
ಔರಾದ್ : ನ.21:ಡಿಸೆಂಬರ್ 3ರಂದು ಬಸವಕಲ್ಯಾಣ ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮಕ್ಕೆ ಔರಾದ್ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಆಹ್ವಾನಿಸಿದರು.
ಶನಿವಾರ ಪಟ್ಟಣದ ನವಚೇತನ ಶಾಲೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಹತ್ತಾರು ಯೋಜನೆಗಳು ರೂಪಿಸಿ ಅನುಷ್ಠಾನಕ್ಕೆ ತಂದಿದ್ದು, ಈ ಭಾಗದ ವಿಕಾಸಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕ ಪರಿವಾರ ಮಿಲನ ಕಾರ್ಯಕ್ರಮ ಪ್ರಮುಖ ಹೆಜ್ಜೆಯಾಗಲಿದೆ.
ಅಂದು ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹಾಗೂ ಜಿಲ್ಲೆಯ ಪೂಜ್ಯರು ಭಾಗವಹಿಸಲಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರನ್ನು ಕರೆದುಕೊಂಡು ಬರುವಂತೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಔರಾದ್ ವಿಕಾಸ ಅಕಾಡೆಮಿ ಸಂಚಾಲಕ ಗುರುನಾಥ ವಟಗೆ, ಸಂಜೀವ ಶಟಕಾರ, ಮನ್ಮತಪ್ಪ ಹುಗ್ಗೆ, ಮಲ್ಲಿಕಾರ್ಜುನ ಟಂಕಸಾಲೆ, ಸಂಜೀವ ಕಂಠಾಳೆ, ಜಗದೇವಿ, ಶಿವರಾಜ ಶಟಕಾರ, ಜಗನ್ನಾಥ ಮೂಲಗೆ, ಬಸವರಾಜ ಶಟಕಾರ್, ಶಾಲಿವಾನ ಉದಗಿರೆ, ಸಂಜು ಮಧೋಳ ಸೇರಿದಂತೆ ಇನ್ನಿತರರಿದ್ದರು.