ಪರರ ಕಷ್ಟಕ್ಕೆ ನೆರವಾದ ಮನುಷ್ಯ ದೇವರಾಗುತ್ತಾನೆ:ಡಾ.ಮಳೆಯೋಗೀಶ್ವರ ಶ್ರೀಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು, ಅ.18: ಮನುಷ್ಯ ಸ್ವಾರ್ಥಿಯಾಗದೆ, ಪರರನ್ನು ಕಂಡು ಕರುಣೆ ಪಟ್ಟಾಗ ಮತ್ತು ಇನ್ನೊಬ್ಬರ ಕಷ್ಟಕ್ಕೆ ನೆರವಾದಾಗ ಅಂತಹ ಮನುಷ್ಯ ದೇವರಾಗುತ್ತಾನೆ, ಜಗತ್ತು ಅಂತರವನ್ನು ಪೂಜ್ಯ ಭಾವನೆಯಿಂದ ನೋಡುತ್ತೆ ಎಂದು ಮಾನಿಹಳ್ಳಿ ಪುರವರ್ಗ ಮಠದ ಡಾ.ಮಳೆಯೋಗೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಶಿರ್ವಚನ ನೀಡಿದರು.
ಪಟ್ಟಣದ ಜೆಪಿನಗದಲ್ಲಿ ಶ್ರೀ ಓಂ ಬನ್ನಿ ಮಹಾಕಾಳಿಕಾಂಬ ಸೇವಾ ಟ್ರಸ್ಟ್ ಹಾಗೂ ಯುವ ಸಮಿತಿ ಆಯೋಜಿಸಿದ 10ನೇ ವರ್ಷದ ಶರನ್ನವರಾತ್ರಿ ಎರಡನೇ ದಿನ ಮಂಗಳವಾರ ಪುರಾಣ ಪ್ರವಚನ ಮತ್ತು ಪೂಜಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ದೇವರು-ದೇವತೆಗಳ ಮಹಿಮೆ ಮತ್ತು ಚರಿತ್ರೆಯನ್ನು ಪುರಾಣ, ಪ್ರವಚನಗಳನ್ನು,ಕಥೆಗಳನ್ನು ಪಠಣಮಾಡುವುದರಿಂದ ಮತ್ತು ಆಲಿಸುವುದರಿಂದ ಮನುಷ್ಯನ ದೇಹ ಮತ್ತು ಮನಸ್ಸು ಶುದ್ಧಗೊಳ್ಳುತ್ತೆ ಹಾಗೂ ಮಾನವೀಯ ಮೌಲ್ಯಗಳು,ಸಜ್ಜನಿಕೆ ವೃದ್ಧಿಸುತ್ತವೆ ಈ ಹಿನ್ನೆಲೆ ಪ್ರತಿಯೊಬ್ಬರೂ ದೇವಿಯ ಸನ್ನಿಧಾನದಲ್ಲಿ ಕುಳಿತು ಶರನ್ನವರಾತ್ರಿ ದಿನಗಳವರೆಗೆ ಪುರಾಣ, ಪ್ರವಚನಗಳನ್ನು ಆಲಿಸಿ ದೇವಿಯಕೃಪೆಗೆ ಸರ್ವರೂ ಪಾತ್ರರಾಗಿ ಎಂದು ಹೇಳಿದರು.
ಮಾನಚಾರಿ ಬಡಿಗೇರ ಶಿಕ್ಷಕರು ಮತ್ತು ಅವರ ಸಂಗಡಿಗರು ಪುರಾಣ, ಪ್ರವಚನಗಳನ್ನು ಪಠಣಮಾಡಿದರು.
ದೇವಿಯ ಪೂಜಾ ಕಾರ್ಯಕ್ರಮವು ಸೋಮವಾರದಿಂದ ಪ್ರಾರಂಭಗೊಂಡಿದ್ದು,ಸಮಿತಿಯವರು ಪ್ರತಿದಿನ ಪುರಾಣ ಮತ್ತು ಪ್ರಸಾದ ವ್ಯವಸ್ಥೆ ಕೈಗೊಂಡಿದ್ದಾರೆ.
ಅ-21 ಸಂಜೆ ಕಳಸ ಮತ್ತು ಕುಂಭ ಮೇಳದೊಂದಿಗೆ ಗಂಗೆತರಲಾಗುತ್ತೆ, ಅ-22 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಬನ್ನಿಮಹಾಕಾಳಿಕಾಂಬ ಮಹಾತಾಯಿಗೆ ರುದ್ರಾಭಿಷೇಕ, ಕುಂಕುಮಾರ್ಚನ, ಬಿಲ್ವಾರ್ಚನ, ಪುಷ್ಪಾರ್ಚನ ಪೂಜಾ, ಗಣಸಹಿತಿ, ದುರ್ಗಾಹೋಮ, ನವಗ್ರಹ ಹೋಮ, ಶಾಂತಿ ಹೋಮ ಪೂಜಾ ಕಾರ್ಯಕ್ರಮ ಪೂರ್ಣಾಹುತಿ ಜರುಗತ್ತವೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ  ಆಚಮನಿ ಮಲ್ಲಿಕಾರ್ಜುನ, ಉಪಾಧ್ಯಕ್ಷ ಕೆ.ಕೊಟ್ರೇಶಪ್ಪ, ಕಾರ್ಯದರ್ಶಿ, ಸಿ.ಚಂದ್ರಪ್ಪ, ಖಜಾಂಚಿ ಗುರುಸ್ವಾಮಿ ಸೇರಿದಂತೆ ಬಸವೇಶ್ವರ ನಗರ, ಆಂಜನೇಯ ಬಡಾವಣೆ ಹಾಗೂ ಜೆಪಿ ನಗರದ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.