ಪರಹಿತ ಬಯಸಿ ಬದುಕಿದವರೇ ಶರಣಬಸವರು

ಕಲಬುರಗಿ:ಆ.5:ಕಾಯಕ ಶುದ್ಧ ಜೀವನ ನಡೆಸಿ ಪರಹಿತ ಬಯಸಿ ಬದುಕಿದವರೇ ಶರಣರು ಎಂದು ನಿವೃತ್ತ ಪ್ರಾಚಾರ್ಯೆ ಪೆÇ್ರ.ನಿಂಗಮ್ಮ ಪತಂಗೆ ಹೇಳಿದರು.

ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ಸಂಸ್ಥಾನ ಶ್ರಾವಣಮಾಸದ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಶರಣಬಸವೇಶ್ವರ ಶೀವಲೀಲೆಗಳು ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು. ಯಾರ ಬದುಕಿನಲ್ಲಿ ಪರಮ ಜ್ಞಾನ ಹಾಸುಹೊಕ್ಕಾಗಿ ತುಂಬಿಕೊಂಡಿ ದೆಯೋ ಅವರೇ ಸಂತರು. ಅವರ ಬದುಕು ಅನುಕರಣೀಯ. ಅವರ ಚಿಂತನೆಗಳನ್ನು ಸ್ವಲ್ಪ ಮಟ್ಟಿಗಾದರೂ ನಮ್ಮಲ್ಲಿ ಅಳವಡಿಸಿಕೊಂಡರೆ ಅನನ್ಯ ಬದಲಾವಣೆ ಕಾಣಲು ಸಾಧ್ಯ ಎಂದರು.

ಪ್ರಾಪಂಚಿಕ ವಿಷಯಗಳಿಂದ ಮನುಷ್ಯ ಜರ್ಜರಿತನಾಗಿದ್ದಾನೆ. ಶಾಂತಿ, ನೆಮ್ಮದಿಗಾಗಿ ಪರಿತಪಿಸುತ್ತಿದ್ದಾನೆ. ಕಲಿ ಯುಗದಲ್ಲಿ ದೇವರನಾಮ ಮತ್ತು ಪುರಾಣ ಶ್ರವಣಕ್ಕೆ ಮಹತ್ವ ಕಲ್ಪಿಸಲಾಗಿದೆ. ಇದರಿಂದ ಖಂಡಿತ ಮಟ್ಟಿಗಾದರು ಮಾನಸಿಕ ನೆಮ್ಮದಿ ದೊರಕುತ್ತದೆ ಎಂದರು.

ವಿದ್ಯೆ, ಪದವಿ, ಸಂಪತ್ತು ಎಷ್ಟು ಗಳಿಸಿದರೂ ಅಂತರಂಗದಲ್ಲಿ ಜ್ಞಾನದ ಜ್ಯೋತಿ ಹೊತ್ತಿ ಉರಿಯದಿದ್ದರೆ ನಿರರ್ಥಕ. ಬಡವನಲ್ಲಿ, ಅನಕ್ಷರಸ್ಥನಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತಿದ್ದರೆ, ಪ್ರೀತಿಯ ಪ್ರಕಾಶ ಬೀರುತ್ತಿದ್ದರೆ ಅದು ಸಾರ್ಥಕ ಬದುಕು. ಇಂತಹ ಸಾರ್ಥಕ ಬದುಕು ನಿಮ್ಮದಾಗಿಸಿಕೊಳ್ಳಬೇಕಾದರೆ ಶರಣರ ಜೀವನ ಚರಿತ್ರೆ ಆಲಿಸಬೇಕು ಎಂದು ಸಲಹೆ ನೀಡಿದರು.

ನಿಷ್ಠೆ ಮತ್ತು ಪೂರ್ಣಶ್ರದ್ಧೆಯಿಂದ ಸಕಲವೂ ಸಿದ್ಧಿಯಾಗುತ್ತದೆ. ಈ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಮ್ಮೊಂದಿಗೆ ಇತರರ ನ್ನು ಪ್ರೀತಿಸಬೇಕು, ಇಂದ್ರೀಯಗಳ ದಾಸನಾಗಬಾರದು. ಶರಣಬಸವರು ಅನೇಕರ ಜೀವನದಲ್ಲಿ ಪವಾಡಗಳು ನಡೆಸಿದ್ದಾರೆ.ಅನೇಕರ ಬದುಕು ಉದ್ದಾರ ಮಾಡಿದ್ದಾರೆ.ತಮ್ಮ ಜೀವನದಲ್ಲೂ ಸಹ ಶರಣರ ಅನೇಕ ಲೀಲೆಗಳು ನಡೆದಿವೆ.ಶರಣಬಸವರಿಂದಲೇ ತಮ್ಮ ಜೀವನ ಪಾವನವಾಗಿದೆ ಎಂದರು.