ಪರವಾನಗಿ ಇಲ್ಲದ ಕಣ್ಣಿನ ದವಾಖಾನೆಗೆ ನೋಟಿಸ್ ಜಾರಿ

ಮುದ್ದೇಬಿಹಾಳ:ನ.1: ಪಟ್ಟಣದ ಸ್ಟೇಟ್ ಬ್ಯಾಂಕ ಹತ್ತಿರ ಇರುವ ಲಕ್ಷ್ಮೀ ನೇತ್ರ ತಪಾಸಣಾ ಕೇಂದ್ರವು ಸರ್ಕಾರದಿಂದ ಯಾವುದೆ ಪರವಾನಗಿ ಪಡೆಯದೆ ಸಾರ್ವಜನಿಕರ ಕಣ್ಣುಗಳನ್ನು ತಪಾಸಣೆ ನಡೆಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆ ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿಯವರು ಬೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನೋಟಿಸ್ ಜಾರಿ ಮಾಡಿದ್ದಾರೆ.
ಲಕ್ಷೀ ನೇತ್ರ ತಪಾಸಣಾ ಕೇಂದ್ರವು ಸರ್ಕಾರದಿಂದ ಮಾನ್ಯತೆ ಪಡೆಯದೆ ಸಾರ್ವಜನಿಕರ ಕಣ್ಣುಗಳನ್ನು ತಪಾಸಣೆ ನಡೆಸುತ್ತಿರುವದು ಕಾನೂನು ಬಾಹಿರವಾಗಿದ್ದು ಸದರಿ ನೇತ್ರ ತಪಾಸಣಾ ಕೇಂದ್ರದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೆ ದಾಖಲೆಗಳು ಇಲ್ಲದ ಕಾರಣ ನೋಟಿಸ್ ನೀಡಿ ಹತ್ತು ದಿನಗಳಲ್ಲಿ ಉತ್ತರ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಸತೀಶ ತಿವಾರಿಯವರು ತಿಳಿಸಿದ್ದಾರೆ.
ಲಕ್ಷ್ಮೀ ನೇತ್ರ ತಪಾಸಣಾ ಕೇಂದ್ರಕ್ಕೆ ವಿಜಯಪುರದ ತಜ್ಞ ವೈದ್ಯರು ಬೇಟಿ ನೀಡಿ ಸಾರ್ವಜನಿಕರ ಕಣ್ಣು ತಪಾಸಣೆ ನಡೆಸುತ್ತಾರೆ ಎಂದು ಬೋರ್ಡ ಹಾಕಿರುತ್ತಾರೆ. ಆದರೆ ಸದರಿ ಆಸ್ಪತ್ರೆಗೆ ಪ್ರತಿದಿನ ಬೇಟಿ ನೀಡುವದಿಲ್ಲ ಮತ್ತು ಲಕ್ಷ್ಮೀ ನೇತ್ರ ತಪಾಸಣಾ ಕೇಂದ್ರದಲ್ಲಿ ತಜ್ಞರಲ್ಲದವರು ಸಾರ್ವಜನಿಕರ ಕಣ್ಣು ತಪಾಸಣೆ ನಡೆಸುತ್ತಿರುವದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ.

ಯಾವುದಕ್ಕೂ ಸಾರ್ವಜನಿಕರು ಲಕ್ಷ್ಮೀ ನೇತ್ರತಪಾಸಣೆಗೆ ಕಣ್ಣುಗಳನ್ನು ತೋರಿಸುವ ತೆರಳುವ ಮುನ್ನ ಸದರಿ ನೇತ್ರತಪಾಸಣಾ ಕೇಂದ್ರದಲ್ಲಿ ತಜ್ಞವೈದ್ಯರು ಇರುವದನ್ನು ಖಚಿತಪಡಿಸಿಕೋಳ್ಳಬೇಕು ಮತ್ತು ನೇತ್ರ ತಪಾಸಣಾ ಕೇಂದ್ರಗಳು ಪರವಾನಗಿ ಪಡೆದಿರುವ ಕುರಿತು ಖಚಿತಪಡಿಸಿಕೋಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಜ್ಞರಲ್ಲದವರು ಕಣ್ಣುಗಳನ್ನು ತಪಾಸಣೆ ಮಾಡುವದು ಕಾನೂನು ಬಾಹಿರವಾಗಿದ್ದು ಈ ಕುರಿತು ಕೂಡಲೆ ಸಂಬಂದಿಸಿದ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಲಕ್ಷ್ಮೀ ನೇತ್ರತಪಾಸಣಾ ಕೇಂದ್ರವು ಆರೋಗ್ಯ ಇಲಾಖೆ ನೀಡುವ ಪರವಾನಗಿಯನ್ನು ಪಡೆದಿರುವದಿಲ್ಲ. ಆದಕಾರಣ ಬೇಟಿ ನೀಡಿ ನೋಟಿಸ್ ಜಾರಿ ಮಾಡಲಾಗಿದೆ ಹತ್ತು ದಿನದ ಒಳಗೆ ಉತ್ತರಿಸಲು ಕಾಲಾವಕಾಶ ನೀಡಲಾಗಿದೆ. ಸೂಕ್ತ ಉತ್ತರ ನೀಡದಿದ್ದಲ್ಲಿ ಮೇಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆದು ತಿಳಿಸಲಾಗುವದು. ಮೇಲಾಧಿಕಾರಿಗಳು ಕ್ರಮಜರುಗಿಸುತ್ತಾರೆ. ಯಾವುದಕ್ಕು ಸಾರ್ವಜನಿಕರು ಆಸ್ಪತ್ರೆಗಳಿಗೆ ಬೇಟಿ ನೀಡುವ ಮುನ್ನ ಮಾನ್ಯತೆ ಇರುವ ಕುರಿತು ತಿಳಿದುಕೋಳ್ಳುವದು ಅವಶ್ಯ-ಡಾ.ಸತೀಶ ತಿವಾರಿ ತಾಲೂಕಾ ಆರೋಗ್ಯಾಧಿಕಾರಿ

ಮನುಷ್ಯನಿಗೆ ಕಣ್ಣು ಎನ್ನುವದು ಬಹು ಮುಖ್ಯ ಅಂಗವಾಗಿದೆ ನುರಿತ ಹಾಗೂ ತಜ್ಞವೈದ್ಯರು ಕಣ್ಣುಗಳನ್ನು ತಪಾಸಣೆ ಮಾಡಬೇಕು ಪರವಾನಗಿ ಇಲ್ಲದೆ ಮತ್ತು ನುರಿತ ತಜ್ಞ ವೈದ್ಯರಿಲ್ಲದೆ ಆಸ್ಪತ್ರೆ ನಡೆಸುತ್ತಿರುವ ಲಕ್ಷ್ಮೀ ನೇತ್ರತಪಾಸಣಾ ಕೇಂದ್ರವನ್ನು ಕೂಡಲೆ ಬಂದ್ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವದು-ಪರಶುರಾಮ ಹುಬ್ಬಳ್ಳಿ ದಲಿತ ಮುಖಂಡರು.

ನಮ್ಮ ಇಲಾಖೆಯಲ್ಲಿ ನೋಂದಣಿ ಮಾಡಿಕೋಳ್ಳದೆ ಕಣ್ಣು ಹಾಗೂ ಹಲ್ಲಿನ ದವಾಖಾನೆ ನಡೆಸಲು ಬರುವದಿಲ್ಲ ಮುದ್ದೇಬಿಹಾಳ ಪಟ್ಟಣದಲ್ಲಿ ನೇತ್ರ ತಪಾಸಣೆ ನಡೆಸಲು ಯಾವುದೆ ಕೇಂದ್ರಗಳು ಅನುಮತಿ ಪಡೆದಿರುವದಿಲ್ಲ ಈ ಕುರಿತು ಸ್ಥಳಿಯ ಅಧಿಕಾರಿಗಳ ಜೋತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವದು- ಡಾ.ಮಹೇಂದ್ರ ಕಾಕ್ಸೆ ಜಿಲ್ಲಾ ಆರೋಗ್ಯಾಧಿಕಾರಿಗಳು