ಪರಿವರ್ತಕದಲ್ಲಿ ಬೆಂಕಿ: ವಿದ್ಯುತ್ ಕಡಿತ

ಸಿರವಾರ.ಮಾ.ಂ೪- ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದಲ್ಲಿ ೧೧೦/೧೧ ಕೆ.ವಿ ಉಪಕೇಂದ್ರದಲ್ಲಿ ೧೦ ಎಂ.ಎ ಪರಿವರ್ತಕದಲ್ಲಿ ಬೆಳಗ್ಗೆ ೬ ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಹೊತ್ತಿಹುರಿದಿದೆ, ಕೂಡಲೇ ಸ್ಟೇಷನ್ ಸಿಬ್ಬಂದಿಗಳು ಅರಕೇರಿ ಅಗ್ನಿಶಾಮಕ ಠಾಣೆಯವರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳಾದ ಹನುಮೇಶ ಸ.ರಾ.ಅ, ಪರಮೇಶ ಪ್ರ.ಅ.ಶಾ, ಚಾಲಕ ಮೀಯಾ, ಅಗ್ನಿಶಾಮಕರಾದ ಜಗದೀಶ, ನವನಾಥ ಬೆಂಕಿ ನಂದಿಸಿ ಮುಂದೆ ಆಗುವ ಅನಾಗುತವನ್ನು ತಪ್ಪಿಸಿದ್ದಾರೆ. ಸುಮಾರು ೧ ಕೋ. ಮೌಲ್ಯದ ಪರಿವರ್ತಕ(ಟಿ.ಸಿ) ನಷ್ಟವಾಗಿದೆ. ಸುಮಾರು ೪ ಗಂಟೆಗಳ ಕಾಲ ಆಲ್ಕೋಡ್ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್‌ನಲ್ಲಿ ವ್ಯತ್ಯಯವಾಗಿತು. ಬೆಂಕಿ ನಂದಿಸಿದ ನಂತರ ಮತ್ತೊಂದು ಪರಿವರ್ತಕದಿಂದ ವಿದ್ಯುತ್ ಸರಬರಾಜು ಮಾಡಲಾಗಿದೆ ಎಂದು ಸ್ಟೇಷನ್ ಎಇ ಮಲ್ಲಿಕಾರ್ಜುನ ತಿಳಿಸಿದ್ದಾರೆ.