ಪರಮೇಶ್ ಅರವಿಂದ್ ನೇಮಕ

ಕೆ.ಆರ್.ಪೇಟೆ. ಜ.07: ಭಾರತೀಯ ಜನತಾ ಪಕ್ಷದ ಕೆ.ಆರ್.ಪೇಟೆ ನಗರ ಘಟಕದ ನೂತನ ಅಧ್ಯಕ್ಷರಾಗಿ ವಿದ್ಯುತ್ ಗುತ್ತಿಗೆದಾರ ಹೊಸಹೊಳಲು ಗ್ರಾಮದ ಹೆಚ್.ವಿ.ಮಂಜುನಾಥ ಅವರನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕು ಬಿಜೆಪಿ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಂಜುನಾಥ್‍ರವರಿಗೆ ನೇಮಕಾತಿ ಪತ್ರ ನೀಡಿ ಪಕ್ಷದ ಜವಾಬ್ದಾರಿ ನೀಡಲಾಯಿತು. ನಂತರ ಮಾತನಾಡಿದ ನೂತನ ಅಧ್ಯಕ್ಷ ಮಂಜುನಾಥ್ ಸಚಿವ ನಾರಾಯಣಗೌಡ ಅವರ ಅಭಿವೃದ್ದಿ ಕೆಲಸಗಳಿಂದಾಗಿ ತಾಲ್ಲೂಕಿನಾದ್ಯಂತ ಬಿಜೆಪಿ ಪಕ್ಷಕ್ಕೆ ಜನರು ವಲಸೆ ಬರುತ್ತಿದ್ದು ಇದನ್ನು ಗಮನಿಸಿ ನಾನು ಬಿಜೆಪಿ ಪಕ್ಷಕ್ಕೆ ಸೇರಿದ್ದೇನೆ. ನನಗೆ ಪಕ್ಷವು ವಹಿಸಿರುವ ನಗರ ಘಟಕದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಪಕ್ಷದ ಬಲವರ್ಧನೆಗಾಗಿ ಹಗಲಿರುಳು ಶ್ರಮಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಿದ್ದೇನೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಚಿವರ ಆಪ್ತ ಸಹಾಯಕ ದಯಾನಂದ್, ಮನ್ಮುಲ್ ನಿರ್ದೇಶಕ ಕೆÉ.ಜಿ.ತಮ್ಮಣ್ಣ, ಬಿಜೆಪಿ ಒಬಿಸಿ ಅಧ್ಯಕ್ಷ ಸಾರಂಗಿನಾಗರಾಜು, ಬಿಜೆಪಿ ತಾಲ್ಲೂಕು ಉಪಾದ್ಯಕ್ಷ ಸತೀಶ್, ಬೂಕನಕೆರೆ ಮಧು, ಗ್ರಾಪಂ ಸದಸ್ಯ ಕರ್ತೇನಹಳ್ಳಿ ಸುರೇಶ್, ಮುಖಂಡರಾದ ವರದರಾಜೇಗೌಡ, ಹೆಚ್.ಎನ್.ಯೋಗೇಶ್ ಸೇರಿದಂತೆ ಹಲವರು ಹಾಜರಿದ್ದರು.