
ವಿಜಯಪುರ.ಏ೨೫:ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಯ ವ್ಯರ್ಥ ಮಾಡದೇ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಮಹತ್ವ ಕೊಡಬೇಕೆಂದು, ತಾವು ಪಟ್ಟ ಪರಿಶ್ರಮವೆಂದೂ ವ್ಯರ್ಥವಾಗುವುದಿಲ್ಲ ಎಂದು ಇನ್ಸ್‌ಪೈರ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಬಿ.ಎನ್.ಶ್ರೀನಿವಾಸ್ ತಿಳಿಸಿದರು.
ಅವರು ಇನ್ಸ್‌ಪೈರ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದು. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡುವುದನ್ನು ಬಿಟ್ಟು, ಅಭ್ಯಾಸದಲ್ಲಿ ಮಗ್ನರಾದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಭಾಗದ ನಮ್ಮ ಕಾಲೇಜಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ತಂದಿರುವುದು ಸಂತೋಷ ತಂದಿದ್ದು, ಮುಂದಿನ ದಿನಗಳಲ್ಲಿ ನಮ್ಮ ಕಾಲೇಜಿನಲ್ಲಿ ಸಿ.ಇ.ಟಿ, ಜೆ.ಇ.ಇ. ನೀಟ್ ಮುಂತಾದ ವಿಷಯಗಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.
ಪ್ರಾಂಶುಪಾಲೆ ಎನ್.ಎಸ್. ಶಿಲ್ಪ ಮಾತನಾಡಿ, ಈ ಬೇಸಿಗೆ ಶಿಬಿರವು ಒಂದು ವಾರದ ಕಾಲ ಆಯೋಜನೆ ಮಾಡಲಾಗಿದ್ದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಎಲ್ಲಾ ಕಾಲೇಜಿನಲ್ಲಿ ಶಾಲೆಯು ಪ್ರಾರಂಭವಾದ ಮೇಲೆ ಕಾರ್ಯಕ್ರಮ ಆಯೋಜಿಸುತ್ತಾರೆ. ಅದರೆ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಆತ್ಮ ವಿಶ್ವಾಸ, ಸಾಮಾಜಿಕ ಜವಾಬ್ದಾರಿ, ಮುಂತಾಗಿ ಎಲ್ಲಾ ತರಹದ ಚಟುವಟಿಕೆಗಳನ್ನು ಕಾಲೇಜಿನ ರಜಾದಿನಗಳಲ್ಲಿ ಹೇಳಿ ಕೊಡಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ನುರಿತ ಶಿಕ್ಷಕರಿಂದ ಯಾವ ರೀತಿ ನೀವು ಹೆಚ್ಚಿನ ವಿದ್ಯಾಭ್ಯಾಸ ಕಡೆ ಗಮನಹರಿಸಬೇಕು ಎಂಬುದರ ಬಗ್ಗೆ ತಿಳಿಯಬಹುದು. ತಾಳ್ಮೆಯಿಂದ ನೀವು ಓದಿನ ಕಡೆ ಹೆಚ್ಚು ಗಮನ ಹರಿಸಿದಾಗ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದರು.
ಉಪನ್ಯಾಸಕ ಸುಬ್ರಮಣಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆಯುವುದರ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕೆಂದರು.
ಈ ಸಂದರ್ಭದಲ್ಲಿ ೨೦೨೨/೨೩ ನೇ ಸಾಲಿನ ಪಿಯು ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ ೧೦ ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಾದ ಧನುಶ್ರೀ ೯೮% , ನಂದಿತಾ ೯೮%, ರಶ್ಮೀತಾ ೯೪.೩೩%,ರವರುಗಳನ್ನು ಸನ್ಮಾನಿಸಲಾಯಿತು.
ಇ-ಮೇಲ್ ನಲ್ಲಿ ಫೋಟೋ ಕಳುಹಿಸಲಾಗಿದೆ
೨೪-ವಿಜ್.೬ಎ;-ವಿಜಯಪುರದ ಇನ್ಸ್‌ಪೈರ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ೨೦೨೨/೨೩ ನೇ ಸಾಲಿನ ಪಿಯು ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ ೧೦ ನೇ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಾದ ಧನುಶ್ರೀ ೯೮% , ನಂದಿತಾ ೯೮%, ರಶ್ಮೀತಾ ೯೪.೩೩%,ರವರುಗಳನ್ನು ಸನ್ಮಾನಿಸಲಾಯಿತು.
೨೪-ವಿಜ್.೬ಬಿ;-ವಿಜಯಪುರದ ಇನ್ಸ್‌ಪೈರ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರವನ್ನು ಉದ್ಘಾಟನೆ ಮಾಡುತ್ತಿರುವ ವಿದ್ಯಾರ್ಥಿನಿಯರು. ಇನ್ಸ್‌ಪೈರ್ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಬಿ.ಎನ್.ಶ್ರೀನಿವಾಸ್, ಪ್ರಾಂಶುಪಾಲೆ ಶಿಲ್ಪ ಉಪಸ್ಥಿತರಿರುವರು.