ಪರಿಷತ್ ಚುನಾವಣೆ : ಶಾಸಕ ಕುಮಾರ್‌ ಬಂಗಾರಪ್ಪ ಪ್ರಚಾರ

 ಶಿವಮೊಗ್ಗ, ಡಿ. 3: ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ವಿಧಾನ ಪರಿಷತ್ ಅಭ್ಯರ್ಥಿ ಡಿ.ಎಸ್.ಅರುಣ್  ಬಿರುಸಿನ ಪ್ರಚಾರ ನಡೆಸಿದರು. ತಾಳಗುಪ್ಪ, ಮರತ್ತೂರು, ತಾಳವಾಟ ಗ್ರಾಮ ಪಂಚಾಯಿತಿ ಮತದಾರರ ಸಭೆ ನಡೆಸಿ ಮತಯಾಚಿಸಿದರು. 
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕೊಪ್ಪ, ಸೊರಬ ಪ್ರಭಾರಿ ಶರಾವತಿ ಸಿ.ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮುತ್ತಿಕೊಪ್ಪ, ಶಿವಕುಮಾರ್ ಕಡಸುರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲೇಶ್ವರ ತಡಗಳಲೆ, ಪ್ರಮುಖರಾದ ದೇವೇಂದ್ರಪ್ಪ ಯಲಾಕುಂದಲಿ, ರಾಜಶೇಖರ್ ಗಾಳಿಪುರ, ಮೋಹನ್ ಶೇಟ್ ಉಪಸ್ಥಿತರಿದ್ದರು.