ಪರಿಷತ್ ಚುನಾವಣೆ: ಜೆಡಿಎಸ್ ಮುಖಂಡರ ಮತಯಾಚನೆ

ಚಾಮರಾಜನಗರ, ನ.30-ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜೆಡಿಎಸ್ ಮುಖಂಡರಿಂದ ಚಾಮರಾಜನಗರ ತಾಲೂಕಿನ ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇಂದು ಮತಯಾಚನೆ ಮಾಡಲಾಯಿತು.
ಜೆಡಿಎಸ್ ಪಕ್ಷದ ಚಾಮರಾಜನಗರ ಜಿಲ್ಲಾ ವೀಕ್ಷಕ ಎಂ.ಜೆ.ಸತ್ಯನಾರಾಯಣ್ ಹಾಗೂ ಅಭ್ಯರ್ಥಿ ಮಂಜೇಗೌಡರ ಪುತ್ರ ಭರತ್ ಗೌಡ ಅವರ ನೇತೃತ್ವದಲ್ಲಿ ಚಾಮರಾಜನಗರ ತಾಲೂಕಿನ ಅಟ್ಟಗುಳಿಪುರ, ವೆಂಕಟಯ್ಯನಚತ್ರ, ಪುಣಜನೂರು, ಹರದನಹಳ್ಳಿ, ಅಮಚವಾಡಿ, ದೊಡ್ಡಮೋಳೆ ಸೇರಿದಂತೆ ವಿವಿಧ ಗ್ರಾಮಪಂಚಾಯ್ತಿಗಳಲ್ಲಿ ಮತಯಾಚನೆ ಮಾಡಲಾಯಿತು.
ಗ್ರಾಮಪಂಚಾಯ್ತಿ ಸದಸ್ಯರ ಬಳಿ ತೆರಳಿದ ಜೆಡಿಎಸ್ ಮುಖಂಡರು ಜೆಡಿಎಸ್ ಅಭ್ಯರ್ಥಿ ಮಂಜೇಗೌಡರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡುವಂತೆ ಮನವಿ ಮಾಡಿಕೊಂಡರು.
ಮತಯಾಚನೆ ವೇಳೆ ತಾಲೂಕು ಅಧ್ಯಕ್ಷ ಸಯ್ಯದ್ ಅಕ್ರಂ, ಮೈಸೂರಿನ ಮಾಜಿ ಉಪ ಮಹಾ ಪೌರ ಶಫಿಉಲ್ಲಾ, ಡಿ.ಎನ್. ಉμÁ, ಮಹೇಶ್ ಗೌಡ, ಅಭಿ, ಭಗವಾನ್, ರವಿ ಸೇರಿದಂತೆ ಜೆಡಿಎಸ್ ಮುಖಂಡರು ಇದ್ದರು.