ಪರಿಷತ್ ಸಮರ: ಬಿಜೆಪಿ, ಕೈ ಸಮಬಲ, ಎರಡರಲ್ಲಿ ಜೆಡಿಎಸ್: ಗೆಲುವು ಬಹುಮತಕ್ಕೆ ಒಂದು ಸ್ಥಾನ ಕೊರತೆ

ಬೆಂಗಳೂರು, ಡಿ.14- ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆ ಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಪಡೆಯಲು ಒಂದು ಸ್ಥಾನದ ಕೊರತೆ ಎದುರಾಗಿದೆ
ಆಡಳಿತಾರೂಢ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ ಚುನಾವಣಾ ಅಖಾಡದಲ್ಲಿ ಬಿಜೆಪಿಗೆ ಸೆಡ್ಡು ಹೊಡೆದಿರುವ ಪ್ರತಿಪಕ್ಷ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜಾತ್ಯತೀತ ಜನತಾದಳ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿ ತೀವ್ರ ಮುಖಭಂಗ ಅನುಭವಿಸಿತ್ತು. ಆದರೆ ಕಡೆಗಳಿಗೆಯವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಗೆಲುವು ರೋಚಕ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದಂತಾಗಿದೆ.
ಬಿಜೆಪಿ ವಿಧಾನಪರಿಷತ್ತಿನಲ್ಲಿ ಬಹುಮತ ಗಳಿಸಲು 12 ಸ್ಥಾನದ ಅಗತ್ಯವಿತ್ತು 11 ಸ್ಥಾನ ಮಾತ್ರ ಗೆದ್ದಿದ್ದು ಬಹುಮತಕ್ಕೆ ಒಂದು ಸ್ಥಾನದ ಕೊರತೆ ಬಿದ್ದಿದೆ
ಜೆಡಿಎಸ್ ಇನ್ನೊಂದು ಕ್ಷೇತ್ರದಲ್ಲಿ ಜಯಗಳಿಸಿದ್ದರಿಂದ ಮೇಲ್ಮನೆಯಲ್ಲಿ ಬಿಜೆಪಿ ಬಹುಮತದಿಂದ ವಂಚಿತವಾಗಿದೆ.
ರಾಜಕೀಯ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದ್ದ ಮೇಲ್ಮನೆ ಸಮರದಲ್ಲಿ ಬಿಜೆಪಿ ಮತ್ತು ಕಾಂಗೆಸ್ ಸಮ ಬಲಸಾಧಿಸಿದೆ. ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ.

ಬಿಜೆಪಿ ಗೆದ್ದ ಕ್ಷೇತ್ರಗಳು

 • ಕೊಡಗು–ಸುಜಾ ಕುಶಾಲಪ್ಪ
 • ಬೆಂಗಳೂರು– ಗೋಪಿನಾಥ್‌ ರೆಡ್ಡಿ
 • ಚಿತ್ರದುರ್ಗ– ಕೆ.ಎಸ್‌. ನವೀನ್‌
 • ಉತ್ತರ ಕನ್ನಡ– ಗಣಪತಿ ಉಳ್ವೇಕರ್
 • ಬಳ್ಳಾರಿ– ವೈ.ಎಂ.ಸತೀಶ
 • ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
 • ಶಿವಮೊಗ್ಗ –ಡಿ.ಎಸ್‌.ಅರುಣ್‌
 • ಕಲಬುರ್ಗಿ –ಬಿ.ಜಿ.ಪಾಟೀಲ್‌
 • ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್‌ ಪೂಜಾರಿ
 • ಧಾರವಾಡ (ದ್ವಿಸದಸ್ಯ) –ಪ್ರದೀಪ್‌ ಶೆಟ್ಟರ್‌
 • ವಿಜಯಪುರ (ದ್ವಿಸದಸ್ಯ) –ಪಿ.ಎಚ್‌.ಪೂಜಾರ್‌

ಕಾಂಗ್ರೆಸ್‌ ಗೆದ್ದ ಕ್ಷೇತ್ರಗಳು

 • ಬೀದರ್‌ –ಭೀಮಾರಾಮ್‌ ಪಾಟೀಲ್‌
 • ಮಂಡ್ಯ –ಗೂಳೀಗೌಡ
 • ರಾಯಚೂರು – ಶರಣಗೌಡ ಬಯ್ಯಾಪುರ
 • ಬೆಂಗಳೂರು ಗ್ರಾಮಾಂತರ –ಎಸ್‌.ರವಿ
 • ತುಮಕೂರು –ಆರ್.ರಾಜೇಂದ್ರ
 • ಕೋಲಾರ –ಎಂ.ಎಲ್‌. ಅನಿಲ್‌ ಕುಮಾರ್‌
 • ಮೈಸೂರು (ದ್ವಿಸದಸ್ಯ) –ಡಿ.ತಿಮ್ಮಯ್ಯ
 • ಧಾರವಾಡ (ದ್ವಿಸದಸ್ಯ)–ಸಲ್ಲೀಂ ಅಹಮ್ಮದ್‌
 • ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್‌ ಭಂಡಾರಿ
 • ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
 • ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ

ಜೆಡಿಎಸ್‌ ಗೆದ್ದ ಕ್ಷೇತ್ರ

 • ಹಾಸನ– ಸೂರಜ್ ರೇವಣ್ಣ
 • ಮೈಸೂರು (ದ್ವಿಸದಸ್ಯ) –ಮಂಜೇಗೌಡ

ಪಕ್ಷೇತರರು ಗೆದ್ದ ಕ್ಷೇತ್ರ ಮತ್ತುಅಭ್ಯರ್ಥಿ

 • ಬೆಳಗಾವಿ (ದ್ವಿಸದಸ್ಯ) -ಲಖನ್‌ ಜಾರಕಿಹೋಳಿ