ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಮತಯಾಚನೆ

ನಂಜನಗೂಡು: ನ.30:- ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆ ಪೂರ್ವಭಾವಿ ಸಭೆಯನ್ನು ಶ್ರೀ ಸಂತಾನ ಗಣಪತಿ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ ಡಿಸೆಂಬರ್ ಹತ್ತನೇ ತಾರೀಕು ನಡೆಯುವ ಮೈಸೂರು ಮತ್ತು ಚಾಮನಗರ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆ ನಡೆಯುತ್ತದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಡಾಕ್ಟರ್ ತಿಮ್ಮಯ್ಯ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ನಗರಸಭೆ ಸದಸ್ಯರು ಮತ್ತು ಪುರಸಭೆ ಸದಸ್ಯರುಗಳು ತಮ್ಮ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾಕ್ಟರ್ ತಿಮ್ಮಯ್ಯ ಅವರನ್ನು ಆಯ್ಕೆ ಮಾಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು
ನಮ್ಮ ಕ್ಷೇತ್ರದಲ್ಲಿ 26 ಗ್ರಾಮ ಪಂಚಾಯಿತಿ 31 ನಗರಸಭೆ ವಾರ್ಡ್ ಗಳು ಒಟ್ಟು ಎಲ್ಲಾ ಪಕ್ಷದಿಂದ ಹಾಗೂ ನಕ್ಷತ್ರಗಳಿಂದ 527 ಸದಸ್ಯರುಗಳು ಆಯ್ಕೆಯಾಗಿದ್ದಾರೆ ಇದರಲ್ಲಿ ಕಾಂಗ್ರೆಸ್ ಪಕ್ಷದಿಂದ 226 ಸದಸ್ಯರುಗಳು ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ತಿಳಿಸಿದರು.
ಅದರಿಂದ ನಿಮ್ಮ ಮತಗಳ ಜೊತೆಗೆ ವಿವಿಧ ಪಕ್ಷಗಳ ಸದಸ್ಯರುಗಳ ಮತಗಳನ್ನು ಕರೆ ತರಲು ಪ್ರಯತ್ನಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಡಾಕ್ಟರ್ ತಿಮ್ಮಯ್ಯ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾಜಿ ಸಂಸದ ಧ್ರುವನಾರಾಯಣ ಮಾಜಿ ಸಚಿವ ಮಹದೇವಪ್ಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾಜಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ ಬುಲೆಟ್ ಮಾದೇವಪ್ಪ ಕುರಟ್ಟಿ ಮಹೇಶ್ ನಗರಾಧ್ಯಕ್ಷ ಶಂಕರ್ ಮಾರುತಿ ವಿಜಿ ಕುಮಾರ್ ಮಂಜುನಾಥ್ ಮುದ್ದ ಮಾದಶೆಟ್ಟಿ ಲತಾ ಸಿದ್ದಶೆಟ್ಟಿ ಅಜ್ಗಾರ್ ಹಳ್ಳದಕೆರಿ ಶ್ರೀನಿವಾಸ್ ಅಕ್ಮಲ್ ಶಂಕರಪ್ಪ ದೇವನಹಳ್ಳಿ ಗೋವರ್ಧನ್ ನಗರಸಭೆ ಸದಸ್ಯರಾದ ಗಂಗಾಧರ್ ಪ್ರದೀಪ್ ಮಹೇಶ್ ಗಾಯತ್ರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮುಖಂಡರು ಸದಸ್ಯರುಗಳು ಭಾಗವಹಿಸಿದ್ದರು.