ಪರಿಶಿಷ್ಟ ಜಾತಿ ಶೇ.50 ಮೀಸಲಾತಿ ಕೊಟ್ಟ ಮಹಾನಾಯಕ ಛತ್ರಪತಿ ಶಾಹು ಮಹಾರಾಜರು

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.28: ಛತ್ರಪತಿ ಶಾಹು ಮಹಾರಾಜರ 149ನೇ ಜಯಂತಿ ಕಾರ್ಯಕ್ರಮ ದಿ : 26-07-2023 ರಂದು ಡಾ. ಅಂಬೇಡ್ಕರ್ ಎಜ್ಯುಕೇಶನಲ್ ಅಸೋಸಿಯೇಶನ್‍ದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆ ಪಿ.ಯು. ಕಾಲೇಜ ಹಾಗೂ ಪದವಿ ಕಾಲೇಜ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಆಯುಷ್ಮಾನ ತುಕಾರಾಮ ಚಂಚಲಕರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಜಗತ್ತಿನಲ್ಲಿ ಛತ್ರಪತಿ ಶಾಹು ಮಹಾರಾಜರು ಪರಿಶಿಷ್ಟ ಜಾತಿಗೆ ಶೇ.50 ರಷ್ಟು ಮೀಸಲಾತಿ ಕೊಟ್ಟ ಮಹಾನ ನಾಯಕರು ಹಾಗೂ ಜಮೀನು ಹಕ್ಕು, ಕೆನೆಲ್ ನಿರ್ಮಾಣ, ರಸ್ತೆ ಬದಿ ಮರಗಿಡಗಳ ನೆಡುವಿಕೆ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆ, ಸಾಮೂಹಿಕ ಬೋಜನ ಹಾಗೂ ಕನಿಷ್ಠ ವ್ಯಕ್ತಿಗಳಾದ ಲಂಬಾಣಿ, ಕೊರಮ, ಕೊರಚ, ಗೊಲ್ಲರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇವರಿಗೆ ಆಮಂತ್ರಣ ನೀಡಿ ತನ್ನ ಮಗನ ಮದುವೆಯ ಮೆರವಣಿಗೆಯಲ್ಲಿ ಉತ್ತಮ ಸ್ಥಾನಮಾನ ನೀಡಿ ಗೌರವಿಸಿದರು. ಬರಗಾಲ ಬಿದ್ದಾಗ ಮನೆ ಮನೆಗೆ ಉಚಿತ ದವಸ ಧಾನ್ಯ ನೀಡಿದ್ದರು. ಇಂಧು ಕರ್ನಾಟಕ ಸರಕಾರ ಅಂದು ಮಾಡಿದ ಕೆಲಸ ಇಂದು ಮಾಡುತ್ತಿದೆ. ಉದಾ. 5 ರ್ಯಾರಂಟಿಗಳು ಅದೇ ರೀತಿ ನಾಲ್ವಡಿ ಕೃಷ್ಣರಾಜ ಒಡೆಯರವರು ಮೀಸಲಾತಿ ಕುರಿತು ಬಡವ ಬಲ್ಲಿದರ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಯಷ್ಮಾನ ರಾಜಶೇಖರ ಯಡಹಳ್ಳಿ ನಿವೃತ್ತ ಸುಪರಿಟೆಂಡೆಂಟ್ ಇಂಜೀನಿಯರ್ ಹಾಗೂ ಬುದ್ದವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷರು ವಿಜಯಪುರ ಇವರಿಗೆ ಸತ್ಕಾರ ಸಮಾರಂಭವನ್ನು ಸಂಸ್ಥೆ ಮುಖ್ಯಸ್ಥರಾದ ಆಯುಷ್ಮಾನ ತುಕಾರಾಮ ಚಂಚಲಕರವರು ಮಾಡಿದರು. ಅದೇ ರೀತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಯುಷ್ಮಾನ ರಂಗನಾಥ ಬತ್ತಾಸಿ ಅಂತರಾಷ್ಟ್ರೀಯ ನೃತ್ಯ ಕಲಾವಿದರಿಗೆ ಸನ್ಮಾನವನ್ನು ಸಂಸ್ಥೆಯ ಮುಖ್ಯಸ್ಥರು ಮಾಡಿದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಸಿಂಧೂಬಾಯಿ ತುಕಾರಾಮ ಚಂಚಲಕರ ಹಾಗೂ ವಿವಿಧ ಕಲಾವಿದರು ಮುಖ್ಯ ಗುರುಗಳಾದ ಎಸ್.ಆರ್. ಕಟ್ಟಿ, ಶ್ರೀಮತಿ ಜೆ.ಜೆ. ಅಂಜುಟಗಿ, ಶ್ರೀಮತಿ ರೇಷ್ಮಾ ತಾಳಿಕೋಟಿ, ಅಶ್ವಿನಿ ನಾಯಕ ಜಾಲಗೇರಿ, ಸಚೀನ ನಾಯಿಕ, ಶಾಲಾ ಕಾಲೇಜು ಮಕ್ಕಳು ಉಪಸ್ಥಿತರಿದ್ದರು.
ಪ್ರಾಚಾರ್ಯರಾದ ಶಶಿಕಾಂತ ಕಟ್ಟಿ ಸ್ವಾಗತಿಸಿದರು. ಎಸ್.ಆರ್. ಗುಡ್ಲೇನವರ ನಿರೂಪಿದರು.