ಪರಿಷತ್ ಚುನಾವಣೆ; ಮುಂಡರಗಿ ನಾಗರಾಜ್ ಗೆ ಟಿಕೇಟ್ ನೀಡಲು ಒತ್ತಾಯ

 ಚಿತ್ರದುರ್ಗ. ನ.೨೨: ಬಳ್ಳಾರಿ ವಿಧಾನಪರಿಷತ್ ಚುನಾವಣೆಗೆ ಜಿಲ್ಲಾ ಪಂಚಾಯಿತ್ ಸದಸ್ಯರು ಹಾಗೂ ಎಡಗೈ ಸಮಾಜದ ಮುಖಂಡರಾದ ಮುಂಡರಗಿ ನಾಗರಾಜ್ ರವರಿಗೆ ಕಾಂಗ್ರೇಸ್ ಟಿಕೇಟ್ ನೀಡಬೇಕೆಂದು ಕೆ.ಪಿ.ಸಿ.ಸಿ. ಸದಸ್ಯರು ಹಾಗೂ ಮಾದಿಗ ಜನಾಂಗದ ಮುಖಂಡರಾದ ಜೆ.ಜೆ.ಹಟ್ಟಿ ಡಾ. ತಿಪ್ಪೇಸ್ವಾಮಿ ಹಾಗೂ ಸಮಾಜದ ಮುಖಂಡರು ಹೈಕಮಾಂಡ್‌ಗೆ ಹಾಗೂ ರಾಜ್ಯ ಕಾಂಗ್ರೇಸ್ ಮುಖಂಡರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲೆಯ ವಿಧಾನಪರಿಷತ್ ಸದಸ್ಯರು ಹಾಗೂ ಎಡಗೈ ಸಮುದಾಯದ ದಲಿತ ಮುಖಂಡರು ಆದ ಮುಂಡರಗಿ ನಾಗರಾಜ್ ರವರನ್ನು ಬೆಂಬಲಿಸಿದ್ದು, ಬೆಂಬಲಿಸಿದ ಪತ್ರವನ್ನು ರಾಜ್ಯ ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ, ವಿರೋಧ ಪಕ್ಷದ ನಾಯಕರಿಗೆ ಮುಂಡರಗಿ ನಾಗರಾಜ್‌ರವರನ್ನು ಬೆಂಬಲಿಸಿ ಬೆಂಬಲದ ಪತ್ರ ನೀಡಿದ್ದಾರೆ. ಕೇಂದ್ರ ವಿರೋಧ ಪಕ್ಷದ ನಾಯಕರಾದ  ಮಲ್ಲಿಕಾರ್ಜುನ್ ಖರ್ಗೆರವರು ಎಡಗೈ ಸಮುದಾಯದವರಿಗೆ ಟಿಕೇಟ್ ಕೊಡಿಸಬೇಕು. ಎಡಗೈ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ. ಈ ಸಮಾಜ ರಾಜಕೀಯವಾಗಿ ಬಲಿಷ್ಟವಾಗಬೇಕಾದರೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಿ  ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.ಈ ವೇಳೆ ಚಿತ್ರದುರ್ಗ ಜಿಲ್ಲೆಯ ಮಾದಿಗ ಯುವಸೇನೆ ರಾಜ್ಯಾಧ್ಯಕ್ಷರಾದ, ಬಿ.ಓ.ಗಂಗಾಧರಯ್ಯ, ಎಸ್.ಕೆ.ಮಹಂತೇಶ್, ಸತೀಶ್, ಜೆ.ಜೆ.ಹಟ್ಟಿ, ಜಗದೀಶ್ ಇತರರಿದ್ದರು.