ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಶಾಸಕರ ಭೇಟಿ

ಮಾನ್ವಿ,ಜೂ.೦೩-
ಪರಿಶಿಷ್ಟ ಪಂಗಡ ಸರ್ಕಾರಿ ವಸತಿ ನಿಲಯಗಳಲ್ಲಿ ಕಲುಷಿತ ನೀರು ಹಾಗೂ ಕಳಪೆ ಆಹಾರ ಸೇವನೆಯಿಂದಾಗಿ ಅಸ್ವಸ್ಥಗೊಂಡರುವ ಹಿನ್ನೆಲೆಯಲ್ಲಿ ಶಾಸಕ ಜಿ ಹಂಪಯ್ಯ ನಾಯಕ ಭೇಟಿ ನೀಡಿ ಅಧಿಕಾರಿ ಮಹಾಲಿಂಗಪ್ಪ ಇವರಿಗೆ ಕಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ಸಂಗಪೂರ ರಸ್ತೆಯಲ್ಲಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಲುಷಿತ ನೀರು ಹಾಗೂ ಕಳಪೆ ಆಹಾರ ಸೇವಿಸಿ ವಿದ್ಯಾರ್ಥಿ ತೀವ್ರ ಆಸ್ವಸ್ತನಾಗಿರುವ ಮಾಹಿತಿಯನ್ನು ಪಡೆದುಕೊಂಡ ಶಾಸಕ ಜಿ.ಹಂಪಯ್ಯನಾಯಕ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿನಿಲಯದಲ್ಲಿನ ಆವರಣದಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ.ಮಳೆಗೆ ವಸತಿ ನಿಲಯದ ಆವರಣದಲ್ಲಿ ಬಿದ್ದ ಮರವನ್ನು ಕೂಡಲೇ ತೇರವುಗೊಳ್ಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ತಯಾರಿಕೆಗಾಗಿ ಬಳಸುವ ಅಕ್ಕಿ, ಬೇಳೆಯನ್ನು ಪರಿಶೀಲಿಸಿ ಆಕ್ಕಿ ಮತ್ತು ಬೆಳೆ ಕಾಳುಗಳಿಗೆ ಹುಳ್ಳ ಬಿದ್ದಿದ್ದು ಇಂತಹ ಸಾಮಾಗ್ರಿಗಳನ್ನು ಆಹಾರ ತಾಯಾರಿಕೆಗಾಗಿ ಬಳಸಲಾಗುತ್ತಿರುವುದರಿಂದ ವಸತಿ ನಿಲಯದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮವಾಗಿ ಆಸ್ವಸ್ಥರಾಗುತ್ತಿದ್ದಾರೆ. ಕೂಡಲೇ ಇಂತಹ ಕಳಪೆ ಆಹಾರ ಸಾಮಾಗ್ರಿಗಳನ್ನು ಹಿಂತಿರುಗಿಸಿ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಅಡುಗೆ ತಯಾರಿಗೆ ಬಳಸುವಂತೆ ಹಾಗೂ ಕುಡಿಯುವುದಕ್ಕೆ ಶುದ್ದ ಕುಡಿಯುವ ನೀರನ್ನು ನೀಡ ಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾ.ಅಧಿಕಾರಿ ಮಹಾಲಿಂಗಪ್ಪ ಇಂಗಳದಾಳ್ ರವರಿಗೆ ಸೂಚಿಸಿದರು. ಹಾಗೂ ವಸತಿ ನಿಲಯದ ಆಡುಗೆಯವರಿಗೆ ವಿದ್ಯಾರ್ಥಿಗಳಿಗೆ ಮೇನುವಿನಂತೆ ಗುಣಮಟ್ಟದ ಆಹಾರವನ್ನು ತಯಾರಿಸಿ ನೀಡುವಂತೆ ತಿಳಿಸಿದರು.
ತೀವ್ರವಾಗಿ ಆಸ್ವಸ್ತ ಗೊಂಡ ಉಟಕನೂರು ಗ್ರಾಮದ ಬಸವನಗೌಡ ಎನ್ನುವ ವಸತಿ ನಿಲಯದ ವಿದ್ಯಾರ್ಥಿಯನ್ನು ಶಾಸಕರು ೧೦೮ ಅಂಬ್ಯುಲೇನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು.
ಈ ಸಂದರ್ಭದಲ್ಲಿ ಸಿರವಾರ ಹಾಗೂ ಮಾನ್ವಿಯ ತಹಸೀಲ್ದಾರ್ ಸುರೇಶವರ್ಮ, ತಾ.ಪಂಚಾಯಿತಿ ಇ.ಒ.ಎಂ.ಡಿ.ಸೈಯದ್ ಪಟೇಲ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ.ಡಿ ಕಂದಯ ಹಾಗೂ ಆಹಾರ ನಿರೀಕ್ಷಕರಾದ ಚರಣಸಿಂಗ್, ಅರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾ.ವಾಲ್ಮೀಕಿ ಮಹಾಸಭಾ ಅಧ್ಯಕ್ಷರಾದ ಹನುಮೇಶ ಸದಾಪುರ ಸೇರಿದಂತೆ ಇನ್ನಿತರರು ಇದ್ದರು.