ಅಪರಿಚಿತ ವಾಹನ ಡಿಕ್ಕಿ: ದ್ವಿಚಕ್ರವಾಹನ ಸವಾರರಿಬ್ಬರ ಸಾವು

ಕಲಬುರಗಿ: ಏ.13: ಅಪರಿಚಿತ ವಾಹನವೊಂದು ದ್ವಿಚಕ್ರವಾಹನದ ಇಬ್ಬರು ಯುವಕರು ಸ್ಥಳದಲ್ಲಿಯೇ ಅಸುನೀಗಿದ ಘಟನೆ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಭಂಕೂರ್ ಬಳಿಯ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಸೋಮವಾರ ರಾತ್ರಿ ಸಂಭವಿಸಿದೆ.
ಮೃತರನ್ನು ನಜೀರ್ (28) ಹಾಗೂ ತೋಪಸಿಂಗ್(೨೬) ಅಸುನೀಗಿದ್ದು, ಶಹಾಬಾದ್ ನಗರ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.