ಪರಿಷತ್ ಚುನಾವಣೆಗೆ ಸಿದ್ಧತೆ

ಚಡಚಣ ಡಿ 9: ನಾಳೆ ನಡೆಯಲಿರುವ ವಿಧಾನಪರಿಷತ್ ಚುನಾವಣೆಗಾಗಿ ಚಡಚಣದಲ್ಲಿ ಭರದ ಸಿದ್ಧತೆ ನಡೆದಿದೆ.
ಚಡಚಣ ತಾಲೂಕಿನ 14 ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮತಗಟ್ಟೆಗಳು ಬರುತ್ತವೆ.ಚುನಾವಣೆ ನಿಮಿತ್ತ 57 ಸಿಬ್ಬಂದಿಗಳನ್ನು ನೇಮಿಸಲಾಗಿದೆ. 4 ಬಸ್ಸುಗಳು ಮತ್ತು 2 ಮಿನಿ ಬಸ್ಸುಗಳನ್ನು ಬಳಸಲಾಗುತ್ತಿದೆ.
ಚಡಚಣ ತಾಲೂಕ ದಂಡಾಧಿಕಾರಿ ಸುರೇಶ್ ಚವಲರ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಅನಿಲ ಹಳ್ಳಿ ಮತ್ತು ಪೊಲೀಸ್ ಅಧಿಕಾರಿಗಳು sಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದು ಸಿದ್ಧತೆಯನ್ನು ವೀಕ್ಷಿಸಿದರು