ಪರಿಶಿಷ್ಟರ ಕಾಲೊನಿಯಲ್ಲಿ ಡಿ ವೈಎಸ್ಪಿ ಮಾಸ್ಕ್ ಜಾಗೃತಿ ಜಾಥಾ

ಹರಿಹರ ಏ 27 ; ಜೀವ ಇದ್ದರೆ ಜೀವನ ಮಾಡಲು ಸಾಧ್ಯವಾಗುತ್ತದೆ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ದಾವಣಗೆರೆ ಉಪ ವಿಭಾಗದ ಅಧೀಕ್ಷಕ ನರಸಿಂಹ ವಿ ತಾಮ್ರಧ್ವಜ ಹೇಳಿದರು ಪರಿಶಿಷ್ಟರ ಕಾಲೊನಿಗೆ ಭೇಟಿ ನೀಡಿ ಸಮುದಾಯವಾದರೊಂದಿಗೆ ಮಾತನಾಡಿದ ಅವರು ಸುನಾಮಿ ಸುಂಟರಗಾಳಿಯಂತೆ ದಿನದಿನಕ್ಕೆ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ ದಿನನಿತ್ಯ ವೈರಸ್ ಸೋಂಕಿನ ಪ್ರಕರಣಗಳು ಸಾವುಗಳು ಹೆಚ್ಚಾಗುತ್ತಿವೆ ಜನರು ಜಾಗೃತರಾಗದೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ವೈರಸ್ ನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ ಆದ್ದರಿಂದ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಲಾಕ್  ಡೌನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು 
ಪ್ರತಿಯೊಬ್ಬರೂ ಅನಾವಶ್ಯಕವಾಗಿ ಹೊರಗಡೆ ತಿರುಗಾಡದೆ ಮನೆಯಲ್ಲೇ ಇದ್ದು  ವೈರಸ್  ಮುಕ್ತ ಮಾಡುವುದಕ್ಕೆ ಇಲಾಖೆಯೊಂದಿಗೆ ಕೈಜೋಡಿಸಬೇಕು ಪ್ರತಿಯೊಬ್ಬರು ಕೋ ವ್ಯಾಕ್ಸೀನ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು  ಸಾಮಾಜಿಕ ಅಂತರವನ್ನು ಕಾಪಾಡಿ ಮಾಸ್ಕ್ ಧರಿಸಿ ನಿಮ್ಮ ಮನೆಯ ಆವರಣದ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛತೆ ಕಾಪಾಡಿಕೊಂಡು ಉತ್ತಮ ಪರಿಸರ ನಿರ್ಮಾಣ ಮಾಡಿ ಸದೃಢ ಆರೋಗ್ಯವಂತರಾಗಿ ಎಂದು ಹೇಳಿದರು ನಂತರ ಮಹಾತ್ಮಾ ಗಾಂಧಿ ವೃತ್ತ ರಾಣಿ ಚನ್ನಮ್ಮ ವೃತ್ತ ಆಟೋರಿಕ್ಷಾ ಬಸ್ ಇತರೆ ವಾಹನಗಳಲ್ಲಿ ಪ್ರಯಾಣ ಮಾಡುವವರಿಗೆ ಮತ್ತು ಅಂಗಡಿ ಮುಗ್ಗಟ್ಟು ಗಳಲ್ಲಿ ವ್ಯಾಪಾರ ವಹಿವಾಟ ಮಾಡುವಂತವರಿಗೆ ಜಾಗೃತಿ ಮೂಡಿಸಿದರು ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ ಐ ಸುನಿಲ್ ಬಸರಾಜ ತೇಲಿ. ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ ರವಿಕುಮಾರ್ .ಎಎಸ್ ಐ ಅಣ್ಣೋಜಿರಾವ್ .ಹೆಡ್ ಕಾನ್ ಸ್ಟೆಬಲ್ ಡಿ ಟಿ ಶ್ರೀನಿವಾಸ್.ಶಿವಕುಮಾರ್ ಆಚಾರಿ .ಸತೀಶ್ ಟಿ ವಿ .ದ್ವಾರಕೇಶ್ .ಶಿವಪದ್ಮ .ಸಿದ್ದರಾಜು. ನಗರಸಭಾ ಸದಸ್ಯ ಪಿ ಎನ್  ವಿರುಪಾಕ್ಷಿ. ಮಾಜಿ ದೂಡಾ ಸದಸ್ಯ ನಿಜಗುಣ  .ಎಚ್ ನಾಗಭೂಷಣ್. ಶಂಕರಮೂರ್ತಿ .ಹುಲುಗಪ್ಪ .ಸಿ ನಾಗರಾಜ್. ಕೇಶವ ಕಂಚಿಕೇರಿ .ಎಂ ಎಸ್ ಶ್ರೀನಿವಾಸ್ .ಮಹೇಶ್. ಗುರುನಾಥ ಇಟಗಿ .ನಿಂಗಪ್ಪ .ಯುವಕರು ಹಿರಿಯ ಮುಖಂಡರು ಇದ್ದರು.