ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ “ದರ್ಬಾರ್” ಆರಂಭಕ್ಕೆ ಮುಹೂರ್ತ ನಿಗಧಿಯಾಗಿದೆ. ಇಂದ್ರ ಧನುಷ್ ಚಿತ್ರದ 23 ವರ್ಷದ ಬಳಿಕ ಮನೋಹರ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಸತೀಶ್ ಗೌಡ ನಾಯಕನಾಗುವ ಜೊತೆಗೆ ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಜಾನ್ಹವಿ ಕಾಣಿಸಿಕೊಂಡಿದ್ದಾರೆ.
ಚಿತ್ರ ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ಪತ್ರಿಕಾಗೋಷ್ಢಿಯಲ್ಲಿ ಮಾಹಿತಿ ನೀಡಿದ ನಿರ್ದೇಶಕ ವಿ.ಮನೋಹರ್, ಶುದ್ದ ಹಾಸ್ಯದ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲಾಗಿದೆ. ಡಬ್ಬಲ್ ಮೀನಿಂಗ್ ಇಲ್ಲ. ಮನೆ ಮಂದಿ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ ದರ್ಬಾರ್.
ಚಿತ್ರದಲ್ಲಿ ನಾಯಕನಿಗೆ ಹುಡುಗರು ಸಮಯ ವ್ಯರ್ಥ ಆಗುವುದನ್ನುಇಷ್ಟಪಡದವ.ಈ ಕಾರಣಕ್ಕಾಗಿಯೇ ಆತ ಈ ರೀತಿಯ ಕೆಲಸದಲ್ಲಿ ಭಾಗಿಯಾದವನಿಗೆ ಪಾಠ ಕಲಿಸುತ್ತಾನೆ. ಇದರಿಂದ ಊರ ಮಂದಿ ಈತನಿಗೆ ಪಾಠ ಕಲಿಸಲು ಮುಂದಾಗುತ್ತಾರೆ. ರಾಜಕೀಯದ ಹಿನ್ನೆಲೆ ಚಿತ್ರದಲ್ಲಿದೆ. ಮನೋಹರ್ ಪೆದ್ದನ ರೀತಿ ಕಾಣ್ತಾರೆ ,ಹಾಸ್ಯ ಮಾಡಲು ಬರುತ್ತದಾ ಎನ್ನುವರಿಗೆ ಚಿತ್ರ ಉತ್ತರವಾಗಲಿದೆ ಎಂದರು.
ನಾಯಕ,ನಿರ್ಮಾಪಕ ಸತೀಶ್, ನಾಯಕ ಚಿತ್ರದಲ್ಲಿ ನೈತಿಕ ಪೊಲೀಸ್ ಗಿರಿಯ ಪಾತ್ರ. ರಾಜ್ಯದ ವಿವಿಧ ಭಾಗದಲ್ಲಿ ಪ್ರಚಾರ ಮಾಡಿದ್ದೇವೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಇಲ್ಲ.ಕುಟುಂಬ ಸಮೇತ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.ಯಾವ ಪಾತ್ರಕ್ಕೆ ಯಾರು ಬೇಕು ಎನ್ನುವುದನ್ನು ಆಯ್ಕೆಮಾಡಿದ್ದೇವೆ. ರಿಯಲ್ ಕಾಮಿಡಿ ಇದೆ ಎಂದು ಹೇಳಿದರು.
ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮುಂದಿನ ವಾರ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಮನೆ ಮಂದಿಯಲ್ಲಾ ಕುಳಿತು ಯಾವುದೇ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಇದು ಎಂದು ಹೇಳಿದರು
ನಾಯಕಿ ಜಾನ್ಹವಿ ಎಲ್ಲಾ ಪಾತ್ರಗಳು ಚೆನ್ನಾಗಿ ಮೂಡಿ ಬಂದಿದೆ. ಹಳ್ಳಿಯಲ್ಲಿಯೇ ಇದ್ದೇವೆ ಎನ್ನುವ ಅನುಭವ ಚಿತ್ರ ನೀಡಲಿದೆ ಎಂದು ಹೇಳಿಕೊಂಡರು.