ಪರಿಕ್ಷೆ ಒಂದು ಹಬ್ಬ ಸಂಭ್ರಮಿಸಿ :ಬಸವರಾಜ ಶರಭೈ

ಗುರುಮಠಕಲ:ಮಾ.2: ಶಾಲೆಯಲ್ಲಿ ನಿಮ್ಮ ಶಿಕ್ಷಕರ ಜೊತೆಗಿನ ಸಂಬಂಧವು ಬಹಾಳ ಮುಖ್ಯವಾದದ್ದು . ವಿಷಯದ ಕುರಿತು ಪರೀಕ್ಷೆ ಮೀರಿದ ಹೆಚ್ಚಿನ ಮಾಹಿತಿಯನ್ನು ಶಿಕ್ಷಕರಿಂದ ಸಂಪಾದಿಸ ಬಹುದು ಶಿಕ್ಷಕರ ಜೊತೆ ನಿಮ್ಮ ಉತ್ತಮವಾದ ಸಂಬಂಧ ನಿಮ್ಮ ಅಧ್ಯಯನದಲ್ಲಿ ತುಂಬಾ ಸಹಾಯ ಮಾಡುತ್ತದೆ. ನಾವು ಮುಂದೆ ನಮ್ಮ ಗುರಿಯನ್ನು ಸಾಧಿಸ ಬೇಕಾದರೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಿವೆಲ್ಲಾರು ಉತ್ತಮ ಅಂಕಗಳನ್ನು ಪಡೆಯಬೇಕು. ಗುರಿ ಇಲ್ಲದ ಜೀವನ ಶೂನ್ಯ ವಾದದ್ದು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ ಹೇಳಿದರು. ತಾಲೂಕಿನ ಚಂಡರಕಿ ಗ್ರಾಮ ಸರಕಾರಿ ಪ್ರೌಢ ಶಾಲೆಗೆ ಬೇಟಿ ನೀಡಿ ವಿಧ್ಯಾರ್ಥಿಗಳ ಅಭ್ಯಾಸ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಜೊತೆ ಪರೀಕ್ಷಾ ತಯಾರಿ ಕುರಿತು ಚರ್ಚಿಸಿದ ಅಧಿಕಾರಿಗಳು. ಪರಿಕ್ಷೆಯೆಂದರೆ ನಮ್ಮ ಜ್ಞಾನ, ಕುಶಲತೆ, ಮನೋಭಾವ ಮತ್ತು ಪರಿಸರ ಎಲ್ಲವು ಸೇರಿ ನಮ್ಮ ಗುರಿ ಮುಟ್ಟುವ ತನಕ ನಮ್ಮನ್ನು ಕರೆದೊಯ್ಯುವ ಅನುಭವ. ಇಂತಹ ಅನುಭವ ಪಡೆದು ಒಳ್ಳೆಯ ಹೆಸರು ಪಡೆದ ವಿಜ್ಞಾನಿಗಳ. ಅಧಿಕಾರಿಗಳ ಜೀವನದಲ್ಲಿ ಇದ್ದ ಸಮಸ್ಯೆಗಳು ಅವೆಲ್ಲ ವನ್ನು ಮೀರಿ ಸಾಧಿಸಿದ ಕತೆಗಳನ್ನು ಹೇಳುತ್ತಾ ಪಾಠ ಮಾಡಿದರು. ಮುಂದೆ ನಿಮ್ಮ ಗುರಿಯು ದೊಡ್ಡದಿರಲಿ ಯಾವುದೇ ವಿಷಯದ ಮೂಲ ಸ್ವರೂಪದ ವಿಷಯವನ್ನು ತಿಳಿದು ಕೊಂಡಾಗ ಅ ವಿಷಯದ ನಮಗೆ ಬಹು ಸುಲಭವಾಗಿ ಅರ್ಥವಾಗುತ್ತದೆ ಎಂದು ಹೇಳಿದರು. ಭಾರತ ದೇಶದ ಗತ ಚರಿತ್ರೆಯ ವಿಷಗಳನ್ನು ಚರ್ಚೆ ಮಾಡುತ್ತಾ ಓದಿರುವ ಪುಸ್ತಕದಲ್ಲಿರುವ ವಿಷಯಗಳು ನಮ್ಮ ಮಸ್ತಕದಲ್ಲಿ ಸದಾ ಇದ್ದಾಗ ಮಾತ್ರ ನಮ್ಮ ಮುಂದಿನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯನ್ನು ಕಾಣುತ್ತೇವೆ ಎಂದು ವಿಧ್ಯಾರ್ಥಿಗಳಿಗೆ ಅನೇಕ ಸಾದಕರ ಜೀವನ ಚರಿತ್ರೆಯ ಸಾಧನೆ ಗಳನ್ನು ತಿಳಿಸುವದರ ಜೊತೆಗೆ ಬಯ ಅನ್ನುವ ಭೂತ ಎಷ್ಟೇ ದೊಡ್ಡದಿದ್ದರು ಸಹ ಸಾದಿಸುವ ಚಲ ನಮ್ಮಲ್ಲಿ ಇದ್ದರೆ ಭಯ ಅನ್ನುವುದು ಕುಗ್ಗುತ್ತದೆ ಎಂದು ಹೇಳಿದರು. ಈವೇಳೆ ಮುಖ್ಯ ಗುರುಗಳು ಕೆ ಮೊಗುಲಪ್ಪ. ಪಂಚಾಯತ್ ರಾಜ್ ಇಲಾಖೆ ಬ್ರಹ್ಮಯ್ಯ. ವಿಧ್ಯಾರ್ಥಿಗಳು ಶಾಲಾ ಶಿಕ್ಷಕರು ಇದ್ದರು.