ಪರಿಷತ್ತಿನ ಪ್ರಕಟಣೆ ಜಿಲ್ಲಾ ಕೇಂದ್ರದಲ್ಲಿ ಲಭ್ಯತೆಗೆ ಯತ್ನ: ನಿಷ್ಟಿ ರುದ್ರಪ್ಪ

ಬಳ್ಳಾರಿ, ಏ.04: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಕೇವಲ ಬೆಂಗಳೂರಿಗೆ ಮಾತ್ರ ಲಭ್ಯವಾಗುತ್ತವೆ. ಅವನ್ನು ಜಿಲ್ಲಾ ಮಟ್ಟದಲ್ಲೂ ಲಭ್ಯವಾಗುವಂತೆ ಪ್ರಯತ್ನ ಮಾಡಲಿದೆಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧೆ ಮಾಡಲು ಬಯಸಿರುವ. ಪರಿಷತ್ತಿನ‌ ಮಾಜಿ ಅಧ್ಯಕ್ಷ ನಿಷ್ಟಿ ರುದ್ರಪ್ಪ ಹೇಳಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ತಾವು ಈ ಹಿಂದೆ ಎರೆಡು ಬಾರಿ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಕೆಲಸ ಕಾರ್ಯಗಳನ್ನು ತಿಳಿಸಿದರು.
ಜನರ ಸಹಕಾರ ಇದ್ದರೆ ಕಾರ್ಯಕ್ರಮಗಳ ಆಯೋಜನೆ ಮಾಡಲು ಸಾಧ್ಯ ಎಂದ ಅವರು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕೆಂಬ ಬಯಕೆ ನನ್ನದು. ಸಂಡೂರಿನಲ್ಲಿ ನಿವೇಶನ ಖರೀದಿ‌ಮಾಡಿದೆ ಭವನ‌ ನಿರ್ಮಾಣ ಆಗಬೇಕು ಎಂದರು. ಪರಿಷತ್ತು ಹಣ ಮಾಡುವ ಕೇತ್ರ ಅಲ್ಲ. ಇಲ್ಲಿ ಸೇವೆ ಮುಖ್ಯ ಎಂದರು. ನಾಳೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೇ ಬಯಸಿ ನಾಮ ಪತ್ರ ಸಲ್ಲಿಸುವುದಾಗಿ ಹೇಳಿದರು. ಪರಿಷತ್ತಿನ ಅಧ್ಯಕ್ಷ ಸ್ಥಾನ ಐದು ವರ್ಷಗಳಿಗಿಂತ ಮೂರು ವರ್ಷಗಳಿಗೆ ಇರುವುದು ಸೂಕ್ತ ಎಂದರು.
ಸಾಹಿತಿಗಳಲ್ಲಿ ಗಂಡು, ಹೆಣ್ಣು ಎಂಬ ಭೇದ ಭಾವ ಬೇಕಿಲ್ಲ. ಸ್ಪರ್ಧೆ ಇದ್ದಾಗ ಎಲ್ಲರೂ ಸಮಾನರು ಎಂದು ಭಾವಿಸಬೇಕು. ಸುದ್ದಿಗೋಷ್ಟಿಯಲ್ಲಿ ಕಸಾಪ ಮಾಜಿ ಹೆಚ್.ಹಂಪನಗೌಡ, ಬಸವರಾಜ್ ಗದುಗಿನ, ಬಸವರಾಜ್ ಬಿಸಲಹಳ್ಳಿ, ಮರಿದೇವಯ್ಯ, ಕಪ್ಪಗಲ್ಲು ಆಚಾರಿ, ವೀರೇಶ್ ಗಂಗಾವತಿ, ಪ್ರತಾಪ್ ಕುಮಾರ್, ಎರ್ರಿಸ್ವಾಮಿ, ಮೊದಲಾದವರು ಇದ್ದರು.