ಪರಿಸರದಲ್ಲಿನ ಅಸಮತೋಲನ ನೀಗಿಸಲು ಪ್ರತಿಯೊಬ್ಬರು ಗಿಡ ಮರಗಳನ್ನು ನೆಟ್ಟು ಪೋಷಿಸಬೇಕುಃ ಕವಿತಾ ಮಿಶ್ರಾ

ವಿಜಯಪುರ, ಜೂ.6-ನಗರದ ಹೋರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರ, ವಿಜಯಪುರದಲ್ಲಿ ಅರಣ್ಯ, ಕೃಷಿ ಇಲಾಖೆ, ಹಾಗೂ ಎಂ.ಸಿ.ಎಫ್, ಇವರ ಸಹಯೋಗದೊಂದಿಗೆ ಆನ್‍ಲೈನ್ ಮೂಲಕ ವಿಶ್ವ ಪರಿಸರ ದಿನಾಚರಣೆ ಕುರಿತು ವೆಭಿನಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದ ಕವಿಳಾತ ಗ್ರಾಮದ ರಾಷ್ಷ್ರ ಪಶಸ್ತಿ ವಿಜೇತೆ ಕೃಷಿ ಮಹಿಳೆ ಕವಿತಾ ಮಿಶ್ರಾ ಮಾತನಾಡಿ ಪರಿಸರದಲ್ಲಿನ ಅಸಮತೋಲನ ನೀಗಿಸಲು ಪ್ರತಿಯೊಬ್ಬರು ಗಿಡ ಮರಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಒಬ್ಬ ಸ್ನಾತಕೊತ್ತರ ಪಧವಿಧರೆಯಾಗಿದ್ದರು ಪರಿಸರಕ್ಕೆ ಪೋರಕವಾದ ಕೃಷಿ ಅರಣ್ಯ ಸ್ಥಾಪಿಸಿ ವಿವಿಧ ಗಿಡಮರಗಳನ್ನು ಹಣ್ಣಿನ ಮರಗಳನ್ನು ನೆಟ್ಟು ಪೋಷಿಸುವರದ ಜೊತೆಗೆ ಪರಿಸರ ಸಂರಕ್ಷಣೆ ಜವಾಬ್ದಾರಿ ನಿರ್ವಹಿಸುತ್ತಿರುವುದರದಾಗಿ ತಿಳಿಸಿದರು.
ಮುಖ್ಯ ಅತಿಥಿ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಗಾರ ಮಾತನಾಡಿ ವಿಜಯಪುರ ಜಿಲ್ಲೆ ಯಾದ್ಯಾಂತ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ 4.5 ಲಕ್ಷ ಸಸಿಗಳನ್ನು ತಯಾರಿಸಿ ವಿತರಿಸುವ ಕೆಲಸ ಮಾಡಲಾಗುತ್ತದೆ. ರಸ್ತೆ ಬದಿ ಇಲಾಖೆ ಗಿಡಗಳನ್ನು ನೆಟ್ಟು ಪೋಷಿಸುತ್ತಾರೆ. ಸಾರ್ವಜನಿಕರು ಇದು ಇಲಾಖೆಯ ಜವಾಬ್ಧಾರಿ ನಮ್ಮದೇನೂ ಪಾತ್ರವಿಲ್ಲವೆಂಬಂತೆ ಇರುತ್ತಾರೆ. ಆದರೆ ಪ್ರತಿಯೊಬ್ಬರು ಗಿಡಗಳ ಪಾಲನೆ ಪೋಷಣೆಯತ್ತ ಜವಾಬ್ದಾರಿವಹಿದಲ್ಲಿ ಇಲಾಖೆಯ ಶ್ರಮ ಸಾರ್ಥಕವಾಗುವುದು ಎಂದರು.
ಜಂಟಿ ಕೃಷಿ ನಿರ್ದೇಶಕÀ ಡಾ. ವಿಲಿಯಂ ರಾಜಶೇಖರ ಮಾತನಾಡಿ, ಜಿಲ್ಲೆಯ ಅರಣ್ಯ ಪ್ರದೇಶ ಶೇ.1 ಕ್ಕಿಂತ ಕಡಿಮೆಯಿದ್ದು ರೈತರು ತಮ್ಮ ಹೊಲದ ಬದುಗಳ ಮೇಲೆ ಗಿಡಗಳನ್ನು ನೆಡಬೇಕು, ಕೃಷಿ ಜೋತೆಗೆ ಅರಣ್ಯ ಗಿಡಗಳನ್ನು ಅಂತರ ಬೆಳೆಯಾಗಿ ಬೆಳೆಯಬೆಕೆಂದರು. ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ತಿಳಿಸುತ್ತಾ ವಿಶೇಷವಾಗಿ ಕೃಷಿ ಕಾಲೇಜು ಎನ್.ಎಸ್.ಎಸ್, ಘಟಕದ ವತಿಯಿಂದ ಪ್ರತಿ ವರ್ಷ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಂದ ನೂರಾರು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಎಂ.ಸಿ.ಎಫ್.ಡೆಪ್ಯೋಟಿ ಜನರಲ್ ಮ್ಯಾನೇಜರ ಆದರ್ಶ ಟಿ.ಎಸ್.ಪರಿಸರ ದಿನಾಚರu ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ ಭಾಗವಹಿಸಿ, ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲರ ಹೋಣೆ ಎಂಬ ಘೋಷವಾಕ್ಯದೊಂದಿಗೆ ಕೇವಲ ಕಾಟಾಚಾರಕ್ಕೆ ಆಚರಿಸದೇ, ಅದೊಂದು ಆಂದೋಲನ ರೂಪವಾಗಬೇಕು ಗಿಡಮರಗಳಿಂದ ಎಲ್ಲೆಲ್ಲೂ ಹಸಿರು ಕಂಗೊಳಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಡಾ.ಶುಭಾ.ಎಸ್. ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಡಾ.ಶಿವಲಿಂಗಪ್ಪ ಹೋಟಕರ. ಡಾ. ಪ್ರೇಮಾ.ಬಿ.ಪಾಟೀಲ್, ಡಾ.ವಿವೇಕ. ದೇವರನಾವದಗಿ, ಎಸ್.ಸಿ.ರಾಠೋಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ರೈತರು ಭಾಗವಹಿಸಿದ್ದರು.