ಪರಾರಿಯಾಗಿಲ್ಲ ಹೊರಗೆ ಹೋಗಿದ್ದೆ

ಪಿಎಸೈ ಅಕ್ರಮ
ಅಫಜಲಪುರ,ಜ.೨೧-ಪಿ.ಎಸ್.ಐ. ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಕಳೆದ ಮಧ್ಯರಾತ್ರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿರೋ ಆರ್.ಡಿ. ಪಾಟೀಲ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಜನ ಭಯಸಿದರೆ, ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ಧೆ ಮಾಡುತ್ತೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಇಲ್ಲೇ ಇದ್ದೇನೆ. ಇ.ಡಿ ಅಧಿಕಾರಿಗಳು ಬಂದಾಗ ಅವರ ವಿಚಾರಣೆ ಎದುರಿಸಿದ್ದೇನೆ. ಇ.ಡಿ. ಅಧಿಕಾರಿಗಳು ಬಂದು ಹೋದ ಮೇಲೆ ನಾನು ಹೊರಗೆ ಹೋಗಿದ್ದೆ. ಆಗ ಸಿಐಡಿ ಅಧಿಕಾರಿಗಳು ಮನೆಗೆ ಬಂದಿದ್ದಾರೆ. ನಾನು ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದೇನೆ ಅನ್ನೋದು ಸುಳ್ಳು. ಸಿಐಡಿ ವಿರುದ್ಧ ನಡೆದುಕೊಳ್ಳಲು ಯಾರಿಂದಲು ಸಾಧ್ಯವಿ. ನಾನು ಈ ನೆಲದ ಕಾನೂನಿಗೆ ಗೌರವ ನೀಡುವ ಮನುಷ್ಯ. ರಾಜಕೀಯ ಕುತಂತ್ರದಿಂದ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಪಿ.ಎಸ್.ಐ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಸಹೋದರನನ್ನು ಸಿಲುಕಿಸಿದ್ದಾರೆ. ಸಮಾಜ ಸೇವೆ, ಚುನಾವಣೆಗೆ ಬರಬಹುದು ಅನ್ನೋ ಭಯದಿಂದ ಸಿಲುಕಿಸಿದ್ದಾರೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತು ಕೇಳಿದ್ದಾರೆ ಅವರ ಮಾತು ಕೇಳಿ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಸುಳ್ಳು ಆರೋಪಕ್ಕೆ ನಾನು ಬೆದರೋದಿಲ್ಲ. ಅಫಜಲಪುರ ಜನರ ಸೇವೆಗಾಗಿ ನಾನು ಸದಾ ಸಿದ್ದ ನನ್ನ ಅಭಿಮಾನಿಗಳು ಯಾರು ಭಯ ಪಡಬಾರದು ಜಾಮೀನಿನ ಮೇಲೆ ಬಂದ ಮೇಲೆ ಸಿಐಡಿ ತನಿಖೆಗೆ ಸಹಕರಿಸುತ್ತಿ ಅಂತ ಹೇಳುತ್ತಿದ್ದಾರೆ. ಆದರೆ ಇದೆಲ್ಲವು ಸುಳು. ರಾಜಕೀಯ ಕುತಂತ್ರದಿಂದ ಈ ಪ್ರಕಣರಣದಲ್ಲಿ ಸಿಲುಕಿಸಿದವರಿಗೆ ಹೇಳಲು ಬಯಸುತ್ತೇನೆ. ಇಂತಹ ಇನ್ನು ಹತ್ತು ಸುಳ್ಳು ಕೇಸ್ ಹಾಕಿದರೂ ನಾನು ಹೆದರೊಲ್ಲ. ನನ್ನ ಸಮಾಜಿಕ ಸೇವೆಯನ್ನು ನಿಲ್ಲಿಸಲ್ಲ ಎಂದಿದ್ದಾರೆ.