ಪರಿಸರ ಅಧ್ಯಯನಕ್ಕೆ ಜೋಗಿಮಟ್ಟಿ ಸೂಕ್ತ ಸ್ಥಳ


ಚಿತ್ರದುರ್ಗ.ನ.೪; ನಗರದದ ಜನತೆಗೆ ಪರಿಸರ ನೀಡಿರುವ ಅತ್ಯುತ್ತಮ ಉಡುಗೊರೆ ಜೋಗಿಮಟ್ಟಿ ಅರಣ್ಯ ಧಾಮ, ಮುಂದಿನ ಜನಾಂಗಕ್ಕೆ ಅರಣ್ಯದ ಬಗ್ಗೆ ಅಭಿಮಾನ ಮೂಡಿಸಲು, ಅದರಲ್ಲೂ ಜೀವವೈವಿಧ್ಯಗಳ ಬಗ್ಗೆ ತಿಳುವಳಿಕೆ ಹೆಚ್ಚಿಸಲು ಅತ್ಯುತ್ತಮವಾದ ಸಂಶೋಧನಾ ಕ್ಷೇತ್ರ ಜೋಗಿಮಟ್ಟಿ. ಪ್ರಾಣಿಗಳ ಅಧ್ಯಯನಕ್ಕೆ ಆಡುಮಲ್ಲೇಶ್ವರ. ಸಸ್ಯ ಜಾತಿಗಳ, ಸಸ್ಯ ವೈವಿಧ್ಯದ ಬಗ್ಗೆ, ಔಷಧ ಸಸ್ಯಗಳ ಬಗ್ಗೆ ಅಧ್ಯಯನಕ್ಕಾಗಿ ಜೋಗಿಮಟ್ಟಿಯನ್ನ ಸೂಕ್ಷ್ಮವಾದ ಸಂಶೋಧನಾ ಸ್ಥಳವನ್ನಾಗಿ ಜನರಿಗೆ ಪರಿಚಯಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಬಳಿ ಇರುವ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ,ರೊರ‍್ಯಾಕ್ಟ್ ಮತ್ತು ಕಲ್ಪವೃಕ್ಷ ಟ್ರಸ್ಟ್ ಆಯೋಜಿಸಿದ್ದ “ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ” ಕಾರ್ಯಕ್ರಮದಲ್ಲಿ ಮಾತನಾಡಿದರು.ಜೋಗಿಮಟ್ಟಿಗೆ ವೀಕ್ಷಣೆಗೆ ಬರುವ ಸಾಮಾನ್ಯ ಜನರಿಂದ ಹಿಡಿದು, ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಪರಿಸರದ ಬಗ್ಗೆ ಜ್ಞಾನ ಹೆಚ್ಚಿಸಲು, ಪರಿಸರದ ಬಗ್ಗೆ ಪ್ರೀತಿ, ಅಭಿಮಾನ ಮೂಡಿಸಲು ಸುಂದರವಾದ, ಪ್ರಕೃತಿಯ ಕೊಡುಗೆ ಜೋಗಿಮಟ್ಟಿ. ಲಕ್ಷಾಂತರ ವೈವಿಧ್ಯಮಯ ಜೀವಿಗಳನ್ನ ಗುರುತಿಸಿ, ಪೋಷಿಸಿ, ಸಂರಕ್ಷಿಸಿದಂತಹ ಅರಣ್ಯ. ಅದನ್ನ ನಾವು ಬಹಳ ಎಚ್ಚರಿಕೆಯಿಂದ ಉಳಿಸಿಕೊಳ್ಳಬೇಕು. ಜೋಗಿಮಟ್ಟಿಗೆ ಪ್ರವೇಶ ಮಾಡುವ ವೀಕ್ಷಕರು, ಗಲಾಟೆ ಮಾಡದೆ, ಪರಿಸರಕ್ಕೆ ಹೊಂದಿಕೊಂಡಂತ ಜೀವನಶೈಲಿ ಅಳವಡಿಸಿಕೊಂಡು ಒಳಬರಬೇಕು. ಒಳ ಬರುವಾಗ ಕಿರುಚಾಡುವುದು, ಗಲಾಟೆ ಮಾಡುವುದು, ಶಬ್ದ ಮಾಡುವುದು, ಪ್ಲಾಸ್ಟಿಕ್ ಕಸವನ್ನು ಎಸೆಯುವುದು, ಎಲ್ಲೆಂದರಲ್ಲಿ ಬೆಂಕಿ ಹಾಕುವುದು ಮಾಡದಂತೆ, ಅವುಗಳನ್ನ ಸಂರಕ್ಷಿಸಿ ಕೊಳ್ಳುವಂತಹ ಮಾರ್ಗೋಪಾಯಗಳನ್ನು ತಿಳಿದುಕೊಂಡಿರಬೇಕು ಎಂದರು.ದಾರಿಯಲ್ಲಿ ಸಿಗುವ ವೈವಿಧ್ಯಮಯ ಪ್ರಾಣಿಗಳನ್ನ ತೊಂದರೆಗೊಳಿಸದೇ, ಅವುಗಳು ಹಾದುಹೋಗಲು ಅವಕಾಶ ಮಾಡಿಕೊಡಬೇಕು. ಕರಡಿ, ಚಿರತೆ, ಜಿಂಕೆ, ಮೊಲ, ಹಾವುಗಳು, ನರಿಗಳು ಸಹ ಅಲ್ಲಿ ರಸ್ತೆ  ದಾಟುವ ಅಂತಹ ಸಂದರ್ಭಗಳಲ್ಲಿ, ಜನರು ಸೂಕ್ಷ್ಮವಾಗಿ ಹಿಂದಕ್ಕೆ ಬಂದು, ಸುರಕ್ಷಿತ ಸ್ಥಳವನ್ನು ತಲುಪಿಕೊಳ್ಳಬೇಕು. ತಮ್ಮ ಸುರಕ್ಷತೆ ಬಗ್ಗೆ ಯೋಚಿಸಿದಂತೆಯೇ, ಅವುಗಳ ಸುರಕ್ಷತೆಯ ಬಗ್ಗೆಯೂ ನಾವು ಯೋಚಿಸಬೇಕು. ನಾವು ಅವುಗಳನ್ನು ಗಾಬರಿಪಡಿಸಿದಾಗ, ಅವು ನಮ್ಮ ಮೇಲೆ ಆಕ್ರಮಣ ಮಾಡುವ ಸಂಭವ ಇರುತ್ತದೆ. ಇಂತಹ ಸಾಮಾನ್ಯ ತಿಳುವಳಿಕೆಗೆ ಜನರಿಗೆ ನೀಡಿ ಪರಿಸರ ಅಧ್ಯಯನಕ್ಕೆ ಜನರನ್ನ ಸಿದ್ಧಗೊಳಿಸಬೇಕಾಗಿದೆ ಎಂದರು.ಪ್ರಾಣಿಗಳ ವಾಸಸ್ಥಳವಾಗಿರುವುದರಿಂದ ಹೆಚ್ಚು ಪ್ರವಾಸಿಗರನ್ನು ಸಹ ಅಲ್ಲಿ ಒಳಗೆ ಬಿಡದಂತೆ, ಸಂರಕ್ಷಣೆ ಮಾಡುತ್ತಿರುವ ಅರಣ್ಯ ಇಲಾಖೆ, ಸೂಕ್ಷ÷್ಮವಾಗಿ ಹಂತ ಹಂತವಾಗಿ ಜನರನ್ನ, ಪ್ರವಾಸಿಗರನ್ನ, ಅಧ್ಯಯನಕ್ಕೆ ಬಂದAತವರಿಗೆ ಅವಕಾಶ ಕಲ್ಪಿಸಿಕೊಡುತ್ತಿದೆ. ಶಾಲಾ ಮಕ್ಕಳು, ವೃದ್ಧರು, ಜೋಗಿಮಟ್ಟಿಯನ್ನ ಸುತ್ತಾಡಲು ಕಷ್ಟಕರವಾಗಿರುವುದರಿಂದ, ವಿದ್ಯುತ್ ಚಾಲಿತ, ಸಣ್ಣ ವಾಹನಗಳನ್ನು ಬಳಕೆ ಮಾಡುವಂಥ ವ್ಯವಸ್ಥೆ  ಮಾಡಿಕೊಂಡರೆ ಉತ್ತಮ. ಪೆಟ್ರೋಲ್, ಡೀಸಲ್ ಗಾಡಿಗಳು, ಹೊಗೆ ಉಗುಳುವ ಗಾಡಿಗಳು, ಶಬ್ದ ಮಾಡುವಂಥ ವಾಹನಗಳನ್ನ ಜೋಗಿಮಟ್ಟಿ ಒಳಗೆ ನಿಷೇಧಿಸಿಕೊಂಡಷ್ಟು ಪರಿಸರ ಉಳಿಯುವುದು ಎಂದರು. ಕಾರ್ಯಕ್ರಮದಲ್ಲಿ ಪ್ರಾಣಿ ಸಂಗ್ರಹಾಲಯದ ಮುಖ್ಯಸ್ಥರಾದ ಆರ್‌ಎಫ್‌ಓ ಶ್ರೀ ವಾಸುದೇವ್, ಅರಣ್ಯ ಇಲಾಖೆಯ ಕಣವಪ್ಪ, ಈರಪ್ಪ, ಪೋಲಿಸ್ ಇಲಾಖೆಯ ವೈರ್‌ಲೆಸ್ ನಿಯಂತ್ರಕರಾದ ಪ್ರದೀಪ್, ಪೈನಾನ್ಸ ನಾಗರಾಜ್, ಆಕಾಶ್ ಕುಮಾರ್, ಹಾಜರಿದ್ದರು.