ಪರಿಶ್ರಮದಿಂದ ಗುರಿ ಸಾಧ್ಯ : ಅಂಗಡಿ

ಕೆರೂರ, ಏ24 : ಬಡತನದ ನೆಪವೊಂದೇ ವ್ಯಕ್ತಿಯ ಬದುಕಿನ ಸಾಧನೆಗೆ ನೆಪವಾಗಬಾರದು.ಜೀವನ ದಲ್ಲಿ ಸಾಧಿಸುವ ಛಲ, ಗುರಿಯೊಂದಿಗೆ ಪರಿಶ್ರಮ ಹಾಕಿದರೆ ಅಂದುಕೊಂಡಿದ್ದನ್ನು ಸಾಧಿಸ ಬಹುದು ಎಂದು ಸಾಫ್ಟವೇರ್ ಉದ್ಯೋಗಿ ಕೃಷ್ಣಾ ಅಂಗಡಿ ಹೇಳಿದರು.
ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಫಕೀರಬೂದಿಹಾಳ ಗ್ರಾಮದ ಪ್ರಮುಖರು, ಮುಖಂ ಡರು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶೈಕ್ಷಣಿಕ ಹಂತದಲ್ಲಿ ನನಗೂ ಸಾಕಷ್ಟು ಬಡತನ ಕಾಡಿತು.ಅನೇಕ ಸವಾಲುಗಳು ಎದುರಾದವು. ಏನೇ ಆಗಲಿ ನಾನು ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ದೃಢ ನಿರ್ಧಾರದಿಂದ ಇಂದು ಉನ್ನತ ಸಾಧನೆ ಸಾಧ್ಯವಾಯಿತು ಎಂದು ಕೃಷ್ಣಾ ಅಂಗಡಿ ಎಂದು ಬದುಕಿನ ಸಾಧನೆ ಯನ್ನು ತೆರೆದಿಟ್ಟರು. ಫಕೀರಬೂದಿಹಾಳ ಗ್ರಾಮ ಪಂಚಾಯತ ಉಪಾಧ್ಯಕ್ಷ ಈರಣ್ಣ ಮೇಟಿ ಅವರು, ಕೃಷ್ಣಾ ಕಡು ಬಡತನದಲ್ಲಿ ಬೆಳೆದವ.ಎಷ್ಟೇ ಕಷ್ಟಗಳು ಬಂದರೂ ಎದುರಿಸಿ, ಶೈಕ್ಷಣಿಕ ಹಂತದಲ್ಲಿ ಪ್ರತಿಭಾ ವಂತನಾಗಿ ಸಾಧನೆ ಮಾಡಿ, ಉನ್ನತ ಸಾಧನೆಯ ಮೂಲಕ ಈಗ ಜರ್ಮನಿ ದೇಶಕ್ಕೆ ತೆರಳುತ್ತಿ ದ್ದು ಅವರ ಸಾಧನೆ ಹೆಮ್ಮೆ ಮೂಡಿಸುತ್ತದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಫಕೀರಬೂದಿಹಾಳ ಗ್ರಾಮ ಪಂಚಾಯತ ಅಧ್ಯಕ್ಷ ದುಸ್ಸೆಂಗೆಪ್ಪ ಮುರನಾಳ, ಮುಖಂಡ ಷಡಕ್ಷರಯ್ಯ ಸಾಲಿಮಠ, ಮಲ್ಲೇಶಿ ಬೀರಣ್ಣವರ, ರಾಘವೇಂದ್ರ, ಮಹಾಂತೇಶ, ಅಬೂಬಕರ ಸೇರಿದಂತೆ ಇತರರು ಇದ್ದರು.