾಗಿ ತೊಡಗಿಸ ಬೇಕೆಂದರು.
ದಾವಣಗೆರೆ ಜಿಲ್ಲಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸುಕವಾಣಿ ರವರು ಮಾತನಾಡಿ ನಮ್ಮ ಸಂಸ್ಥೆಯ ಮೂಲ ಆಶಯ ಯುವನಜನತೆಯನ್ನು ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ಸೇವಕರನ್ನಾಗಿ ನಿರ್ಮಾಣ ಮಾಡುವುದಾಗಿದ್ದು, ಕಾಲೇಜು ವಿಭಾಗಗಳಲ್ಲಿನ ರೋವರ್ ಮತ್ತು ರೆಂಜರ್ ಗಳಿಗೆ ಕ್ಷೇತ್ರಬೇಟಿ ,ಪರಿಸರ ಅಧ್ಯಯನ ,ಚಾರಣದಂತಹ ಶಿಬಿರಗಳ ಆಯೋಜನೆಯಿಂದ ವಿವಿಧ ಪ್ರದೇಶಗಳ ವೈವಿಧ್ಯತೆ, ಆಚಾರ ವಿಚಾರ, ಸಂಪ್ರದಾಯ , ಭೌಗೋಳಿಕ ವಿಶಿಷ್ಠತೆ ಮುಂತಾದ ವಿಷಯಗಳನ್ನು ಉತ್ತಮ ರೀತಿಯಲ್ಲಿ ಅರಿತು ಹೋಲಿಕೆ ಮತ್ತು ವಿಮರ್ಶೆ ಮಾಡಲು ಸಹಕಾರಿಯಾಗಲಿದೆ. ಇಂತಹ ಶಿಬಿರಗಳ ಪ್ರಯೋಜನ ಎಲ್ಲಾ ಯುವಜನತೆಗೆ ಸಿಗಲು ಕಾಲೇಜು ಪ್ರಾಧ್ಯಪಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಅರಣ್ಯ ಇಲಾಖೆಯ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಆವನಿ ಬೆಟ್ಟ, ಕುರುಡುಮಲೆ ಬೆಟ್ಟ, ಅಂತರಗಂಗೆ ಬೆಟ್ಟ, ಮಾರ್ಕಂಡೇಶ್ವರ ಬೆಟ್ಟದ ಸಾಲುಗಳಲ್ಲಿ ಸ್ವಯಂ ಸೇವಕರು ಸುಮಾರು ೮೦ ಕೆಜಿ ಗಳ ಪ್ರಮಾಣದ ಬೀಜಗಳನ್ನು ಎಸೆಯಲಾಯಿತು. ಈ ಸಂದರ್ಭದಲ್ಲಿ ಪಧಾಧಿಕಾರಿಗಳಾದ ಡಾ|| ನಾರಾಯಣಸ್ವಾಮಿ, ಡಾಶಕುಂತಲ, ಡಾ.ಪ್ರಕಾಶ್, ಸುರೇಶ್, ಸುಪ್ರಿಯ, ಕೊಟ್ರೇಶ್, ಆಶ್ವಿನಿ, ಸುರೇಶ್, ನಾರಾಯಣಸ್ವಾಮಿ, ಉಮಾದೇವಿ, ಸ್ಕೌಟ್ ಬಾಬು, ವಿಶ್ವನಾಥ್, ನಿರಂಜನ್, ಹರೀಶ್,ವೇಣು ಪ್ರಸಾದ್, ವೆಂಕಟೇಶ್, ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.