ಪರಿಶ್ರಮವಿದ್ದಲ್ಲಿ ನಿಶ್ಚಿತ ಯಶಸ್ಸು ಸಾಧ್ಯ: ಡಾ.ಕರ್ಜಗಿ

ಕಲಬುರಗಿ: ಸೆ.15:ವಿದ್ಯಾರ್ಥಿ ಜೀವನವಾಗಲಿ, ಇತರ ಯಾವುದೇ ಕ್ಷೇಯ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಅದು ಪರಿಶ್ರಮದಿಂದ ಸಾಧ್ಯ ಎಂದು ಖ್ಯಾತ ಶಿಕ್ಷಣ ತಜ್ಞ, ಅಂಕಣಕಾರ ಡಾ.ಗುರುರಾಜ್ ಕರ್ಜಗಿ ಹೇಳಿದರು.

ನಗರದ ಕಪನೂರಿನ ಶಾಂತಿ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟನ ಶಕುಂತಲಾ ಪಿಯು ಕಾಲೇಜು ಮತ್ತು ಶಾಂತಿಧಾಮ ಪಬ್ಲಿಕ್ ಶಾಲೆಯಲ್ಲಿ ಪ್ರೇರಣೋಪನ್ಯಾಸ ನೀಡಿದ ಅವರು, ಈಚೆಗೆ ಜರುಗಿದ ಚಂದ್ರಯಾನ-3 ಯಶಸ್ವಿಯಾಗುವಲ್ಲಿ ವಿಜ್ಞಾನಿಗಳ ಕಠಿಣ ಪರಿಶ್ರಮ ಅಡಗಿರುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ನಾವು ವಿಶ್ವಾಸದ ಜತೆಗೆ ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳಬೇಕೆಂದು ಶಿಕ್ಷಕ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.ಯಾರೂ ಭವಿಷ್ಯದ ರೇಖೆ ನಂಬಬೇಡಿ ಪರಿಶ್ರಮದ ರೇಖೆ ನಂಬಿ. ಶಿಕ್ಷಕರು ಪರಿಶ್ರಮದಿಂದ ಬೋಧಿಸಿದರೆ ವಿದ್ಯಾರ್ಥಿಗಳು ಸಹ ಕಠಿಣತೆಯಿಂದ ಓದಿದರೆ ಪರೀಕ್ಷೆ ಯಲ್ಲಿ ಖಂಡಿತವಾಗಿ ಯಶಸ್ಸು ಸಾಧಿಸಬಹುದಾಗಿದೆ ಎಂದು ಡಾ. ಕರ್ಜಗಿ ವಿವರಣೆ ನೀಡಿದರು.ಶಾಂತಿ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾದ ಚಿದಂಬರಾವ ಪಾಟೀಲ್ ಮರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಶರಣಬಸಪ್ಪ ಹೀರಾ, ಧನಂಜಯ, ಬಸವರಾಜ ಬೆಟಗೇರಿ, ಕುಲಕರ್ಣಿ, ಶಕುಂತಲಾ ಪಾಟೀಲ್, ಕೇಶವಲು, ಕಾರ್ಯದರ್ಶಿ ಶಿವರಾಜ ಪಾಟೀಲ್, ಮುಖ್ಯ ಗುರುಗಳಾದ ರಾಜೇಶ್ವರಿ ಹಿರೇಮಠ ಸೇರಿದಂತೆ ಮುಂತಾದವರಿದ್ದರು.