ಪರಿಶ್ರಮಿಗಳಿಗೆ ಯಾವ ರೋಗವೂ ಬರುವುದಿಲ್ಲ

ಚಿತ್ರದುರ್ಗ ಮಾ. 30 – ಕೊರೋನಾಕ್ಕಿಂತ ಮೊದಲು ಜಗತ್ತು ಹಣ, ಅಧಿಕಾರ, ಆಸ್ತಿಯ ಜೊತೆ ಸಾಗುತ್ತಿತ್ತು. ಕೊರೋನಾ ನಂತರ ಯಾವುದೂ ಶಾಶ್ವತ ಅಲ್ಲ, ಆರೋಗ್ಯವೇ ಭಾಗ್ಯ ಎನ್ನುವ ಮಟ್ಟಕ್ಕೆ ಬಂದಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಓಪಿಡಿ ಬ್ಲಾಕ್, ಎಸ್.ಜೆ.ಎಂ. ಹೆಲ್ತ್ ಪ್ರಿವಿಲೆಜ್ ಕಾರ್ಡ್ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಶ್ರೀಮಂತರಾಗುವುದಕ್ಕಿಂತ ಆರೋಗ್ಯವಂತರಾಗಬೇಕು. ಪರಿಶ್ರಮಕ್ಕೆ ಒಳಗಾದವರಿಗೆ ಯಾವ ರೋಗವೂ ಬರುವುದಿಲ್ಲ. ಅವರಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಪ್ರತಿಯೊಬ್ಬರು ಕೊರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ತಮ ಮತ್ತು ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂಬ ಕನಸಿತ್ತು. ಅದರಲ್ಲಿ ಸಫಲರಾಗಿz್ದೆÃವೆ. ನಮ್ಮಲ್ಲಿ ನುರಿತ ತಜ್ಞ ವೈದ್ಯರಿದ್ದಾರೆ. ಆಸ್ಪತ್ರೆಯಲ್ಲಿ ಹೃದಯರೋಗ, ತುರ್ತುಚಿಕಿತ್ಸಾ ವಿಭಾಗ, ಸಂಪೂರ್ಣ ಹೃದಯ ತಪಾಸಣೆ, 24×7 ಕ್ಯಾತ್‌ಲ್ಯಾಬ್, ಸಿಸಿಯು/ಐಸಿಯು, ಔಷಧಾಲಯ, ಹೃದಯ ತುರ್ತು ಚಿಕಿತ್ಸೆ, ಇಕೋ, ಟಿಎಂಟಿ ಸೌಲಭ್ಯಗಳಿವೆ. ಇಂದು ಸೂಪರ್ ಸ್ಪೆಷಾಲಿಟಿ ಓಪಿಡಿಯನ್ನು ತೆರೆಯಲಾಗಿದೆ. ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಚಳ್ಳಕೆರೆಗೆ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ. ಹೆಲ್ತ್ ಪ್ರಿವಿಲೇಜ್ ಕಾರ್ಡ್ ಬಿಡುಗಡೆಗೊಳಿಸಲಾಗಿದ್ದು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಉತ್ತಮ ಚಿಕಿತ್ಸೆ ಪಡೆಯಲು ಸಹಕಾರಿಯಾಗಲಿದೆ ಎಂದರು.ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಇನ್ನು ಮುಂದೆ ತಾಲ್ಲೂಕು ಮಟ್ಟದಲ್ಲಿ ಹೃದಯರೋಗ ಚಿಕಿತ್ಸೆ ಪಡೆಯಲು ಅನುಕೂಲಗಳಿವೆ. ನಮ್ಮ ದೇಶದ ವೈದ್ಯರು ಹೊರರಾಷ್ಟçಗಳಲ್ಲಿ ಹೆಸರು ಮಾಡಿದ್ದಾರೆ. ಕರ್ನಾಟಕದ ಓರ್ವ ವೈದ್ಯರು ಅಮೆರಿಕ ಅಧ್ಯಕ್ಷರಿಗೆ ಸಲಹೆಗಾರರಾಗಿ ಇರುವುದು ಹೆಮ್ಮೆಯ ವಿಚಾರ. ಬಡವರಿಗೆ ಸರ್ಕಾರವೆ ಇನ್ಸೂರೆನ್ಸ್ ಪ್ರೀಮಿಯಂ ಭರಿಸಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್ ಜಾರಿಗೊಳಿಸಿರುವುದರಿಂದ ಬಡವರಿಗೆ ಅನುಕೂಲವಾಗಿದ್ದು 1500 ಕಾಯಿಲೆಗಳಿಗೆ ಚಿಕಿತ್ಸೆ ದೊರೆಯಲಿದೆ ಎಂದರು.ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ಜಿ. ರಾಧಿಕಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಬಸವರಾಜು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಕರ‍್ಯದರ್ಶಿ ಎ.ಜೆ. ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಪ್ರಶಾಂತ್ ಹಾಗು ವೈದ್ಯಕೀಯ ಅಧೀಕ್ಷಕ ಡಾ. ಎಲ್. ಪಾಲಾಕ್ಷಯ್ಯ, ಡಾ. ಸುರೇಶ್ ಕಡ್ಲಿ, ಡಾ. ನಾರಾಯಣಮೂರ್ತಿ, ಡಾ. ನಾಗೇಂದ್ರ, ಡಾ. ರಾಜೇಶ್, ಡಾ. ಸುಜಯ್, ಡಾ. ಮಂಜುನಾಥ್, ಡಾ. ವಿವೇಕ್, ಡಾ. ಕಿರಣ್‌ಕುಮಾರ್ ವೇದಿಕೆಯಲ್ಲಿದ್ದರು.
Attachments area