ಪರಾಭವಗೊಂಡ ೧೬೦ ಕ್ಷೇತ್ರಗಳ ಗೆಲುವಿಗೆ ಬಿಜೆಪಿ ರಣತಂತ್ರ

ನವದೆಹಲಿ,ಏ.೧- ಲೋಕಸಭೆ ಚುನಾವಣೆ ಆರಂಭಕ್ಕೂ ಎರಡು ವರ್ಷಗಳು ಮುನ್ನ ಬಿಜೆಪಿ ಕಳೆದ ಬಾರಿ ಪರಾಭವಗೊಂಡಿದ್ದ ೧೬೦ ಕ್ಷೇತ್ರಗಳಲ್ಲಿ ಶತಾಯ ಗತಾಯ ಗೆಲ್ಲಲು ಬಿಜೆಪಿ ಸಂಕಲ್ಪ ಮಾಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ೩೭೦ ಗಡಿ ದಾಟುವ ಗುರಿಯನ್ನು ಬಿಜೆಪಿ ಹೊಂದಿದೆ.
ಮೊದಲ ಮತ್ತು ಎರಡನೇ ಹಂತದ ಚುನಾವಣೆಗೆ ಅಂತಿಮ ಸಿದ್ಧತೆ ನಡೆಯುತ್ತಿರುವ ನಡುವೆ ಬಿಜೆಪಿ ಸುಮಾರು ಎರಡು ವರ್ಷಗಳ ಹಿಂದೆ ಮುಂಬರುವ ಚುನಾವಣೆಯಲ್ಲಿ ೫೪೩ ಲೋಕಸಭಾ ಸ್ಥಾನಗಳ ಪೈಕಿ ೩೭೦ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ‘ಮಿಷನ್ ೩೭೦” ಗಳಿಸುವುದು ಕಷ್ಟಸಾದ್ಯ ಎಂದು ಅನೇಕ ರಾಜಕೀಯ ವಿಶ್ಲೇಷಕರೂ ಹೇಳಿದ್ದರೂ ಬಿಜೆಪಿ ೨೦೨೨ ರಲ್ಲಿ ೨೦೧೯ ರಲ್ಲಿ ಸೋತ ಅಥವಾ ಸ್ಪರ್ಧಿಸದಿದ್ದ ಪಕ್ಷ ೧೪೪ ಸ್ಥಾನಗಳನ್ನು ಗೆಲ್ಲಲು ಪಣತೊಟ್ಟಿದೆ. ಜೊತೆಗೆ ಪಕ್ಷದ ನಾಯಕತ್ವ ಈ ಸಂಖ್ಯೆಯನ್ನು ೧೬೦ ಕ್ಕೆ ಪರಿಷ್ಕರಿಸಿದೆ ಎಂದು ಹೇಳಲಾಗಿದೆ. ಬಿಜೆಪಿ ನೇತೃತ್ವದ ಎನ್ ಡಿಎ ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ನಂತರ, ಕೇಸರಿ ಪಕ್ಷ ನಿರಂತರವಾಗಿ ಹೆಚ್ಚಿನ ಚುನಾವಣಾ ಗುರಿ ನಿಗದಿಪಡಿಸಿದೆ. ಪಕ್ಷ ೨೦೧೪ ರಲ್ಲಿ ೨೮೨ ಸ್ಥಾನಗಳನ್ನು ಗಳಿಸಿತ್ತು ಮತ್ತು ೨೦೧೯ ರ ಹೊತ್ತಿಗೆ ಅದು ೩೦೩ ಸ್ಥಾನಗಳನ್ನು ಗೆಲ್ಲಲು ೨೧ ಸ್ಥಾನ ಹೆಚ್ಚಿಗೆ ಗೆದ್ದಿತ್ತು. ಈ ಬಾರಿ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶಹೊಂದಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಬಿಜೆಪಿ ೩೭೦ ಸ್ಥಾನಗಳಲ್ಲಿ ಗೆಲವು ಸಾಧಿಸುವ ಜೊತೆಗೆ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ೪೦೦ ಸ್ಥಾನಗಳ ಗುರಿಯಲ್ಲಿ ಕೆಲಸ ಮಾಡುತ್ತಿದೆ. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ೪೦೩ ಸ್ಥಾನಗಳನ್ನು ಗೆದ್ದಾಗ ಅಂತಹ ಏಕೈಕ ಉದಾಹರಣೆ ಮುಂದಿಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ಗೌಪ್ಯ ಮೂಲಗಳು ಹೇಳುವಂತೆ ಬಿಜೆಪಿ ಮೊದಲು ಶೇಕಡಾ ೫೦ ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಸ್ಥಾನಗಳ ಕಡೆಗೆ ಗಮನ ಹರಿಸಿದೆ. ೨೦೧೯ ರಲ್ಲಿ, ಈ ಸಂಖ್ಯೆಯು ೨೨೪ ಸ್ಥಾನಗಳಲ್ಲಿದೆ, ೨೦೧೪ ರಲ್ಲಿ ೫೦ ಶೇಕಡಾಕ್ಕಿಂತ ಹೆಚ್ಚು ಮತ ಹಂಚಿಕೆಯೊಂದಿಗೆ ಅದು ಗೆದ್ದಿದ್ದ ೧೩೬ ಸ್ಥಾನಗಳಿಂದ ಹೆಚ್ಚಳವಾಗಿದೆ. ಬಿಜೆಪಿ ೨೦೧೯ ರ ಲೆಕ್ಕಾಚಾರ ೧೯೮೪ ರಲ್ಲಿ ಕಾಂಗ್ರೆಸ್ ಸಾಧಿಸಿದ ಫಲಿತಾಂಶಕ್ಕಿಂತ ಎರಡನೇ ಸ್ಥಾನದಲ್ಲಿದೆ. ೫೦ ಕ್ಕಿಂತ ಹೆಚ್ಚು ಮತಗಳೊಂದಿಗೆ ೨೯೩ ಸ್ಥಾನಗಳ ಪಾಲು ಹೊಂದಿದೆ.
ರಾಜೀವ್ ಗಾಂಧಿ ಅವರು ೧೯೮೪ ರಲ್ಲಿ ಗೆದ್ದಿದ್ದ ೪೦೩ ಸ್ಥಾನಗಳಲ್ಲಿ, ೨೯೩ ಸ್ಥಾನಗಳಲ್ಲಿ ಮತ ಹಂಚಿಕೆ ಶೇಕಡಾ ೫೦ ಕ್ಕಿಂತ ಹೆಚ್ಚಿತ್ತು. ಈಗಾಗಲೇ ೨೨೪ ಸ್ಥಾನಗಳಲ್ಲಿ ಶೇಕಡಾ ೫೦ ರಷ್ಟು ಮತಗಳನ್ನು ಹೊಂದಿದ್ದೇವೆ, ಆದ್ದರಿಂದ ನಮ್ಮ ಕೆಲಸವನ್ನು ಕಡಿತಗೊಳಿಸಲಾಗಿದೆ, ನಾವು ಇನ್ನೂ ೬೯ ರಲ್ಲಿ ಕೆಲಸ ಮಾಡಬೇಕಾಗಿದೆ. ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.ಒಂದೂವರೆ ವರ್ಷಗಳ ಹಿಂದೆ “ದುರ್ಬಲ” ಎಂದು ಮೀಸಲಿಟ್ಟ ೧೬೦ ಸ್ಥಾನಗಳಲ್ಲಿ ಕನಿಷ್ಠ ೫೦ ಪ್ರತಿಶತ ಗೆಲ್ಲುವುದು. ಈ ಸ್ಥಾನಗಳನ್ನು ಗುರುತಿಸಿದ ನಂತರ, ಪಕ್ಷ ಹಲವಾರು ಚಟುವಟಿಕೆಗಳನ್ನು ಬೂತ್ ಬಲಪಡಿಸುವ ಕಸರತ್ತುಗಳನ್ನು ನಡೆಸಿದೆ ಜೊತೆಗೆ ಈ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ರಾಲಿ ಆಯೋಜಿಸಿದೆ.