ಪರಿಷತ್ ಚುನಾವಣೆ : ನಗರಸಭೆ ಸದಸ್ಯರಿಗೆ ತರಬೇತಿ

ರಾಯಚೂರು.ಡಿ.೦೪- ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ರೀತಿ ಮತ ಚಲಾಯಿಸಬೇಕೆಂಬ ಮಾಹಿತಿಯನ್ನು ನಗರಸಭೆ ಸದಸ್ಯರಿಗೆ ಆಯುಕ್ತ ಕೆ.ಮುನಿಸ್ವಾಮಿ ಅವರು ಮಾಹಿತಿ ನೀಡಿದರು.
ಚುನಾವಣೆಯಲ್ಲಿ ಮತ ಚಲಾವಣೆ ಪ್ರಕ್ರಿಯೆ ಮತ್ತು ಅನುಸರಿಸಬೇಕಾದ ನಿಯಮಗಳನ್ನು ನಗರಸಭೆ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಚುನಾವಣೆಯನ್ನು ಯಾವುದೋ ಚಿಹ್ನೆ ಇರುವುದಿಲ್ಲ. ಅಭ್ಯರ್ಥಿ ಹೆಸರನ್ನಾಧರಿಸಿ ಮತ ಚಲಾಯಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತ ಕುಲಗೆಡದಂತೆ ಸದಸ್ಯರು ಎಚ್ಚರ ವಹಿಸುವ ಕ್ರಮಗಳ ಬಗ್ಗೆ ಆಯುಕ್ತರು ನಗರಸಭೆಯ ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಿದರು.
ಸದಸ್ಯರು ಚಲಾಯಿಸುವ ಪ್ರತಿ ಮತ ಅರ್ಹಗೊಳ್ಳುವಂತೆ ಮಾಡಲು ಎಚ್ಚರಿಕೆಯಿಂದ ಮತವನ್ನು ಚಲಾಯಿಸುವಂತೆ ಸದಸ್ಯರಿಗೆ ತಿಳಿಸಿದರು. ಮತಗಟ್ಟೆಗೆ ಬರುವುದರಿಂದ ಹಿಡಿದು, ಮತ ಚಲಾಯಿಸುವ ಪ್ರಕ್ರಿಯೆವರೆಗೂ ಪ್ರತಿ ಹಂತದ ವಿವರಣೆಯನ್ನು ಸದಸ್ಯರಿಗೆ ನೀಡಲಾಯಿತು. ಪರದೆ ಮೇಲೆ ಒಂದೊಂದು ಹಂತದ ಮಾಹಿತಿಯನ್ನು ಅವರು ಸದಸ್ಯರಿಗೆ ನೀಡಿದರು.