ಪರಿಸರದ ಮೇಲಿನ ದಬ್ಬಾಳಿಕೆಯಿಂದ ಅಸಮತೋಲನ

ಕಲಬುರಗಿ:.15: ದೇವರು ಪ್ರಕೃತಿಯನ್ನು ಸಮತೋಲನದಲ್ಲಿಯೇ ಸೃಷ್ಠಿಸಿದ್ದಾನೆ. ಆದರೆ ಮಾನವನು ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿ, ತನಗೆ ಬೇಕಾದಂತೆ ಸೃಷ್ಠಿಸಲು ಹವಣಿಸುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿ ವಿಕೋಪ, ನೈಸರ್ಗಿಕ ಪ್ರವಾಹ, ಭೂಕಂಪ, ಅತಿವೃಷ್ಠಿ, ಅನಾವೃಷ್ಠಿಯಂತಹ ನೈಸರ್ಗಿಕ ಅವಘಡಗಳಾಗಿ ಪರಿಸರ ಅಸಮತೋಲನೆಯಾಗುತ್ತಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ರಾಮ ಮಂದಿರ ಸಮೀಪವಿರುವ ‘ಕೊಹಿನೂರ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ರಾಷ್ಟ್ರೀಯ ನೈಸರ್ಗಿಕ ಅವಘಡಗಳ ನಿಯಂತ್ರಣ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಹಣಮಂತರಾಯ ಬಿ.ಕಂಟೆಗೋಳ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಡೆ ಕಟ್ಟಡಗಳು ಸೇರಿದಂತೆ ಇನ್ನೀತರ ನಿರ್ಮಾಣದ ನೆಪದಲ್ಲಿ ವ್ಯಾಪಕವಾದ ಗಿಡ-ಮರ, ಪ್ರಾಣಿ-ಪಕ್ಷಿಗಳ ಸಂಕುಲವನ್ನು ನಾಶಪಡಿಸಲಾಗಿದೆ. ಇದರಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗುತ್ತಿದೆ. ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಉಂಟಾಗುತ್ತಿದೆ. ಭೂಕಂಪ, ಜ್ವಾಲಾಮುಖಿಯಂತಹ ನೈಸರ್ಗಿಕ ಅವಘಡಗಳು ಉಂಟಾಗುತ್ತಿವೆ. ಪವಿತ್ರ ಸ್ಥಳಗಳ ಪುಣ್ಯಸ್ಥಾನ ಮಾಡುವ ಸಂದರ್ಭದಲ್ಲಿ ಪ್ರವಾಹವನ್ನು ಗಮನಿಸಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.