ಪರಿಷತ್ ಸಭಾಪತಿ ಪೀಠಕ್ಕೆ ಕಾಂಗ್ರೆಸ್ ಮುತ್ತಿಗೆ ಮೊಳಗಿದ ಘೋಷಣೆ

ಬೆಂಗಳೂರು, ಸೆ. ೨೨- ಪೇಸಿಎಂ ವಿಷಯ ಕುರಿತು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತರೂಢಾ ಬಿಜೆಪಿ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ನಡುವೆಯೇ ಸಭಾಪತಿ ರಘುನಾಥ್ ರಾಂ ಮಲ್ಕಾಪುರೆ ಅವರು ರಾಜ್ಯ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು ಅಂಗೀಕಾರಕ್ಕೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು.
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಒಮ್ಮೆಲೆ ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ ಪೀಠದ ವಿರುದ್ಧ ಘೋಷಣೆ ಕೂಗುತ್ತಿದ್ದಂತೆಯೇ ಬಿಗುವಿನ ವಾತಾವರಣ ನಿರ್ಣಾವಾಯಿತು.ಮಾರ್ಷಲ್‌ಗಳು ಸಭಾಪತಿ ಪೀಠವನ್ನುಸುತ್ತುವರೆದು ಸಭಾಪತಿ ರಘುನಾಥ್ ರಾಮ್ ಮಲ್ಕಾಪುರೆ ಅವರ ರಕ್ಷಣೆಗೆ ಧಾವಿಸಿದರು.
ಈ ನಡುವೆ ಜೆಡಿಎಸ್‌ನ ಮರಿತಿಬ್ಬೇಗೌಡ, ಮಂಜೇಗೌಡ ಹಾಗೂ ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಅವರು ಕುರ್ಚಿಯ ಮೇಲೆ ನಿಂತು ಸರ್ಕಾರ ಮತ್ತು ಸಭಾಪತಿ ಪೀಠದ ವಿರುದ್ಧ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿ, ಸದನ ಸುಸ್ಥಿತಿಯಲ್ಲಿ ಇಲ್ಲದಿರುವಾಗ ವಿಧೇಯಕವನ್ನು ಮಂಡಿಸಿ, ಒಪ್ಪಿಗೆ ಪಡೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗದ್ದಲ, ಗಲಾಟೆ, ಆಡಳಿತ, ಪ್ರತಿಪಕ್ಷಗಳ ಏರಿದ ದ್ವನಿಯ ಮಾತಿನ ಚಕಮಕಿ ನಡುವೆಯೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ವಿಧಾನಸಭೆಯಿಂದ ಅಂಗೀಕಾರದ ರೂಪದಲ್ಲಿದ್ದ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ-೨೦೨೨ ನ್ನು ಮಂಡಿಸಿ, ಅಂಗೀಕಾರಕ್ಕೆ ಮನವಿ ಮಾಡಿದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಪ್ರತಿಪಕ್ಷಧ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ಸಭಾಪತಿಗಳೇ ನೀವು ಏಕಮುಖವಾಗಿ ನಡೆದುಕೊಳ್ಳುತ್ತಿದ್ದೀರಿ. ಸದನದ ಕಲಪಾ ಸರಿದಾರಿಯಲ್ಲಿ ಇಲ್ಲದ ಸಂದರ್ಭದಲ್ಲಿ ವಿಧೇಯಕ ಅಂಗೀಕಾರ ಮಾಡುವುದು ಸಲ್ಲದು ಎಂದು ಪದೇ ಪದೇ ಸಭಾಪತಿಗಳ ಗಮನಕ್ಕೆ ತಂದರು.
ಆದರೂ ಸಭಾಪತಿಗಳು ಇದರ ಕಡೆ ಗಮನ ಕೊಡದೆ ವಿಧೇಯಕದ ಅಂಗಿಕಾರಕ್ಕೆ ಮನವಿ ಮಾಡುವಂತೆ ಕಾನೂನು ಸಚಿವರಿಗೆ ಸಲಹೆ ನೀಡಿದರು.ಆಗ ಪ್ರತಪಿಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸಭಾಪತಿಗಳಿಗೆ ಧಿಕ್ಕಾರ ಎಂದು ಏರಿದ ದ್ವನಿಯಲ್ಲಿ ಕೂಗಿದರು
ಈ ಹಂತದಲ್ಲಿ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠಕ್ಕೆ ಮುತ್ತಿಗೆ ಹಾಕಿ. ಸಭಾಪತಿಗಳ ಕ್ರಮದ ಬಗ್ಗೆ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿದರು
ವಿಧೇಯಕ ಮಂಡನನೆ ಸಂದರ್ಭದಲ್ಲಿ ಗದ್ದಲ, ಗೋಜಲು ಮತ್ತು ಬಿಗುವಿನ ವಾತಾವರಣ ಕಾವೇರುತ್ತಿದ್ದಂತೆ ಮಾರ್ಷಲ್‌ಗಳು ಸಭಾಪತಿ ಪೀಠವನ್ನುಸುತ್ತುವರೆದು ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ರಕ್ಷಣೆಗೆ ನಿಂತರು.
ಗದ್ದಲ, ಗಲಾಟೆ,ಆರೋಪ ಪ್ರತ್ಯಾರೋಪದ ನಡುವೆಯೇ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ-೨೦೨೨ನ್ನು ಸದನ ಅಂಗೀಕಾರಣ ಮಾಡಿದೆ ಎಂದು ಸಭಾಪತಿಗಳು ಪ್ರಕಟಿಸಿ ಕಲಾಪವನ್ನು ಮಧ್ಯಾಹ್ನ ೩ ಗಂಟೆಗೆ ಮುಂದೂಡಿದ್ದರು ಸದನದ ಒಳಗೆ ಹಾಜರಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವ ಭಿತ್ತಿಪತ್ರವನ್ನು, ಪ್ಲೇಕಾರ್ಡ್‌ಗಳನ್ನು ಹಲವು ಸಮಯದವರೆಗೂ ಪ್ರದರ್ಶಿಸಿದರು.