ಪರಿಷತ್ ಚುನಾವಣೆ-ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು: ಕೆ.ಎಸ್.ಈಶ್ವರಪ್ಪ

ಮೈಸೂರು, ನ.20:- ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ನಲ್ಲಿಯೂ ಸಂಪೂರ್ಣ ಬಹುಮತವನ್ನು ಪಡೆಯಲಿದ್ದೇವೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳಿಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯುವ ಈ ಸಂದರ್ಭದಲ್ಲಿ ಭಾರತೀಯ ಜನತಾಪಕ್ಷದ ನಾಲ್ಕು ತಂಡಗಳಲ್ಲಿ ಇಡೀ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೂಡ ಪ್ರವಾಸ ನಡೆಸುತ್ತಿದ್ದೇವೆ. ಪ್ರವಾಸದ ಸಂದರ್ಭದಲ್ಲಿ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ನ ಮತದಾರರೇನಿದ್ದಾರೆ ಅವರಿಗಾಗಿ ನಡೆಸಿದ ಸಭೆಗಳಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ-ರಾಜ್ಯಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಗಮನ ಸೆಳೆಯುತ್ತಿದ್ದೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 15-16ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಬಾರಿ ರಾಜ್ಯದಲ್ಲಿ ನಮ್ಮ ಶಾಸಕರು ಕಡಿಮೆ ಸಂಖ್ಯೆಯಲ್ಲಿದ್ದರು. ಈ ಬಾರಿ ಅತಿ ಹೆಚ್ಚು ಶಾಸಕರಿದ್ದಾರೆ. ಗ್ರಾ.ಪಂನಲ್ಲೂ ಕಡಿಮೆ ಸಂಖ್ಯೆಯಲ್ಲಿ ಸದಸ್ಯರಿದ್ದರು. ಆದರೆ ಈ ಬಾರಿ ಹೆಚ್ಚು ಮಂದಿ ಇದ್ದೇವೆ. ಮತದಾರರು ಅತಿ ಹೆಚ್ಚು ಇದ್ದು ಬಿಜೆಪಿ ಸದಸ್ಯರು ಗೆಲ್ಲಲಿದ್ದಾರೆ ಎಂದರು.
ಪ್ರಧಾನಿ ನರೇಮದ್ರ ಮೋದಿಯವರು ಗ್ರಾಮೀಣ ಪ್ರದೇಶಕ್ಕೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು, ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಿದೆ. ಬಿಜೆಪಿ ಹೆಚ್ಚು ಸ್ಥಾನವನ್ನು ಪಡೆದು ಈಗಾಗಲೇ ವಿಧಾನಸಭೆಯಲ್ಲಿ ಪೂರ್ಣ ಬಹುಮತವಿದೆ. ವಿಧಾನ ಪರಿಷತ್ ನಲ್ಲಿ ಕೂಡ ಪೂರ್ಣ ಬಹುಮತ ಬರಲಿದೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದರು.
ರಾಜ್ಯದಲ್ಲಿ ವಿಶೇಷವಾಗಿ ನರೇಗಾ ಯೋಜನೆ, ಪ್ರಧಾನಿಯವರು ದೇಶದಲ್ಲಿ ಯಾವುದೇ ವ್ಯಕ್ತಿ ಉದ್ಯೋಗವಿಲ್ಲದೆ ಉಪವಾಸವಿರಬಾರದು. ಎಂದು ಯಾರ್ಯಾರು ಜಾಬ್ ಕಾರ್ಡ್ ಬಯಸುತ್ತಾರೋ ಅವರಿಗೆ ಜಾಬ್ ಕಾರ್ಡ್, ಅತಿ ಹೆಚ್ಚು ಉದ್ಯೋಗ ಕೇಳಿ ಬಂದವರಿಗೆ ಉದ್ಯೋಗ ನೀಡುವಂತೆ ಹೇಳಿದ್ದರು. ಅದರಂತೆ ಕಳೆದ ವರ್ಷ 13ಕೋಟಿ ಗುರಿಯಾಗಿ ಕೊಟ್ಟಿದ್ದರು. 15 ಕೋಟಿ ಸಾಧನೆ ಮಾಡಿದ್ದೇವೆ. ಇದೀಗ 150ದಿನವನ್ನು ಮಾನವ ದಿನವನ್ನಾಗಿ ಮಾಡಿಕೊಟ್ಟಿದ್ದು 400ಕೋಟಿಗಳಷ್ಟು ಹೆಚ್ಚಿಗೆ ನೀಡಲಾಗಿದೆ. ಸಣ್ಣ ರೈತರ ಆಸ್ತಿ ಜಾಸ್ತಿಯಾಗಲು ನರೇಗಾ ಯೋಜನೆ ಅನುಕೂಲವಾಗುತ್ತಿದೆ. ಕಲ್ಯಾಣಗಳ ಅಭಿವೃದ್ಧಿ ಕೂಡ ಆಗುತ್ತಿದೆ. ರಾಜ್ಯ ಸರ್ಕಾರದ ಆಸ್ತಿ ಕೂಡ ಹೆಚ್ಚುತ್ತಿದೆ ಎಂದು ತಿಳಿಸಿದರು.
2024ರಲ್ಲಿ ರಾಜ್ಯದ ಪ್ರತಿ ಮನೆಗೂ ಕೂಡ ನಲ್ಲಿ ನೀರು ಯೋಜನೆ ಪೂರ್ಣಗೊಳ್ಳಲಿದೆ. ಗ್ರಾಮಪಂಚಾಯತ್ ಸದಸ್ಯರು ಹೆಚ್ಚಿನ ಸಹಕಾರ ನಿಡಿದ್ದಾರೆ. ಕೋವಿಡ್ ಬಂದ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ಮಾಡಿ ಟಾಸ್ಕ ಪೆÇೀರ್ಸ್ ಸಮಿತಿ ಮಾಡಿ ಪ್ರತಿ ವ್ಯಕ್ತಿಗೂ ಲಸಿಕೆ ನೀಡಬೇಕು ಎಂದಿದ್ವಿ ಯಶಸ್ವಿಯಾಗಿದೆ. ದೇಶದಲ್ಲಿ 100ಕೋಟಿ ಲಸಿಕೆ ದಾಟಿದೆ. ಗ್ರಾಪಂ ಟಾಸ್ಕ್ ಪೆÇೀರ್ಸ್ ಸಮಿತಿ ಸಹಾಯ ಮರೆಯಲ್ಲ. ಇಡೀ ಗ್ರಾಮೀಣ ಜವಾಬ್ದಾರಿಯನ್ನು ನಿಭಾಯಿಸಿದ್ದೀರಿ ಎಂದರು.
ಪ್ರತಿ ಗ್ರಾಪಂ ಗೂ ಕೂಡ ಸೋಲಾರ್ ಲೈಟ್ ಹಾಕಿಸುವ ತೀರ್ಮಾನ ತೆಗೆದುಕೊಂಡು ಅತಿ ಹೆಚ್ಚು ಹಾಕಿರುವುದು ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಹಾಕಿಲ್ಲ ಅಲ್ಲಿ ಹಾಕಲು ಸೂಚನೆ ಕೊಟ್ಟಿದ್ದೇವೆ. ಅಂತರ್ಜಲ ಜಾಸ್ತಿ ಮಾಡಬೇಕು. ಮಳೆಯನೀರು ಸಮುದ್ರಕ್ಕೆ ಹೋಗುತ್ತಿತ್ತು. ಅದನ್ನು ಭೂಮಿಯಲ್ಲಿ ಇಂಗಿಸುವ ಕೆಲಸವನ್ನು ಹೆಚ್ಚು ಮಾಡುತ್ತಿದ್ದೇವೆ. ಯಶಸ್ಸು ಕೂಡ ಕಾಣುತ್ತಿದ್ದೇವೆ. ಕೇಂದ್ರ ಸರ್ಕಾರದ ಪಿಎಂ ಸಡಕ್ ಯೋಜನೆ ಕರ್ನಾಟಕ ರಾಜ್ಯಕ್ಕೆ ತುಂಬಾ ಅನುಕೂಲವಾಗಿದೆ 2ಕೋಟಿ ರೂ.ಹಣ ಬಿಡುಗಡೆಯಾಗಿದೆ. ರಸ್ತೆ, ನೀರು, ನರೇಗಾ ಕಾಮಗಾರಿ, ಶೌಚಾಲಯ, ಸೋಲಾರ್ ಲೈಟ್ ಕಾರ್ಯ ಮಾಡುತ್ತಿರುವುದ ರಿಂದ ವಿಧಾನ ಪರಿಷತ್ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಬಿಜೆಪಿ ಸುಸಂಘಟಿತವಾಗಿ ಪ್ರತಿ ಬೂತ್ ಗೂ ಪಕ್ಷದ ಅಧ್ಯಕ್ಷ ನಳೀನ ಕುಮಾರ್ ಕಟೀಲ್ ಶಕ್ತಿ ತುಂಬುತ್ತಿದ್ದಾರೆ. ಬರುತ್ತಿರುವ ಚುನಾವಣೆಯಲ್ಲಿ ಗೆಲ್ಲುತ್ತಿರುವುದೇ ಇದಕ್ಕೆ ಸಾಕ್ಷಿ. ಸಂಘಟನೆ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಎಸ್.ಟಿ.ಸೋಮಶೇಖರ್, ಗ್ರಾಮಾಂತರ ಅಧ್ಯಕ್ಷರಾದ ಮಂಗಳಾ , ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಮತ್ತಿತರರಿದ್ದರು.