ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ

ಅಥಣಿ: ಅ.30:ಪಟ್ಟಣದ ಪೆÇೀಲಿಸ್ ಸಮುದಾಯ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗಿತ್ತು.
ಅಥಣಿ, ಕಾಗವಾಡ, ಕುಡಚಿ, ರಾಯಬಾಗ, ಹಾರೂಗೇರಿ ಮತ್ತು ಐಗಳಿ ಪೆÇೀಲಿಸ್ ಠಾಣೆಗಳ ವ್ಯಾಪ್ತಿಯ ವಿವಿಧ ದಲಿತ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ತಹಶಿಲ್ದಾರ ಸುರೇಶ್ ಮುಂಜೆ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ನೇತೃತ್ವದಲ್ಲಿ ಕುಂದು ಕೊರತೆಗಳನ್ನು ಆಲಿಸಲಾಯಿತು. ಈ ವೇಳೆ ಮಾತನಾಡಿದ ದಲಿತ ಮುಖಂಡ ಮಹಾಂತೇಶ ಬಾಡಗಿ ಮಾತನಾಡಿ ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಆಯಾ ಗ್ರಾಮ ಪಂಚಾಯತಿಗಳ ಮುಂದೆ ಮೃತಪಟ್ಟವರ ಶವಸಂಸ್ಕಾರವನ್ನು ನೆರವೇರಿಸುವ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಈ ಹಿಂದೆ ಸಭೆಯಲ್ಲಿ ಅಥಣಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮನವಿ ಮಾಡಿದ್ದೆವು ಅದಕ್ಕೆ ಸ್ಪಂದಿಸಿದ ಪೆÇೀಲಿಸ್ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಆಸ್ಪತ್ರೆಗಳಲ್ಲಿ ಬೇಕಾ ಬಿಟ್ಟಿ ದರ ವಿಧಿಸಲಾಗುತ್ತಿದ್ದು ದರಪಟ್ಟಿಯನ್ನು ಬಹಿರಂಗವಾಗಿ ತೋರಿಸುವಂತೆ ಮಾಡಬೇಕು ಎಂದರು.

ಈ ವೇಳೆ ಬಸವರಾಜ ಕಾಂಬಳೆ ಮಾತನಾಡಿ ಅಥಣಿ ಪಟ್ಟಣದಲ್ಲಿ ಯುವಕರು ದಾರಿ ತಪ್ಪುವಂತಾಗಿದೆ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಯುವಜನತೆ ದಾರಿ ತಪ್ಪದಂತೆ ನೋಡಿಕೊಳ್ಳುವ ತುರ್ತು ಅಗತ್ಯ ಇದೆ ಎಂದರು.

ಈ ವೇಳೆ ಡಿವೈಎಸ್ಪಿ ಶ್ರೀಪಾದ ಜಲ್ದೆ ಮಾತನಾಡಿ ಸಂಭಂದಪಟ್ಟ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ತಂದು ಹಲವು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಲಾಗುವದು. ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಿದೆ. ಪೆÇೀಲಿಸ್ ಇಲಾಖೆ ಜನಸ್ನೇಹಿ ಇಲಾಖೆ ಎನ್ನುವದನ್ನು ಯಾರೂ ಕೂಡ ಮರೆಯಬಾರದು ಎಂದರು.
ಈ ವೇಳೆ ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ ಮಾತನಾಡಿ ಅಗ್ನಿ ಆಕಸ್ಮಿಕ, ಅಪಘಾತ, ಕಳ್ಳತನ, ದರೋಡೆಯಂತಹ ತುರ್ತು ಸಮಯದಲ್ಲಿ 112 ಕರೆ ಮಾಡಬೇಕು ಅಲ್ಲದೆ ಶಾಂತಿಯುತ ಸುಂದರ ಸಮಾಜದ ನಿರ್ಮಾಣಕ್ಕಾಗಿ ಪೆÇೀಲಿಸ್ ಇಲಾಖೆಯೊಂದಿಗೆ ಎಲ್ಲರ ಸಹಕಾರ ಮುಖ್ಯವಾಗಿದ್ದು ಮತ್ತು ಗಾಂಜಾ, ವಿಷಯ ನಮ್ಮ ಗಮನಕ್ಕೆ ತಂದದ್ದಿರಿ ಆದಷ್ಟು ಬೇಗನೆ ಗಾಂಜಾ ಮಾರಾಟ ಮಾಡುವವರನ್ನು ಅಂತರವನ್ನು ಪೆÇೀಲಿಸ್ ಇಲಾಖೆ ಹೆಡೆ ಮುರಿ ಕಟ್ಟುತ್ತದೆ. ಅನೈತಿಕ ಚಟುವಟಿಕೆಗಳು ಕಂಡು ಬಂದರೆ ಹತ್ತಿರದ ಪೆÇೀಲಿಸ್ ಠಾಣೆಗೆ ಮಾಹಿತಿ ರವಾನಿಸಬೇಕು ಎಂದರು.
ಈ ಸಂದರ್ಭದಲ್ಲಿ ಪೆÇೀಲಿಸ್ ಇಲಾಖೆ ಅಧಿಕಾರಿಗಳಾದ ಸಿಪಿಐ ಎಚ್. ಡಿ ಮುಲ್ಲಾ, ಶಿವಶಂಕರ ಮುಕರಿ, ಕೆ.ಎಸ್ ಹಟ್ಟಿ, ರಾಘವೇಂದ್ರ ಖೋತ, ಶಿವಾಜಿ ಪವಾರ, ಬಿ. ಎಮ್ ರಬಕವಿ,
ಈ ವೇಳೆ ಪುರಸಭೆ ಸದಸ್ಯ ಕಲ್ಲೇಶ ಮಡ್ಡಿ, ಶಶಿ ಸಾಳವೆ, ಮಹಾವೀರ ಐಹೊಳೆ, ರಾಜೇಂದ್ರ ಐಹೊಳೆ, ಮಹೇಂದ್ರ ರಾಜಿಂಗಳೆ, ಮಹೇಶ ಐಹೊಳೆ, ಮಂಜು ಹೊಳಿಕಟ್ಟಿ, ರಾಮ ಮರಳೇರ, ಅರುಣ ಮೇಲ್ಗಡೆ, ಶಶಿಕಾಂತ ಬಾಡಗಿ,
ಮಿಥೇಶ ಪಟ್ಟಣ, ಏಕನಾಥ ಕಾಂಬಳೆ, ಸೇರಿದಂತೆ ರಾಯಭಾಗ, ಅಥಣಿ, ಕುಡಚಿ, ಐಗಳಿ, ಕಾಗವಾಡ, ಹಾರೂಗೇರಿ ಪೆÇೀಲಿಸ್ ಠಾಣಾ ವ್ಯಾಪ್ತಿಯ ಹಲವು ಗ್ರಾಮಗಳ ದಲಿತ ಮುಖಂಡರು ಉಪಸ್ಥಿತರಿದ್ದರು.