ಪರಿಶಿಷ್ಟ ವ್ಯಕ್ತಿ ನಿವೇಶನಗಳ ಕಬ್ಜೆ ವಿರೋಧಿಸಿ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ.ಜೂ.2: ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರ ನಿವೇಶನಗಳನ್ನು ಅಕ್ರಮವಾಗಿ ಕಬ್ಜೆ ಮಾಡಿಕೊಂಡಿದ್ದನ್ನು ಖಂಡಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬುಧವಾರ ನಗರ ಪೋಲಿಸ್ ಆಯುಕ್ತರ ಕಚೇರಿಯ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ನಗರ ಪೋಲಿಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ, ನಗರದ ಬಡೇಪೂರ್ ಗ್ರಾಮದಲ್ಲಿರುವ ಸರ್ವೆ ನಂ: 120/1 ಇದ್ದು, ಪ್ಲಾಟ್ ನಂ. 5 ಮತ್ತು 6 ಪ್ಲಾಟ್‍ಗಳನ್ನು ಮನ್ಸಬ್‍ದಾರ ಲೇಔಟ್‍ನಲ್ಲಿ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಪರಿಶಿಷ್ಟರ ಎರಡು ನಿವೇಶನಗಳನ್ನು ತಮ್ಮ ಕಬ್ಚೆಗೆ ತೆಗೆದುಕೊಂಡಿದ್ದಾರೆ, ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬ್ಜೆ ಮಾಡಿಕೊಂಡಿರುವ ಖಲೀಮುದ್ದೀನ್ ಎಂಬಾತನ ವಿರುದ್ಧ ಕ್ರಮಕೈಗೊಂಂಡು ಪರಿಶಿಷ್ಟ ವ್ಯಕ್ತಿಗೆ ನ್ಯಾಯ ಒದಗಿಸಿಬೇಕೆಂದು ಒತ್ತಾಯಿಸಿದರು.
ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಫರತಾಬಾದ್ ಅವರ ನೇತೃತ್ವದಲ್ಲಿ ಪೋಲಿಸ್ ಆಯುಕ್ತರ ಕಚೇರಿ ಎದುರುಗಡೆ ನಡೆದ ಪ್ರತಿಭಟನೆಯಲ್ಲಿ ದಲಿತ ಸೇನೆಯ ಜಿಲ್ಲಾಧ್ಯಕ್ಷ ಡಿ.ಕೆ. ಮದನಕರ್, ಮಹ್ಮದ್ ಯಾಕುಬ್ ಗಂಗಾನಗರ, ಮಂಜುನಾಥ್ ಎಸ್. ಭಂಡಾರಿ, ಮಲ್ಲಿಕಾರ್ಜುನ್ ನೀಲೂರ್ ಮುಂತಾದವರು ಪಾಲ್ಗೊಂಡಿದ್ದರು.