ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣದಲ್ಲಿ ಮೃತರಾದ ಕುಟುಂಬಕ್ಕೆ ಚೆಕ್ ವಿತರಣೆ

ಶಹಾಬಾದ:ಜು.30:ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣದಲ್ಲಿ ಮೃತರಾದ ನಗರಸಭೆಯ ಮಾಜಿ ಅಧ್ಯಕ್ಷರಾದ ಗಿರೀಶ ಕಂಬಾನೂರ ಅವರ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶುಭ, ಸಹಾಯಕ ನಿರ್ದೇಶಕರಾದ ಚೇತನ ಗುರಿಕಾರ ಅವರು ಸುಮಾರು 4,12,500 ಮೊತ್ತದ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪಿ.ಶುಭ, ಪರಿಶಿಷ್ಟ ಜಾತಿ ದೌರ್ಜನ್ಯ ಪ್ರಕರಣದಲ್ಲಿ ಮೃತರಾದ ಕುಟುಂಬಕ್ಕೆ ಇಲಾಖೆ ವತಿಯಿಂದ ಸುಮಾರು 9 ಲಕ್ಷ ಮಂಜೂರಾತಿಯಾಗಿದ್ದು,ಅದರಲ್ಲಿ4,12,500 ಮೊತ್ತದ ಚೆಕ್ ನೀಡಲಾಗಿದೆ.ಉಳಿದ ಮೊತ್ತವನ್ನು ಅಂತಿಮ ವರದಿ ಬಂದ ಬಳಿಕ ನೀಡಲಾಗುತ್ತದೆ ಎಂದರು.

ನಗರಸಭೆಯ ಅಧ್ಯಕ್ಷ ಅಂಜಲಿ ಗಿರೀಶ ಕಂಬಾನೂರ, ನಗರಸಭೆಯ ಸದಸ್ಯ ಅವಿನಾಶ ಕಂಬಾನೂರ, ದೌರ್ಜನ್ಯ ಸಮಿತಿ ಸದಸ್ಯ ಮಲ್ಲಪ್ಪ ಹೊಸಮನಿ,ಗುರುಪಾದಪಲ್ಲಿ ನೆಲ್ಲಗಿ,ಪಿಐ ಸಂತೋಷ ಹಳ್ಳೂರ್, ರವಿಕುಮಾರ, ಕಲ್ಯಾಣಿ ಸೇರಿದಂತೆ ಇತರರು ಇದ್ದರು.