ಪರಿಶಿಷ್ಟ ಸಮುದಾಯಗಳ ಮೀಸಲಾತಿ ವರ್ಗಿಕರಣದಂತೆ ವಿಶ್ವಕರ್ಮ ಸಮುದಾಯಕ್ಕೂ ನೀಡಲು ದೇವೇಂದ್ರ ದೇಸಾಯಿ ಕಲ್ಲೂರ್ ಒತ್ತಾಯ

ಕಲಬುರಗಿ,ಮಾ.27: ಕಾಯಕ ಸಮುದಾಯಗಳಾಗಿ ಗುರುತಿಸಿಕೊಂಡಿರುವ ಅನೇಕ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಲ್ಲಿ ವಿಶ್ವಕರ್ಮ ಸಮುದಾಯಗಳು ಇವೆ. ಆದರೆ ಆಡಳಿತ ನಡೆಸುವ ಸರ್ಕಾರಗಳು ವಿಶ್ವಕರ್ಮ ಸಮುದಾಯಗಳಿಗೆ ಸರಿಯಾದ ಸವಲತ್ತುಗಳು ಹಾಗೂ ಆರ್ಥಿಕ ಬೆಂಬಲ ನೀಡದೇ ಇರುವುದರಿಂದಾಗಿ ಇಂದು ವಿಶ್ವಕರ್ಮ ಸಮುದಾಯಗಳ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರವು ಪರಿಶಿಷ್ಟ ಸಮುದಾಯಗಳಿಗೆ ವರ್ಗಿಕರಣ ಮೀಸಲಾತಿ ಘೋಷಣೆ ಮಾಡಿದಂತೆ ವಿಶ್ವಕರ್ಮ ಸಮುದಾಯಕ್ಕೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರತ್ಯೇಕ ವರ್ಗಿಕರಣ ಮೀಸಲಾತಿ ನೀಡಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರು ಇಂದು ಜನಪರ ಕಾಳಜಿಯ ಸರ್ಕಾರವಾಗಿ ಗುರುತಿಸಿಕೊಂಡಿದೆ. ಎಲ್ಲಾ ಸಮುದಾಯಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವುದರೊಂದಿಗೆ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಮೀಸಲಾತಿಯಲ್ಲಿ ವರ್ಗಿಕರಣದ ದಶಕದ ಹೋರಾಟಕ್ಕೆ ಐತಿಹಾಸಕ ತೀರ್ಪು ನೀಡಿದ್ದು ಸ್ವಾಗತಾರ್ಹವಾಗಿದೆ. ಮೀಸಲಾತಿಯು ಒಂದೇ ಸಮುದಾಯಗಳಿಗೆ ಹೆಚ್ಚಿನ ಸವಲತ್ತುಗಳು ಸಿಗುತ್ತಿವೆ ಎನ್ನುವ ಮಾತನ್ನು ಎತ್ತಿಹಿಡಿದು ವರ್ಗಿಕರಣ ಮೀಸಲಾತಿಗೆ ನಾಂದಿ ಹಾಡಿದ್ದು ಸ್ವಾಗತರ್ಹವಾಗಿದೆ.
ಹಿಂದುಳಿದ ಸಮುದಾಯಗಳಲ್ಲಿ ಕಾಯಕ ಪ್ರಿಯರು ಆಗಿರುವ ವಿಶ್ವಕರ್ಮ ಸಮುದಾಯಗಳ ಅನೇಕ ಪಂಗಡಗಳನ್ನು ಹೊಂದಿದೆ. ಹಿಂದುಳಿದ ಪಟ್ಟಿಯಲ್ಲಿ ಮಾತ್ರ ಇದೆ. ಆದರೆ ಸರ್ಕಾರದ ಸವಲತ್ತುಗಳಿಂದ ಸಂಪೂರ್ಣವಾಗಿ ಹಿಂದುಳಿದೆ. ತಮ್ಮ ಕಾಯಕದಲ್ಲಿ ಸದಾ ನಿರತರಾಗಿರುವ ವಿಶ್ವಕರ್ಮ ಸಮುದಾಯಗಳು ಇಂದು ಆರ್ಥಿಕವಾಗಿ ಅತ್ಯಂತ ಹಿಂದುಳಿದಿವೆ. ಉದಾರಿಕರಣ, ಆಧುನಿಕರಣ, ಜಾಗತಿಕರದ ಮಾರುಕಟ್ಟೆಯ ನೀತಿಯಿಂದಾಗಿ ಇಂದು ಸಣ್ಣ ಸಣ್ಣ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ವಿಶ್ವಕರ್ಮ ಸಮುದಾಯಗದ ಕೆಲಸಗಾರರು ಆರ್ಥಿಕವಾಗಿ ಅತ್ಯಂತ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಸಮುದಾಯಗಳಿಗೆ ವರ್ಗಿಕರಣ ಮೀಸಲಾತಿಯಂತೆ ವಿಶ್ವಕರ್ಮ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿಯನ್ನು ಸರ್ಕಾರ ಘೋಷಣೆ ಮಾಡಬೇಕು. ಸರ್ಕಾರ ಸಕಾರತ್ಮಕವಾಗಿ ಸ್ಪಂಧಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ಮಾಡುವುದರೊಂದಿಗೆ ಈ ಕುರಿತು ನ್ಯಾಯಾಲಯದಲ್ಲಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲು ಅನಿವಾರ್ಯತೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ದೇವೇಂದ್ರ ದೇಸಾಯಿ ಕಲ್ಲೂರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.