ಪರಿಸರದ ಕಾಳಜಿ ವಹಿಸಿದರೆ ಮಾತ್ರ ಮಾಲಿನ್ಯ ತಡೆ ಸಾಧ್ಯ

ಜಗಳೂರು.ಸೆ.೩ : ಪ್ರತಿಯೊಂದು ಗ್ರಾಮಗಳಲ್ಲಿ ಪ್ರತಿಯೊಬ್ಬ ಯುವಕರು ಜಾಗೃತರಾಗಿ ಹಸಿರು ಸೇನೆಗಳನ್ನು ಕಟ್ಟಿಕೊಳ್ಳುವ ಮೂಲಕ ಪರಿಸರದ ಕಾಳಜಿ ವಹಿಸಿಕೊಂಡಾಗ ಮಾತ್ರ ದೇಶದಲ್ಲಿ ಪರಿಸರ ಮಾಲಿನ್ಯ ತಡೆಯಲು ಸಾಧ್ಯ ಎಂದು ದಾವಣಗೆರ ಸಾಮಾಜಿಕ ಅರಣ್ಯ ವಿಭಾಗ್ ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾದಷಾ ಅಭಿಪ್ರಾಯ ವ್ಯಕ್ತಪಡಿಸಿದರು. ಜಗಳೂರು ತಾಲ್ಲೂಕಿನ ಮೊಳ್ಳಮನಹಳ್ಳಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಜಗಳೂರು, ಜಗಳೂರು ಅಮ್ಮ ಲಯನ್ಸ್ ಕ್ಲಬ್ ,ಲಿಯೋ ಕ್ಲಬ್ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾಳಮ್ಮನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಳಮ್ಮನಹಳ್ಳಿ ಗ್ರಾಮದಲ್ಲಿ ಸಸಿ ನೆಡುವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗ ಆಗಮಿಸಿ ಅವರು ಮಾತನಾಡಿದರು.ಕೋವಿಡ್‌ನಿಂದ ಇಂದು ಪರಿಸರದಲ್ಲಿ ಶುದ್ಧಗಾಳಿಗಾಗಿ ಇಡಿ ಪ್ರಪಂಚವೇ ತತ್ತರಿಸಿ ಹೋಗಿದೆ, ಉತ್ತಮ ಪರಿಸರದಲ್ಲಿ ಬೆಳೆಸಿದ ಮರಗಳಿಂದ ಮಾತ್ರ ಶುದ್ಧಗಾಳಿ ಸಿಗುವುದು ಮಾತ್ರ ಸಾಧ್ಯ, ಆದ್ದರಿಂದ ಮುಂದಿನ ದಿನಗಳಲ್ಲಿ ಮುನುಕುಲದ ಒಳಿತಿಗಾಗಿ ಪ್ರತಿಯೊಬ್ಬರು ನಿಮ್ಮ ನಿಮ್ಮ ಮನೆಯಲ್ಲಿ ಒಂದು ಗಿಡೆ ಬೆಳೆಸುವ ಕೆಲಸ ಮಾಡಬೇಕು ಎಂದು ಹೇಳಿದರು.ರಂಗಯ್ಯನದುರ್ಗ ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ ಅರಣ್ಯ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸಲಾಗುವುದು ನಾಗರೀಕರು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡುವುದರಜೊತೆಯಲ್ಲಿ ಸಮಯಕ್ಕೆ ಸರಿಯಾಗಿ ಪಾಲನೆ ಪೋಷಣೆಮಾಡಿದರೆ ಸಾಕು, ಹಾಗೂ ಶಾಲಾ ಮಕ್ಕಳಿಗೆ ಗಿಡ ನೆಡಲು ಹಾಗೂ ಆ ಗಿಡಕೆ ಅವರೆದೇ ಹೆಸರಿನ ನಾಮಫಲಕ ಹಾಕುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.ಜಗಳೂರು ಅಮ್ಮ ಲಯನ್ಸ್ ಕ್ಲಬ್ ನ ಅಧ್ಯಕ ರಾದ ಶ್ರೀಮತಿ ಆಶಾ ಬಸವರಾಜ್ ರವರು ಮಾತನಾಡಿ ಲಯನ್ಸ್ ಕ್ಲಬ್ ಗಳ ವತಿಯಿಂದ ಮಾಳಮ್ಮನ ಹಳ್ಳಿಯಲ್ಲಿ ಈಗಾಗಲೇ 250ಕ್ಕೂ ಹೆಚ್ಚು ಸಸಿಗಳನ್ನು ನೀಡಿದ್ದು, ಗ್ರಾಮದ ಪ್ರತಿಯೊಬ್ಬರು ಕಾಳಜಿಯಿಂದ ಗಿಡಗಳನ್ನು ಬೆಳಸಿದ್ದಲ್ಲಿ ನಮ್ಮ ಕ್ಲಬ್ ವತಿಯಿಂದ ಉತ್ತಮ ಗೌರವ ಸನ್ಮಾನವನ್ನು ಮಾಡುವುದಾಗಿ ಹೇಳಿದರು.ಮಾಳಮ್ಮನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಮೋಹನ್ ಮಾತನಾಡಿ ಇಂದು ಲಯನ್ಸ್ ಕ್ಲಬ್‌ನವರು ನಮ್ಮ ಗ್ರಾಮಕ್ಕೆ ಆಗಮಿಸಿ ಪ್ರತಿ ಮನೆ ಮನೆಗೂ ಗಿಡಗಳನ್ನು ನೀಡಿರುವುದು ಸಂತೋಷದ ಸಂಗತಿಯಾಗಿದೆ. ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಗಿಡಗಳನ್ನು ಬೆಳಸುವುದರಿಂದ ಪಟ್ಟಣಕ್ಕೆ ಉತ್ತಮ ಗಾಳಿ ತಲುಪಲು ಸಾಧ್ಯ ಏಕೆಂದರೆ ಪಟ್ಟಣದಲ್ಲಿ ಇಂದು ಮರಗಿಡಗಳನ್ನು ಬೆಳಸಲು ಜಾಗದ ಕೊರತೆ ಕಾಳಜಿ ವಹಿಸಲು ಆಗದ ಹಳ್ಳಿಗಳಿಗೆ ನೀವು ಆಯ್ಕೆ ಮಾಡಿರುವುದು ಉತ್ತಮ ಹೆಚ್ಚೆ ಎಂದು ಅವರು ಹೇಳಿದರು.ಕೆನರಾ ಬ್ಯಾಂಕ್ ಲೀಡ್ ಬ್ಯಾಂಕಿನ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ಹಾಗೂ ಜಗಳೂರು ಲಯನ್ಸ ಕ್ಲಬ್ ಅಧ್ಯಕ್ಷ ರಾದ ಶ್ರೀ ಎನ್.ಟಿ. ಎರ್ರಿ ಸ್ವಾಮಿಯವರು ಮಾತನಾಡಿ ಪರಿಸರ ಕಾಳಜಿ ಇರುವ ಪ್ರತಿಯೊಬ್ಬ ವ್ಯಕ್ತಿಗೆ ತಾನು ಮಾಡುವ ಸೇವೆಗೆ ತಕ್ಕ ಪ್ರತಿಫಲ ಆ ಭೂತಾಯಿ ನೀಡುತ್ತಾಳೆ. ಸಾಲುಮರದ ತಿಮ್ಮಕ್ಕನಿಗೆ ಮಕ್ಕಳು ಇಲ್ಲದ ಕಾರಣ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಆ ಮರಗಳೇ ತನ್ನ ಮಕ್ಕಳು ಎನ್ನುವ ಆ ಮಹಾನ್ ತ್ಯಾಗಮಯಿ ತಿಮ್ಮಕ್ಕನೆ ಸೇವೆ ಇಂದು ನಮಗೆ ಈ ಕಾರ್ಯ ಮಾಡಲು ಸ್ಪೂರ್ತಿ ಎಂದು ಹೇಳಿದರು. ಕಾರ್ಯಕ್ರಮ ಕುರಿತು ಶ್ರೀಮತಿ ಅಮೃತ ಸಾಮಾಜಿಕ ವಲಯ ಅರಣ್ಯಅಧಿಕಾರಿ, ಸೈಯದ್ ವಾಸಿಮ್ ಲಿಯೋ ಕ್ಲಬ್ ಅದ್ಯಕ್ಷರು, ಮಾಳಮ್ಮನಹಳ್ಳಿ ಗ್ರಾಮ ಪಂಚಾಯಿತಿ ಮುಖಂಡ ಮೋಹನಂದ, ಸದಸ್ಯರಾದ ಶಿಕ್ಷಕಿ ಸುಜಾತಮ್ಮ, ಮುಖ್ಯೋಪಾದ್ಯಾಯರಾದ ಕ.ಬಿ.ಮಹಂತೇಶ ಮಾತನಾಡಿದರು. ಈ ಸಂದರ್ಭದಲ್ಲಿ ಮೊಳ್ಳಮನಹಳ್ಳಿ ಗ್ರಾಮದ ಪ್ರತಿ ಮನೆ ಮನೆಗೂ ಗಿಡ ನೀಡಲಾಯಿತು. ಸಾಕೇಂತಿಕವಾಗಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಪೆದ್ದಪ್ಪ, ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸವಿತಾ ಪ್ರಕಾಶ್, ಸದಸ್ಯರಾದ ಶ್ರೀಮತಿ ಆರತಿ, ಶ್ರೀಮತಿ ಮಂಜುಳಾ, ಪರ್ಜಾನಬಾನು, ಶ್ರೀ ಜಗದೀಶ್ ಗೌಡ್ರು, ಲೀಯೊ ಕ್ಲಬ್ ಕಾರ್ಯದರ್ಶಿ ತಿಪ್ಪೇಸ್ವಾಮಿ ಹೊಸಮನಿ, ಸ.ಕಾರ್ಯದರ್ಶಿ ಮಹಮ್ಮದ್ ಅಬ್ದುಲ್ ರಖೀಬ್, ಖಜಾಂಚಿ ಷಾಲೋಮ್ ಜ್ಯೋಸ್ವಾ, ಮನೋಹರ್ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.Attachments area