
ಕೋಲಾರ,ನ,೧೦- ನಗರದ ವಿದ್ಯಾರ್ಥಿ ಕಾರ್ತಿಕ್ ಸಿಂಗ್ ಕೊಲೆ ಪ್ರಕರಣದಲ್ಲಿ ತಲೆ ಮರೆಸಿ ಕೊಂಡಿದ್ದ ಅರೋಪಿಗಳಾದ ಸೋನು ಅಲಿಯಾಸ್ ಶ್ರೀನಿವಾಸ್, ಪ್ರಶಾಂತ್ ಹಾತಗೂ ಉದಯ ಕುಮಾರ್ ಎಂಬುವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದಿದ್ದು ಪೋಲಿಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಯ ಹಿನ್ನಲೆಯಲ್ಲಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ಐ.ಜಿ.ಪಿ. ರವೀಕಾಂತೇಗೌಡ ತಿಳಿಸಿದರು,
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಕಳೆದ ೧೫ ದಿನಗಳಲ್ಲಿ ಮಾಲೂರು, ಶ್ರೀನಿವಾಸಪುರ ಹಾಗೂ ಕೋಲಾರದಲ್ಲಿ ನಡೆದ ೩ ಪ್ರಕರಣಗಳಿಂದ ಸಾರ್ವಜನಿಕರಲ್ಲಿ ಆತಂಕ ಭಾವನೆ ಉಂಟಾಗಿತ್ತು, ಕೋಲಾರ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತ್ವರಿತವಾಗಿ ಕೊಲೆಗೆ ಕಾರಣರಾಗಿರುವ ಶೇ ೯೦ ರಷ್ಟು ಅರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು,
ಅಪ್ರಾಪ್ತ ವಯಸ್ಸಿನವರು ಕೊಲೆ ಮಾಡಿರುವ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಭೀಕರವಾಗಿ ಹತ್ಯೆ ಮಾಡಿರುವುದನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೀಡಿಯು ಹರಿಯ ಬಿಟ್ಟಿ ಭಯಬೀತಿಗೊಳಿಸಿದ ಅರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡೆಸಲಾಗಿದೆ ಎಂದ ಅವರು ಬಹಳಷ್ಟು ಕೊಲೆಗಳು ಪರಿಶೀಲನೆಯಲ್ಲಿ ವೈಷಮ್ಯ, ವೈಯುಕ್ತಿಕ ಕಾರಣಗಳಿಗೆ ಕೊಲೆಯಾಗಿರುವುದು ಹಳೆಯ ವೈಷಮ್ಯ, ಅಕ್ರಮ ಸಂಬಂಧ, ಕೌಟುಂಬಿಕ ಕಲಹ, ಅತ್ಯಾಚಾರ ಮಾಡಿ ಹತ್ಯೆ, ಸೇರಿದಂತೆ ೩೭ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ೩೬ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ೪ ಪ್ರಕರಣಗಳು ಪೂರ್ವ ಯೋಜಿತವಾಗಿದೆ ಎಂದು ವಿವರಿಸಿದರು.
ಕಳೆದ ೩ ದಿನಗಳಿಂದ ರೌಡಿ ಚಟುವಟಿಕೆಗಳ ವಿರುದ್ದ ೧೮ ಮಂದಿ ಅರೋಪಿಗಳನ್ನು ಗುರುತಿಸಲಾಗಿದೆ. ೨೨ ಮಂದಿಯನ್ನು ತನಿಖೆಯನ್ನು ಮಾಡಿದ್ದು ವಿಚಾರಣೆಯಲ್ಲಿ ೧೭ ಅರೋಪಿಗಳನ್ನು ಬಂಧಿಸಿದ್ದಾರೆ.೫ ಮಂದಿಯ ಪತ್ತೆಗೆ ಕ್ರಮ ಜರುಗಿಸಲಾಗಿದೆ. ಕಳೆದ ೬ ವರ್ಷದಲ್ಲಿ ೧೯೭ ರೌಡಿಗಳ ಮನೆಗಳನ್ನು ತಲಾಷೆ ನಡೆಸಲಾಗಿದೆ ಎಂದರು,
ಈ ಎಲ್ಲಾ ಪ್ರಕರಣಗಳನ್ನು ಕಡಿಮೆ ಅವಧಿಯಲ್ಲಿ ಪತ್ತೆ ಹಚ್ಚಿ ಅರೋಪಿಗಳನ್ನು ಬಂಧಿಸಲಾಗಿರುವುದು ಶ್ಲಾಘನೀಯ, ಅರೋಪಿಗಳ ಪತ್ತೆ ಹಚ್ಚಿ ಬಂಧಿಸಿದ ಇಲಾಖೆಯ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ೫೦ ಸಾವಿರ ಬಹುಮಾನ ಘೋಷಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಅಪರ ಜಿಲ್ಲಾಧಿಕಾರಿ ಭಾಸ್ಕರ್ ಹಾಗೂ ಕೆ.ಜಿ.ಎಫ್. ಎಸ್.ಪಿ. ಶಾಂತಾರಾಜು ಉಪಸ್ಥಿತರಿದ್ದರು.