ಪರಿಶಿಷ್ಟ ಜಾತಿ ಪ್ರಮಾಣ ನೀಡುವವರೆಗೂ ನಿರಂತರ ಹೋರಾಟ

ಶಿರಹಟ್ಟಿ,ಜು.21: ರಾಜ್ಯದಲ್ಲಿ ಬೇಡ ಜಂಗಮರ ಸಂಖ್ಯೆ ಹೆಚ್ಚು ಇದ್ದು, ಜನಾಂಗವು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಹಳಷ್ಟು ಹಿಂದೆ ಉಳಿದಿದ್ದು, ಆದ್ದರಿಂದ ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಠ ಜಾತಿಗೆ ಸೇರಿಸುವಂತೆ ನಿರಂತರ ಹೋರಾಟ ಮಾಡಲಾಗುವುದು ಎಂದು ಮುಖಂಡ ಈರಯ್ಯ ಲಕ್ಕುಂಡಿಮಠ ಅಗ್ರಹಿಸಿದರು.
ಅವರು ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಶಿರಹಟ್ಟಿ ತಾಲೂಕ ಬೇಡ ಜಂಗಮ ಸಮುದಾಯದ ಮುಖಂಡರು ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡುವವರೆಗೂ ನಿರಂತರ ಹೋರಾಟವನ್ನು ಮಾಡಲಾಗುವುದು ಎಂದು ಅಗ್ರಹಿಸಿ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿದರು.
ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಕೊಡಬೇಕೆಂಬುದು ಸಂವಿದಾನದಲ್ಲಿಯೇ ಇದ್ದು, ಪರಿಶಿಷ್ಠ ಜಾತಿ ಪ್ರಮಾಣ ಪತ್ರನೀಡುವವರೆಗೂ ನಿರಂತರ ಹೋರಾಟ ಮಾಡುತ್ತೇವೆ. ತಹಶೀಲ್ದಾರ ರು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಬೇಡ ಜಂಗಮ ಸಮುದಾಯದವರಿಗೆ ಪ.ಜಾ ಪ್ರಮಾಣ ಪತ್ರ ನೀಡಬೇಕೆಂದು ಅಗ್ರಹಿಸಿದರು.
ಈರಯ್ಯ ಕುಲಕರ್ಣಿ, ಪ್ರೇಮಾ ಲಕ್ಕುಂಡಿಮಠ, ರುದ್ರಮುನಿ ಪಾಟೀಲ್,.ಶಿವಯೋಗಿ ಮಠದ, ಕಾಶೀನಾಥಯ್ಯ ಹಿರೇಮಠ, ಶೇಖರಯ್ಯ ಹಿರೇಮಠ, ಜೆ.ಎಸ್. ಚನ್ನಾಪೂರಮಠ, ವಿರುಪಾಕ್ಷಯ್ಯ ಮಜ್ಜಿಗುಡ್ಡದಮಠ, ವೀರಭದ್ರಗೌಡ ಪಾಟೀಲ್, ಫಕ್ಕಿರಯ್ಯ ಮಲ್ಲಿವಾಡಮಠ, ಸಣ್ಣಬಸಯ್ಯ ಯಲಿಗಾರ, ಷಣ್ಮುಖ ನಂದಿವೇರಿಮಠ, ಫಕ್ಕಿರಸ್ವಾಮಿ ನಂದಿಬೇವೂರಮಠ, ಅನೀಲಕುಮಾರ ಜಂಗಮನಹಳ್ಳಿಮಠ, ಸಂತೋಷ ಹಿರೇಮಠೀರಯ್ಯ ಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.