ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿ ಸರಕು ಸಾಗಾಣಿಕೆ ವಾಹನ ವಿತರಿಸಿದ ಡಿಸಿಎಂ ಲಕ್ಷ್ಮಣ ಸವದಿ

ಅಥಣಿ :ಮಾ.30: ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕರನ್ನು ಸಬಲೀಕರಣಗೊಳಿಸಲು ಸರ್ಕಾರ ಅವರಿಗೆ ಸರಕು ಸಾಗಾಣಿಕೆ ವಾಹನವನ್ನು ನೀಡಿದೆ ಇದರಿಂದ ಅನೇಕ ಯುವಕರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು
ಅವರು ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಬೆಳಗಾವಿರವರ ಸಯುಕ್ತ ಆಶ್ರಯದಲ್ಲಿ 2019 – 20 ನೇ ಸಾಲಿನ ಬುಡಕಟ್ಟು ಉಪಯೋಜನೆ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮದಡಿ ಸರಕು ಸಾಗಾಣಿಕೆ ವಾಹನಗಳು
ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ 23 ಫಲಾನುಭವಿಗಳಿಗೆ ಸರಕು ಸಾಗಾಣಿಕೆ ವಾಹನಗಳ ಕೀ ಹಸ್ತಾಂತರಿಸಿ ಮಾತನಾಡುತ್ತಾ, ನಿರುದ್ಯೋಗಿಯಾಗಿ ಕುಟುಂಬ ನಿರ್ವಹಣೆಯಲ್ಲಿ ಕಷ್ಟ ಅನುಭವಿಸುತ್ತಿರುವ ಪರಿಶಿಷ್ಟ ವರ್ಗಗಳ ಕುಟುಂಬಗಳಿಗೆ ಸರ್ಕಾರದ ಈ ಯೋಜನೆಯಿಂದ ಸಾಕಷ್ಟು ಲಾಭವಾಗಲಿದೆ ಮತ್ತು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು
ಈ ವೇಳೆ ಅಶೋಕ ಲೈಲ್ಯಾಂಡ್ ಕಂಪನಿಯ ವಾಹನಗಳ ಅಧಿಕೃತ ಡೀಲರ್ ಆದ ಹೈಟೆಕ್ ಮೋಟಾರ್ ಕಂಪನಿ ಮಾಲೀಕ ಬಸವರಾಜ ತಂಗಡಿ ಮಾತನಾಡಿ, ಪರಿಶಿಷ್ಟ ವರ್ಗಗಳ ಯುವಕರಿಗೆ ನಮ್ಮ ಕಂಪನಿಯಿಂದ ಇಪ್ಪತ್ತಮೂರು ವಾಹನಗಳನ್ನು ನೀಡಿದ್ದು,ಅಥಣಿ ಪಟ್ಟಣದಲ್ಲಿ ನಮ್ಮ ಶೋರೂಮ್ ಇದ್ದು ತುರ್ತು ಪರಿಸ್ಥಿತಿಯಲ್ಲಿ 24/7 ವಾಹನ ರಿಪೇರಿ ಮಾಡುವ ಸೌಲಭ್ಯ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಬಡಿಗೇರ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ್, ಅಥಣಿ ಹೈಟೆಕ್ ಮೋಟಾರ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್ ಸಚಿನ್ ಪಾಟೀಲ್ ರಾಜೇಂದ್ರ ದೇಸಾಯಿ, ವಿನಯಕುಮಾರ ಬಾಳಿಕಾಯಿ, ರಾಜೇಶ್, ಹಾಗೂ ಮುಖಂಡರಾದ ಶಿವರುದ್ರಪ್ಪ ಗುಳಪ್ಪನವರ, ಅರುಣ ಬಾಸಿಂಗೆ, ಮಹಾಂತೇಶ ಠಕ್ಕಣ್ಣವರ, ಶ್ರೀಶೈಲ ನಾಯಕ, ಮುದಕಣ್ಣಾ ಶೇಗುಣಶಿ, ಮಹಾದೇವ ಬಿಸಲನಾಯಕ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಭೇದಿಸಲು ಸರ್ಕಾರ ಎಸ್ಐಟಿ ತಂಡ ರಚನೆ ಮಾಡಿದೆ, ಎಸ್ಐಟಿ ತಂಡಕ್ಕೆ ಸ್ವತಂತ್ರ ಹಾಗೂ ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸರ್ಕಾರ ಆದೇಶ ನೀಡಿದ್ದರಿಂದ ಸತ್ಯಾಸತ್ಯತೆಯು ಆದಷ್ಟು ಬೇಗನೆ ಹೊರ ಬರುತ್ತದೆ. ನಿನ್ನೆ ಗೃಹ ಸಚಿವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ.

         ಲಕ್ಷ್ಮಣ ಸವದಿ,
ಡಿಸಿಎಂ ಹಾಗೂ ಸಾರಿಗೆ ಸಚಿವ