ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಸರ ಪ್ರಜ್ಞೆಯನ್ನು ಮೂಡಿಸಿ

????????????????????????????????????

ಸಿರುಗುಪ್ಪ ಜೂ 06 : ತಾಲೂಕಿನ ಹೆರಕಲ್ ಗ್ರಾಮದ ಶ್ರೀಮರಿತಾತಾ ಮಠದ ಆವರಣದಲ್ಲಿ ಶ್ರೀಚಿದಾನಂದ ತಾತಾ ನವರ ಮಾರ್ಗದರ್ಶನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 500ಕ್ಕೂ ಹೆಚ್ಚು ಸಸಿಗಳನ್ನು ವಿತರಿಸುವುದರೊಂದಿಗೆ ಸಾಂಕೇತಿಕವಾಗಿ ಸಸಿಗಳನ್ನು ನೆಟ್ಟು ನೀರು ಹಾಕಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ದಿವಾಕರ ನಾರಾಯಣ ಮಾತನಾಡಿ ಇರೋ ಮೂರು ದಿನವಾದರು ಇರೋದರೊಳಗೆ ಭೂಮಿಯ ಮೇಲೆ ಮರವನ್ನು ಇಟ್ಟು ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಸರ ಪ್ರಜ್ಞೆಯನ್ನು ಮೂಡಿಸುವಂತೆ ತಿಳಿಸಿದರು.
ಇದೆ ಸಂದರ್ಭದಲ್ಲಿ ಕೆಂಚನಗುಡ್ಡ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎ.ಆದೆಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿಗಳಾದ ಅನಿಲ್, ರುದ್ರಮುನಿ, ದೇವರಾಜ ಪಾಟೀಲ್, ಮಲ್ಲಯ್ಯ, ಮುಖಂಡರಾದ ಅಂಬಣ್ಣ, ವೀರೇಶ ಸ್ವಾಮಿ, ಉಮೇಶ ಶಿಕ್ಷಕ ಪಾಲಪ್ಪ ಇದ್ದರು