
ಸಸ್ಪೆನ್ಸ್, ಥ್ರಿಲ್ಲರ್ ಹಾಗು ಕೊಲೆ ಸುತ್ತ ನಡೆವ ಕಥೆಯನ್ನು ಮುಂದಿಟ್ಟುಕೊಂಡು ನಿರ್ಮಾಣ ಮಾಡಿರುವ ಚಿತ್ರ “ಪರಿಮಳ ಡಿಸೋಜಾ “ ತೆರೆಗೆ ಬರಲು ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ಮತ್ತಿತರು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಡಾ.ಗಿರಿಧರ್, ಸಂಸಾರಿಕ ಕಥೆ .ಹಿಂದೂ ಕುಟುಂಬದ ಮನೆಗೆ ಕ್ರಿಸ್ಚಿಯನ್ ಹುಡುಗಿ ಸೊಸೆಯಾಗಿ ಬರುವ ಕಥನ. ಎಲ್ಲವೂ ಸಲೀಲು ಎನ್ನುವಾಗ ನಡೆದ ಘಟನೆಗೆ ತಿರುವಿಗೆ ಕಾರಣವಾಗುತ್ತದೆ.ಅದು ಏನು, ಅದರಿಂದ ಏನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥಾವಸ್ತು. ನಾಯಕ ಅಂತ ಯಾರು ಇಲ್ಲ ಕಥೆಯೇ ನಾಯಕ’ ಎಂದರು. ಹಿರಿಯ ನಟಿ ಭವ್ಯ `ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಸಿನಿಮಾ. ಸೆಪ್ಟೆಂಬರ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ ಬೆಂಬಲಿಸಿ ಎಂದರು.
ನಿರ್ಮಾಪಕ ಕಮ್ ನಟ ವಿನೋದ್ ಶೇಷಾದ್ರಿ ಮಾತನಾಡಿ ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರ ಮಾಡಿದ್ದೇನೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾ ಹಂದರ ಒಳಗೊಂಡ ಆಕ್ಷನ್, ಸೆಂಟಿಮೆಂಟ್ ಫ್ಯಾಮಿಲಿ ಮನರಂಜನೆ ಇರುವ ಕೌಟುಂಬಿಕ ಸಿನಿಮಾ. ಚಿತ್ರದಲ್ಲಿ ಒಟ್ಟು 107 ಕಲಾವಿದರು ನಟಿಸಿದ್ದಾರೆ’ ಎಂದರು.
ಕಲಾವಿದರಾದ ಕೋಮಲ ಬನವಾಸಿ, ಪೂಜಾ ರಾಮಚಂದ್ರ, ಸುನೀಲ್ ಮೋಹಿತ್, ರೋಹಿನಿ ಜಗನ್ನಾಥ, ಚಂದನಾ ಶ್ರೀನಿವಾಸ, ಶಿವಕುಮಾರ ಆರಾಧ್ಯ ಮತ್ತಿತರರು ಮಾಹಿತಿ ಹಂಚಿಕೊಂಡರು.